ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಳಿನ್ ಕುಮಾರ್ ಕಟೀಲ್ ಆಡಿಯೋ; ತನಿಖೆಗೆ ಶಾಸಕರ ಒತ್ತಾಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 19; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ಸುದ್ದಿ ಜೊತೆಗೆ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ಸದ್ದು ಮಾಡುತ್ತಿದೆ.

ನಳಿನ್ ಕುಮಾರ್ ಕಟೀಲ್ ಮಾತನಾಡಿರುವುದು ಎನ್ನಲಾದ ಆಡಿಯೋ ವೈರಲ್ ಆದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

 ನಳಿನ್ ಕುಮಾರ್ ಆಡಿಯೋ ನಕಲಿ, ಕಾಂಗ್ರೆಸ್‌ನ ಷಡ್ಯಂತ್ರ: ರೇಣುಕಾಚಾರ್ಯ ಆರೋಪ ನಳಿನ್ ಕುಮಾರ್ ಆಡಿಯೋ ನಕಲಿ, ಕಾಂಗ್ರೆಸ್‌ನ ಷಡ್ಯಂತ್ರ: ರೇಣುಕಾಚಾರ್ಯ ಆರೋಪ

ವೈರಲ್ ಆಗಿರುವ ಆಡಿಯೋ ನಕಲಿಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಶಾಸಕರು ದೂರಿನಲ್ಲಿ ಮನವಿ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್‌ಗೆ ಸೂಕ್ತ ತನಿಖೆಗೆ ಮಾಡುವಂತೆ ಒತ್ತಾಯಿಸಿದ್ದಾರೆ.

 ಕಟೀಲ್ ಆಡಿಯೋ ವೈರಲ್: ಅಧಿಕಾರ ಹೋದರೆ ಗೂಟ ಹೋಯಿತು ಅಂದುಕೊಳ್ಳುತ್ತೇನೆ ಕಟೀಲ್ ಆಡಿಯೋ ವೈರಲ್: ಅಧಿಕಾರ ಹೋದರೆ ಗೂಟ ಹೋಯಿತು ಅಂದುಕೊಳ್ಳುತ್ತೇನೆ

 BJP MLAs Seeks Probe On Nalin Kumar Kateel Audio Clip

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮೂಡಬಿದರೆ ಶಾಸಕ ಉಮಾನಾಥ್ ಕೋಟ್ಯಾನ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ.

ಆಡಿಯೋ ಬಾಂಬ್: ನಳಿನ್ ಕುಮಾರ್ ಕಟೀಲ್ ಧ್ವನಿ ಪರೀಕ್ಷೆಗೆ ಒಳಗಾಗುವರೇ? ಆಡಿಯೋ ಬಾಂಬ್: ನಳಿನ್ ಕುಮಾರ್ ಕಟೀಲ್ ಧ್ವನಿ ಪರೀಕ್ಷೆಗೆ ಒಳಗಾಗುವರೇ?

ವೈರಲ್ ಆದ ಆಡಿಯೋ ನಕಲಿಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆಗೆ ಮಾಡಿ ವೈರಲ್ ಮಾಡಿದವರು ಮತ್ತು ನಕಲಿ ಆಡಿಯೋ ಸೃಷ್ಟಿಸಿದವರ ಬಂಧನ ಮಾಡಬೇಕು ಎಂದು ದೂರಿನಲ್ಲಿ ಶಾಸಕರು ಒತ್ತಾಯಿಸಿದ್ದಾರೆ.

ಏನಿದು ಆಡಿಯೋ?; "ರಾಜ್ಯದ ಹೊಸ ಮುಖ್ಯಮಂತ್ರಿಯಾಗುವವರು ದೆಹಲಿಯಿಂದ ಬರಲಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸಂಚಲನ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷರು ಸಹ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಆಡಿಯೋ ನಕಲಿಯಾಗಿದ್ದು, ಇದರ ಮೂಲಕ ಕಳಂಕ ತರುವ ಕೆಲಸ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

English summary
Dakshina Kannada BJP MLA's file complaint to Mangaluru police commissioner and demand for the probe on the audio clip of Karnataka BJP president Nalin Kumar Kateel. Audio clip went viral that hints leadership change in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X