ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ ಸರ್ಕಾರ; ಡಿಕೆಶಿ ವಾಗ್ದಾಳಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 31: ''ಕೊರೊನಾ ವಿಚಾರದಲ್ಲಿ ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನಿಡೋದಿಲ್ಲ. ನಾಲ್ಕು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಎರಡು ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಲೂಟಿ ಮಾಡಿದೆ. ಹೆಣಗಳ ಮೇಲೆ ಹಣ ಮಾಡಲು ಹೊರಟ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಶಾಪ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ. ಕೊರೊನಾಗಿಂತ ಭೀಕರ ಬಿಜೆಪಿಯ ಭ್ರಷ್ಟಾಚಾರ. ಸಾರ್ವಜನಿಕರ ದುಡ್ಡಿನ ಬಗ್ಗೆ ಪಾರದರ್ಶಕ ತನಿಖೆಯಾಗಲಿ'' ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಲೀಗಲ್ ನೋಟಿಸ್ ನೀಡಿದ ಬಿಜೆಪಿಸಿದ್ದರಾಮಯ್ಯ ಮತ್ತು ಡಿಕೆಶಿಗೆ ಲೀಗಲ್ ನೋಟಿಸ್ ನೀಡಿದ ಬಿಜೆಪಿ

"ಕೊರೊನಾದಲ್ಲಿ ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ಸಂಸ್ಕಾರ"

''ಬಿಜೆಪಿ ಮಂತ್ರಿಗಳು ಕೊರೊನಾ ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಪ್ರತಿ ಪಕ್ಷವಾಗಿರುವ ನಾವು ಕೊರೊನಾ ವಿಚಾರದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ. ಆದರೆ ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನೀಡುವುದಿಲ್ಲ. ಕೊರೊನಾದಲ್ಲಿ ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ಸಂಸ್ಕಾರ'' ಎಂದು ದೂರಿದರು. ಪಬ್ಲಿಕ್ ಅಕೌಂಟ್ಸ್ ಕಮಿಟಿ ಸಭೆಗೆ ಅವಕಾಶ ಮಾಡಿಕೊಡಿ. ಸಾರ್ವಜನಿಕರ ದುಡ್ಡಿನ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು. ಸರ್ಕಾರದ ಭಷ್ಟಾಚಾರದ ಬಗ್ಗೆ ಕೋರ್ಟ್ ಮೂಲಕ ತನಿಖೆಯಾಗಬೇಕು. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ನಡೆಸಬೇಕು'' ಎಂದು ಆಗ್ರಹಿಸಿದರು.

"ನನ್ನನ್ನು ಬಂಧಿಸಿ, ಆದರೆ ಹಗರಣದ ಬಗ್ಗೆ ತನಿಖೆ ಮಾಡಿ"

''ನನ್ನ ಮೇಲೆ ಇಡಿ, ಸಿಬಿಐ ಪ್ರಯೋಗ ಮಾಡಿದ್ದೀರಿ. ನನ್ನನ್ನು ಗಲ್ಲಿಗೆ ಹಾಕಲು ಹೊರಟಿದ್ದೀರಿ. ಸರ್ಕಾರದಿಂದ ಲೀಗಲ್‌ ನೊಟೀಸ್ ಬಂದಿದೆ. ನೋಟಿಸ್ ‌ಗೆ ಉತ್ತರ ನೀಡುತ್ತೇವೆ. ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆ ಇದೆ. ನೀವು ನನ್ನ ಮೇಲೆ ಕೇಸ್‌ ಮಾಡಿ, ಮಾನನಷ್ಟ ಮೊಕದ್ದಮೆ ಹೂಡಿ, ಬೇಕಾದರೆ ನನ್ನನ್ನು ಬಂಧಿಸಿ. ಆದರೆ ಹಗರಣದ ಬಗ್ಗೆ ತನಿಖೆ ಮಾಡಲು ಅವಕಾಶ ನೀಡಿ'' ಎಂದು ಹೇಳಿದರು.

ಯೋಗೇಶ್ವರ್ ಜೊತೆ ರಹಸ್ಯ ಮಾತುಕತೆ ಬಿಚ್ಚಿಟ್ಟ ಡಿಕೆಶಿ, ಯಡಿಯೂರಪ್ಪ ಟೆನ್ಷನ್!ಯೋಗೇಶ್ವರ್ ಜೊತೆ ರಹಸ್ಯ ಮಾತುಕತೆ ಬಿಚ್ಚಿಟ್ಟ ಡಿಕೆಶಿ, ಯಡಿಯೂರಪ್ಪ ಟೆನ್ಷನ್!

 ಸರ್ಕಾರದ ನಡೆ ಟೀಕಿಸಿದ ಡಿಕೆಶಿ

ಸರ್ಕಾರದ ನಡೆ ಟೀಕಿಸಿದ ಡಿಕೆಶಿ

''ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದ್ದು ಸರ್ಕಾರಕ್ಕೆ ಬೇಕಾದ ಕೆಲಸ ಮಾತ್ರ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಬಿಲ್‌ಗಳನ್ನು ನೀಡುತ್ತಾರೆ. ನಾಲ್ಕು ಲಕ್ಷ ಮೌಲ್ಯದ ವೆಂಟಿಲೇಟರ್, ಕಿಟ್‌ನ್ನು 18 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ನಾನು 1050 ರೂಪಾಯಿಗೆ ಥರ್ಮಲ್ ಸ್ಕ್ಯಾನ್‌ ಖರೀದಿ ಮಾಡಿದ್ದೇನೆ. 100ರೂಪಾಯಿಗೆ ಸ್ಯಾನಿಟೈಸರ್ ಖರೀದಿ ಮಾಡಿದ್ದೇನೆ. ಆದರೆ ನೀವು ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದೀರಿ'' ಎಂದು ಸರ್ಕಾರವನ್ನು ಟೀಕೆ ಮಾಡಿದರು.

"ಗಾಂಧಿ ಲೆಕ್ಕ ಬೇರೆ, ಕೃಷ್ಣ ಲೆಕ್ಕ ಬೇರೆ, ಸರ್ಕಾರದ ಲೆಕ್ಕ ಬೇರೆ"

''ಗಾಂಧಿ ಲೆಕ್ಕ ಬೇರೆ, ಕೃಷ್ಣ ಲೆಕ್ಕ ಬೇರೆ, ಸರ್ಕಾರದ ಲೆಕ್ಕ ಬೇರೆಯೇ ಇದೆ. ಸರ್ಕಾರದ ಕಿಟ್‌ಗಳಿಗೆ ಮೋದಿ ಚಿತ್ರ ಹಾಗೂ ಪಕ್ಷದ ಚಿಹ್ನೆ ಹಾಕಿದ್ದಾರೆ. ಕಿಟ್‌ಗಳಿಗೆ ಪಕ್ಷದ ಚಿಹ್ನೆ ಹಾಕಿದವರನ್ನು ದೂರು ದಾಖಲಿಸಿ ಬಂಧಿಸಲು ಆಗಿಲ್ಲ. ಹೀಗಿರುವಾಗ ಮತ್ತೆ ಯಾವ ರೀತಿಯ ಸಹಕಾರವನ್ನು ನೀವು ನಮ್ಮಿಂದ ಬಯಸುತ್ತಿದ್ದೀರಿ'' ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. ''ಆಟೋ/ಕ್ಯಾಬ್ ಚಾಲಕರಿಗೆ ಈವರೆಗೂ ಸಹಾಯಧನ ದೊರೆತಿಲ್ಲ. ಇನ್ನು ಯಾವಾಗ ಸಹಾಯಧನ ನೀಡುತ್ತೀರ" ಎಂದು ಪ್ರಶ್ನಿಸಿದರು.

English summary
"BJP Government is making on the dead bodies. We wont support this corruption" alleges KPCC President DK Shivakumar in mangaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X