ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೋಭಾ ಕರಂದ್ಲಾಜೆಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆ

|
Google Oneindia Kannada News

Recommended Video

Lok Sabha Elections 2019 : ಶೋಭಾ ಕರಂದ್ಲಾಜೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಕೈ ತಪ್ಪಲಿದ್ಯಾ?

ಉಡುಪಿ, ಮಾರ್ಚ್ 20:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಸಮರ ದೆಹಲಿ ಪಡಸಾಲೆ ತಲುಪಿದೆ.ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಜಯಪ್ರಕಾಶ್ ಹೆಗ್ಡೆ ನಡುವಿನ ಆಂತರಿಕ ಗುದ್ದಾಟ ಈಗ ತಾರಕಕ್ಕೇರಿದೆ.

ಶೋಭಾ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಯಾವ ಕಾರಣಕ್ಕೂ ಶೋಭಾ ಕರಂದ್ಲಾಜೆಯನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಕೆಲ ನಾಯಕರು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.ಇಬ್ಬರ ಜಗಳ ಮೂರನೆಯವನಿಗೆ ಲಾಭದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ಸ್ಪರ್ಧೆಯಿಂದ ಹಿಂದೆ ಸರಿದ ಶೋಭಾ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಯಶ್ಪಾಲ್ ಸುವರ್ಣ ಸ್ಪರ್ಧೆ?ಸ್ಪರ್ಧೆಯಿಂದ ಹಿಂದೆ ಸರಿದ ಶೋಭಾ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಯಶ್ಪಾಲ್ ಸುವರ್ಣ ಸ್ಪರ್ಧೆ?

ಆದರೆ ಅತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶೋಭಾ ಕರಂದ್ಲಾಜೆ ಪರವಾಗಿ ನಿಂತಿದ್ದಾರೆ ಎಂದು ಹೇಳಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಜನವಿರೋಧ ಕಟ್ಟಿಕೊಂಡಿರುವ ಶೋಭಾ ಕರಂದ್ಲಾಜೆ ಈ ಬಾರಿ ಸ್ಪರ್ಧಿಸಿದರೆ ಕಾರ್ಯಕರ್ತರು ಕೂಡ ಕೈ ಕೊಡುವ ಸಾಧ್ಯತೆ ಇದೆ.

ಹೀಗಾಗಿ ಪಕ್ಷದ ರಾಷ್ಟ್ರೀಯ ನಾಯಕರು ಸ್ಥಳೀಯ ವರದಿಗಳನ್ನು ಆಧರಿಸಿ ಹೊಸ ಅಭ್ಯರ್ಥಿಗಳ ಆಯ್ಕೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ದೆಹಲಿಯಲ್ಲಿ ನಿನ್ನೆ ತಡರಾತ್ರಿವರೆಗೂ ಈ ವಿಚಾರವಾಗಿ ದೀರ್ಘವಾದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಚರ್ಚೆ ಇಂದು ಕೂಡ ಮುಂದುವರೆಯಲಿದ್ದು ಸಂಜೆ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.ಮುಂದೆ ಓದಿ...

 ಜಯಪ್ರಕಾಶ್ ಹೆಗಡೆ ಹೆಸರು ಪ್ರಸ್ತಾಪ

ಜಯಪ್ರಕಾಶ್ ಹೆಗಡೆ ಹೆಸರು ಪ್ರಸ್ತಾಪ

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೀನುಗಾರಿಕಾ ಮುಖಂಡ ಯಶ್ಪಾಲ್ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿದ್ದು, ಹಿರಿಯ ನಾಯಕ ಜಯಪ್ರಕಾಶ್ ಹೆಗಡೆ ಅವರ ಹೆಸರು ಕೂಡ ಪ್ರಸ್ತಾಪವಾಗಿದೆ.

 ಬಿಜೆಪಿ ನಾಯಕರ ಲೆಕ್ಕಾಚಾರ

ಬಿಜೆಪಿ ನಾಯಕರ ಲೆಕ್ಕಾಚಾರ

ಜಯಪ್ರಕಾಶ್ ಹೆಗಡೆ ಅವರಿಗೆ ಟಿಕೆಟು ಸಿಗುವ ಸಾಧ್ಯತೆ ಕಡಿಮೆ. ಬಂಟ ಸಮುದಾಯಕ್ಕೆ ಈಗಾಗಲೇ ಜಿಲ್ಲಾಧ್ಯಕ್ಷ ಸ್ಥಾನ, ಐದು ಶಾಸಕ ಸ್ಥಾನಗಳು ಲಭಿಸಿದ್ದು ಇನ್ನಷ್ಟು ಸ್ಥಾನಗಳನ್ನು ಕೊಟ್ಟರೆ ಜಾತಿವಾರು ಲೆಕ್ಕಾಚಾರ ಏರುಪೇರಾಗುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ.

 ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೆರೆಮರೆಯಲ್ಲಿ ಸಿಟಿ ರವಿ ವಿರೋಧ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೆರೆಮರೆಯಲ್ಲಿ ಸಿಟಿ ರವಿ ವಿರೋಧ

 ಆಂತರಿಕ ಮೂಲಗಳ ಪ್ರಕಾರ

ಆಂತರಿಕ ಮೂಲಗಳ ಪ್ರಕಾರ

ಬಿಜೆಪಿ ವಿರುದ್ಧ ಬಿಲ್ಲವ ಮತ್ತು ಇತರ ಹಿಂದುಳಿದ ವರ್ಗಗಳು ತಿರುಗಿ ಬೀಳುವ ಅಪಾಯವೂ ಇದೆ. ಜೊತೆಗೆ ಜಯಪ್ರಕಾಶ್ ಹೆಗಡೆ ಬಗ್ಗೆ ಆರ್ ಎಸ್ಎಸ್ ಹಿರಿಯರು ವಿಶೇಷ ಒಲವು ಹೊಂದಿಲ್ಲ ಎನ್ನುವುದು ಎರಡನೇ ಸಂಗತಿ.ಯಶಪಾಲ್ ಸುವರ್ಣ ಆಯ್ಕೆ ಬಗ್ಗೆ ಕ್ಷೇತ್ರದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ದಿಲ್ಲಿಯಲ್ಲಿ ಇವರ ಹೆಸರು ಸಾಕಷ್ಟು ಬಾರಿ ಪ್ರಸ್ತಾಪವಾಗಿದೆ ಎಂದು ಬಿಜೆಪಿ ಆಂತರಿಕ ಮೂಲಗಳು ತಿಳಿಸಿವೆ.

ಯಶ್ ಪಾಲ್ ಕಣಕ್ಕಿಳಿಯುವ ಸಾಧ್ಯತೆ

ಯಶ್ ಪಾಲ್ ಕಣಕ್ಕಿಳಿಯುವ ಸಾಧ್ಯತೆ

ಇಡೀ ದೇಶದಲ್ಲಿ ಮೀನುಗಾರ ಸಮುದಾಯದವರಿಗೆ ಒಂದು ಸ್ಥಾನವನ್ನಾದರೂ ಕೊಡಬೇಕಾಗಿದ್ದು ಅದನ್ನು ಉಡುಪಿ ಯಿಂದಲೇ ಕೊಡುವ ಸಾಧ್ಯತೆ ಇದೆ.ಸಂಘ ಪರಿವಾರದ ಕಟ್ಟಾಳು ಎಂದೇ ಗುರುತಿಸಲ್ಪಟ್ಟಿರುವ ಯಶ್ ಪಾಲ್ ಬಗ್ಗೆ ಕಾರ್ಯಕರ್ತ ವಲಯದಲ್ಲಿ ಅಪಾರ ಬೆಂಬಲವಿದೆ. ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಕಣಕ್ಕಿಳಿಯುವುದು ಖಚಿತವಾದ ಹಿನ್ನೆಲೆಯಲ್ಲಿ ಅವರಿಗೆ ವಿರುದ್ಧವಾಗಿ ಮತ್ತೊಬ್ಬ ಮೀನುಗಾರ ಮುಖಂಡ ಯಶ್ ಪಾಲ್ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ

 ಮೋದಿ ವಿಶ್ವವಿದ್ಯಾಲಯದಲ್ಲಿ ಶೋಭಾ ಕರಂದ್ಲಾಜೆ ಫೇಲ್! ಮೋದಿ ವಿಶ್ವವಿದ್ಯಾಲಯದಲ್ಲಿ ಶೋಭಾ ಕರಂದ್ಲಾಜೆ ಫೇಲ್!

English summary
Ticket politics of Udupi- Chikkamagaluru Loksabha Constituency shifted to Delhi.MP Shobha Karandlaje ,Jayaprakash Hegde, Yashpal Suvarna are the aspirant of ticket. Sources said some BJP leaders expressed dissatisfaction about MP Shobha Karandlaje
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X