• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಭೀಕರ ಅಪಘಾತ, ನವ ದಂಪತಿ ದುರ್ಮರಣ

|

ಮಂಗಳೂರು, ಅಕ್ಟೋಬರ್ 27: ಬೈಕ್‌ ಮತ್ತು ಲಾರಿ ನಡುವೆ ಅಪಘಾತ ನಡೆದು ದಂಪತಿಗಳು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಸಂಜೆ ತೊಕ್ಕೊಟ್ಟು ಓವರ್ ಬ್ರಿಡ್ಜ್‌ ಸಮೀಪ ಈ ಅಪಘಾತ ನಡೆದಿದೆ. ಬೈಕ್‌ನಲ್ಲಿದ್ದ ಪ್ರಿಯಾ ಫೆರ್ನಾಂಡಿಸ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ರಾಯನ್ ಫೆರ್ನಾಂಡಿಸ್ (34) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು.

ಮಹಾನಗರದಲ್ಲಿ ರಸ್ತೆ ಅಪಘಾತ; ಬೆಂಗಳೂರಿಗೆ 3ನೇ ಸ್ಥಾನ

ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ, ಬೈಕ್ ಮೇಲೆ ಹರಿದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ದಂಪತಿಗಳು ಮೃತಪಟ್ಟಿದ್ದಾರೆ. ಭಾರಿ ಗಾತ್ರದ ಟ್ರಕ್ ಹರಿದಿದ್ದರಿಂದ ಬೈಕ್ ಜಖಂಗೊಂಡಿದೆ.

ರಸ್ತೆ ಅಪಘಾತ: ಮಾಜಿ ಶಾಸಕ ಸೇರಿ ಇಬ್ಬರ ಸಾವು

ಮಂಗಳೂರಿನ ಬಜಾಲ್ ಮೂಲದ ರಾಯನ್ ಫೆರ್ನಾಂಡಿಸ್ ಹತ್ತು ದಿನಗಳಿಂದ ಉಳ್ಳಾಲ ಮಾಸ್ತಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಯನ್ ಮತ್ತು ಪ್ರಿಯಾ ದಂಪತಿಗಳಿಬ್ಬರೂ ಕಂಕನಾಡಿ ಫಾದರ್ ಮುಲ್ಸರ್ಸ್ ಆಸ್ಪತ್ರೆಯ ಸಿಬ್ಬಂದಿಗಳು.

ಹಿರಿಯೂರಿನಲ್ಲಿ ಲಾರಿ, ಕಾರು ಅಪಘಾತ; ಒಂದೇ ಕುಟುಂಬದ ಮೂವರ ಸಾವು

ಮಂಗಳವಾರ ಆಸ್ಪತ್ರೆಯಿಂದ ಕೆಲಸ ಮುಗಿಸಿಕೊಂಡು ವಾಪಸ್ ಆಗುವಾಗ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪ್ರಿಯಾ ಮತ್ತು ರಾಯನ್ ಕೆಲವು ದಿನಗಳ ಹಿಂದೆಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಬಳಿಕ ರಸ್ತೆಯಲ್ಲಿ ಕೆಲವು ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಬೈಕ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

English summary
Couple killed in road accident near Thokkottu flyover in Mangaluru. Couple working in Father Muller hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X