ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಹೋಂಸ್ಟೇ ದಾಳಿ : ಪತ್ರಕರ್ತ ನವೀನ್ ಸೂರಿಂಜೆ ಖುಲಾಸೆ

|
Google Oneindia Kannada News

ಮಂಗಳೂರು, ಡಿಸೆಂಬರ್ 06: 2012ರ ಹೋಂಸ್ಟೇ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಪತ್ರಕರ್ತ, ಕಾರ್ಯಕರ್ತ ನವೀನ್ ಸೂರಿಂಜೆ ಅವರಿಗೆ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಶುಭ ಸುದ್ದಿ ಕೊಟ್ಟಿದೆ. ಈ ಪ್ರಕರಣದಿಂದ ನವೀನ್ ಅವರು ಖುಲಾಸೆಗೊಂಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ನಂ.44ರಲ್ಲಿದ್ದ ನವೀನ್ ಅವರ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಆದರೆ, ತಡವಾಗಿಯಾದರೂ ನ್ಯಾಯ ಲಭಿಸಿದೆ.

ನವೀನ್ ಸೂರಿಂಜೆ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ನವೀನ್ ಸೂರಿಂಜೆ ಮೇಲಿನ ಕ್ರಿಮಿನಲ್ ಕೇಸ್ ವಾಪಸ್

ಈ ಬಗ್ಗೆ ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ನವೀನ್ ಅವರು, ಇದೇನು ಖುಷಿಯ ವಿಷಯ ಎನ್ನಲಾರೆ, ನಮ್ಮ ವರದಿಗೆ ಬೆಲೆ ಸಿಗಬೇಕಿದೆ. ಆರೋಪಿಗಳಿಗೆ ಶಿಕ್ಷೆಯಾದಾಗ ಖುಷಿ ಎನ್ನಬಹುದು. ಸುದ್ದಿ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಪತ್ರಿಕಾ ಸ್ವಾತಂತ್ರ್ಯಕ್ಕೆ ಹರಣ ಎಂದು ಪ್ರತಿಭಟನೆಗಳು ನಡೆದ ಬಳಿಕ, ಸರ್ಕಾರ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಆದೇಶಿಸಿತ್ತು.

Big relief to Journalist Naveen Soorinje in Home stay attack case

2012ರ ಜುಲೈ 28ರಂದು ಹಿಂದೂ ಜಾಗರಣ ವೇದಿಕೆ ಸದಸ್ಯರು, ಪಡೀಲ್ ನಲ್ಲಿದ್ದ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ದಾಳಿ ನಡೆಸಿದ್ದರು. ಹೋಂಸ್ಟೇನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಈ ಘಟನೆಯನ್ನು ವರದಿ ಮಾಡಲು ಟಿವಿ ವರದಿಗಾರರಾಗಿ ಸೂರಿಂಜೆ ತೆರಳಿದ್ದರು.
ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಅದನ್ನೆಲ್ಲ ಸ್ವತಃ ಚಿತ್ರೀಕರಿಸಿದ್ದರ ವಿರುದ್ಧ ಜಿಲ್ಲಾ ಪೊಲೀಸರು ಗರಂ ಆಗಿದ್ದರು. ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಸಂತ್ರಸ್ತರ ದೂರಿನ ಮೇರೆಗೆ ಸೂರಿಂಜೆ ಹಾಗೂ ಶರಣ್ ಅವರನ್ನು ಬಂಧಿಸಿ ಕೆಲ ಕಾಲ ಜೈಲಿನಲ್ಲಿರಿಸಲಾಗಿತ್ತು. ಕೋರ್ಟಿನಲ್ಲಿ ಸಂತ್ರಸ್ತರು ಸೂರಿಂಜೆ ಪರ ಹೇಳಿಕೆ ನೀಡಿದ್ದರು, ಸೂರಿಂಜೆ ಇದ್ದಿದ್ದರಿಂದ ನಮಗೆ ರಕ್ಷಣೆ ಸಿಕ್ಕಿತು ಎಂದಿದ್ದರು. ಜನವರಿ 04, 2018ಕ್ಕೆ ಅನ್ವಯವಾಗುವಂತೆ ಸೂರಿಂಜೆ ಅವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಲಾಗಿತ್ತು. ಆದರೆ, ಅಂತಿಮ ಆದೇಶ ಡಿಸೆಂಬರ್ 05, 2018ರಂದು ಪ್ರಕಟಿಸಲಾಗಿದೆ.

English summary
Journalist Naveen Soorinje gets big relief in 2012 Mangaluru home stay attack case. Local sessions court has discharged him from all charges
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X