ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಿನಲ್ಲಿ ನಾಪತ್ತೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 12: ಬೆಂಗಳೂರಿನಲ್ಲಿ ಮಕ್ಕಳ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾದ 4 ಮಕ್ಕಳು ಮಂಗಳೂರಿನಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ, ಚಿಂತನ್, ಭೂಮಿ ಎಂಬ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಿಂದ ಸ್ಲಿಪರ್ ಬಸ್‌ನಲ್ಲಿ ಮಂಗಳೂರು ತಲುಪಿದ್ದರು ಎನ್ನಲಾಗಿದೆ.

ಮಂಗಳೂರಿಗೆ ಬಂದಿಳಿದ ಮಕ್ಕಳ ಬಗ್ಗೆ ಅನುಮಾನಗೊಂಡ ಆಟೋ ರಿಕ್ಷಾ ಚಾಲಕರು, ಮಕ್ಕಳನ್ನು ಕರೆತಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ. "ಮೊದಲು ರೈಲು ಮೂಲಕ ಬೆಳಗಾವಿಗೆ ಹೋಗಿದ್ದೆವು. ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಮೆಜೆಸ್ಟಿಕ್‌ನಿಂದ ಮಂಗಳೂರಿಗೆ ಬಂದಿದ್ದೇವೆ," ಎಂದು ನಾಲ್ವರು ಮಕ್ಕಳು ಪೊಲೀಸರು ಎದುರು ಹೇಳಿದ್ದಾರೆ.

Bengaluru Children Missing Case; 4 Children Found in Mangaluru

"ಮನೆಯವರು ನಮ್ಮನ್ನು ಬೇರೆ ಮಾಡುವುದಕ್ಕೆ ನೋಡಿದರು, ಅದಕ್ಕೆ ಮನೆ ಬಿಟ್ಟು ಬಂದಿದ್ದೇವೆ. ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಮತ್ತೆ ಮಂಗಳೂರಿಗೆ ಬಂದೀವಿ. ಮಂಗಳೂರಿಗೆ ಸೋಮವಾರ ಬೆಳಗ್ಗೆ ಬಸ್‌ನಲ್ಲಿ ಬಂದಿದ್ದೇವೆ," ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.

"ನಾವು 4 ಜನ ತುಂಬಾ ಕ್ಲೋಸ್ ಫ್ರೆಂಡ್ಸ್, ನಮ್ಮ ಮನೇಲಿ ಹಾಗೂ ಪರಿಸರದಲ್ಲಿ ನಮ್ಮನ್ನು ನೋಡಿದರೆ ಬೈಯ್ಯುತ್ತಿದ್ದರು. ನಮಗಿಂತ ಚಿಕ್ಕವರ ಮುಂದೆಯೂ ನಮಗೆ ಬೈಯ್ಯುತ್ತಿದ್ದರು. ನಮ್ಮನ್ನು ದೂರ ಮಾಡಿಬಿಡುತ್ತಾರೆ ಅಂತ ನಾವು ಓಡಿ ಹೋಗುವುದಕ್ಕೆ ಪ್ಲಾನ್ ಮಾಡಿದ್ವಿ," ಎಂದು ಮಂಗಳೂರಿನಲ್ಲಿ ಪತ್ತೆಯಾದ ಮಕ್ಕಳ ಹೇಳಿದ್ದಾರೆ. ಡಿಸಿಪಿ ಹರಿರಾಂ ಶಂಕರ್ ಮಕ್ಕಳನ್ನು ವಿಚಾರಣೆ ಮಾಡುತ್ತಿದ್ದಾರೆ.

ನಾಲ್ವರು ಮಕ್ಕಳು ಒಂದೇ ಲೇಔಟ್‌ನ ನಿವಾಸಿಗಳು
ನಾಲ್ವರು ಮಕ್ಕಳ ವಿಚಾರಣೆ ಮುಗಿಸಿ ಮಾತನಾಡಿದ ಡಿಸಿಪಿ ಹರಿರಾಂ ಶಂಕರ್, "ಎಲ್ಲರೂ ಒಟ್ಟಿಗೆ ಆಡುವುದಕ್ಕೆ ಹೋಗುತ್ತಿದ್ದರು. ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಕರು ತಮ್ಮನ್ನು ಹಾಸ್ಟೆಲ್‌ಗೆ ಹಾಕುವ ಭಯವಾಗಿದೆ," ಎಂದು ತಿಳಿಸಿದರು.

"ಹೀಗಾಗಿ ಎಲ್ಲರೂ ಒಟ್ಟಿಗೆ ಯಾವುದಾದರೂ ಹಳ್ಳಿಗೆ ಹೋಗಿ ವಾಸಿಸುವ ನಿರ್ಧಾರ ಮಾಡಿದ್ದು, ಪ್ರಯಾಣಕ್ಕೆ ಎಲ್ಲರೂ ಮನೆಯಿಂದ ಹಣ ತಂದಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಮೂಲಕ ಬಂದಿದ್ದಾರೆ. ತಮ್ಮ ಗುರುತನ್ನು ಯಾರೂ ಪತ್ತೆ ಹಚ್ಚಬಾರದೆಂದು ಸಿಮ್ ಕಾರ್ಡ್, ಮೈ ಮೇಲಿದ್ದ ಚಿನ್ನಾಭರಣ ಎಸೆದಿದ್ದಾರೆ. ಮಂಗಳೂರಿನ ಖಾಸಗಿ ಬಸ್ ನಿಲ್ದಾಣದ ಡಸ್ಟ್ ಬಿನ್‌ಗೆ ಎಸೆದಿದ್ದಾರೆ," ಎಂದು ಡಿಸಿಪಿ ಹೇಳಿದರು.

Recommended Video

Virat Kohli ನಾಯಕತ್ವದಿಂದ ಕೆಳಗಿಳಿದ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ | Oneindia Kannada

"ಸದ್ಯ ಪೊಲೀಸರು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಈಗಾಗಲೇ ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದೇವೆ. ಬೆಂಗಳೂರಿನಿಂದ ಹೆತ್ತವರು ಮಂಗಳೂರಿಗೆ ಬರುತ್ತಿದ್ದಾರೆ. ಸಣ್ಣ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ. ಆದರೆ ಮಕ್ಕಳನ್ನು ಕರೆತಂದ ಯುವತಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ," ಎಂದು ಮಕ್ಕಳ ವಿಚಾರಣೆ ಬಳಿಕ ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.

English summary
Bengaluru Children Missing Case; Four children have been found safe in Mangaluru Police Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X