ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಮೂಲದ ಪರ್ವತಾರೋಹಿ ಅಮೇರಿಕಾದಲ್ಲಿ ಸಾವು

|
Google Oneindia Kannada News

ಮಂಗಳೂರು ಆಗಸ್ಟ್ 27 : ಅಮೆರಿಕದಲ್ಲಿ ದಕ್ಷಿಣ ಕನ್ನಡ ಮೂಲದ ಪರ್ವತಾರೋಹಿಯೊಬ್ಬರು ಮೃತಪಟ್ಟಿದ್ದಾರೆ. ಪರ್ವತಾರೋಹಣ ಮಾಡುವಾಗ ಈ ಘಟನೆ ನಡೆದಿರಬಹುದು ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿ ನೆಲೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಂಜೆ ನಿವಾಸಿ ಚೈತನ್ಯ ಸಾಠೆ (36) ಮೃತಪಟ್ಟವರು. ಪರ್ವತ ಏರುವ ಸಂದರ್ಭದಲ್ಲಿ ಕಾಲುಜಾರಿ ಪ್ರಪಾತಕ್ಕೆ ಬಿದ್ದಿದ್ದು, ಮೃತಪಟ್ಟಿದ್ದಾರೆ.

"ಮೂರು ಉಪಮುಖ್ಯಮಂತ್ರಿಗಳು; ಇದು 3ಡಿ ಎಫೆಕ್ಟ್ ಸರ್ಕಾರನಾ?": ಐವನ್ ಡಿಸೋಜಾ

ಶನಿವಾರ ಮೌಂಟ್ ಹುಡ್ ಲೋವರ್ ಜಾರ್ಜ್‍ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್ ಸ್ಟೇಟ್ ಪಾರ್ಕ್ ಎಂಬಲ್ಲಿ ಸುಮಾರು 100 ಅಡಿ ಆಳದ ಪ್ರಪಾತಕ್ಕೆ ಚೈತನ್ಯ ಬಿದ್ದಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Belthangady Based Mountaineer Dies An America

ಚೈತನ್ಯ ತಂದೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವಿಜ್ಞಾನಿಯಾಗಿರುವ ರಮೇಶ್ ಸಾಠೆ ಅವರ ಪುತ್ರ ಚೈತನ್ಯ ಸಾಠೆ ಪೋರ್ಟ್ ಲ್ಯಾಂಡ್ ಮೂಲದ ಮಾಝಾಮಾಸ್ ಎಂಬ ಪರ್ವತಾರೋಹಿಗಳ ಸಂಘಟನೆಯಲ್ಲಿದ್ದರು. ಇದುವರೆಗೂ ಅನೇಕ ಸಾಹಸಮಯ ಚಾರಣಗಳಲ್ಲಿ ಚೈತನ್ಯ ಪಾಲ್ಗೊಂಡಿದ್ದರು.

English summary
A Mountaineer Chaitanya Sathe(35) killed in Smith Rock state park in America. During rock climbing trail he apparently slipped and fall 100 feet. Chaitanya Sathe belongs to Bethangadi Of Dakshian Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X