ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶವರ್ಮಾ ತಿಂದ ಬಾಲಕಿ ಸಾವು, ಬ್ಯಾಕ್ಟೀರಿಯಾಗೆ ಬಾಲಕಿ ಬಲಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಮೇ 4: ಕಾಸರಗೋಡಿನ ಚೆರ್ವತ್ತೂರಿನ ಫಾಸ್ಟ್‌ ಫುಡ್‌ ಅಂಗಡಿಯಲ್ಲಿ ಶವರ್ಮಾ ತಿಂದು ಬಾಲಕಿ ಮೃತಪಟ್ಟಿದ್ದು, 28 ಮಂದಿ ಅಸ್ವಸ್ಥರಾದ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.

ಎಲ್ಲೆಡೆ ನಾಯಿಕೊಡೆಗಳಂತೆ ಎದ್ದಿರುವ ಫಾಸ್ಟ್ ಫುಡ್‌ ಅಂಗಡಿಗಳಲ್ಲಿ ಆಹಾರ ಎಷ್ಟು ಸುರಕ್ಷಿತ? ಎನ್ನುವ ಚರ್ಚೆ ಎಲ್ಲೆಡೆ ಆರಂಭವಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರಿನಲ್ಲಿ ಶವರ್ಮಾ ತಿಂದು ಬಾಲಕಿ ಮೃತಪಟ್ಟ ಬಳಿಕ ಮಕ್ಕಳಿಗೆ ಫಾಸ್ಟ್‌ ಫುಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಎದ್ದಿದೆ.

ಚಿಕನ್ ಶವರ್ಮಾ ತಿಂದು 16 ವರ್ಷದ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ ಚಿಕನ್ ಶವರ್ಮಾ ತಿಂದು 16 ವರ್ಷದ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ

ಶವರ್ಮಾ ತಿಂದ ನಂತರ ಅಸ್ವಸ್ಥರಾಗಲು ಮತ್ತು ಬಾಲಕಿ ಸಾವಿಗೆ ಆಹಾರದಲ್ಲಿದ್ದ ಬ್ಯಾಕ್ಟೀರಿಯಾ ಕಾರಣ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಈ ಘಟನೆಗೆ ಬಗ್ಗೆ ವೈದ್ಯಾಧಿಕಾರಿ ಡಾ. ರಾಮದಾಸ್‌ ಅಧಿಕೃತ ಮಾಹಿತಿ ನೀಡಿದ್ದು, "ಶವರ್ಮಾ ಆಹಾರದಲ್ಲಿದ್ದ ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಬಾಲಕಿ ಮೃತಪಟ್ಟಿದ್ದಾರೆ" ಎಂದು ಹೇಳಿದ್ದಾರೆ.

ಆಹಾರ ಪ್ರೇಮಿಗಳಿಗೆ ಮೊಮೊಸ್ ತಿನ್ನುವ ಸವಾಲ್: ಗೆದ್ದವರಿಗೆ 1 ಲಕ್ಷ ಬಹುಮಾನ ಆಹಾರ ಪ್ರೇಮಿಗಳಿಗೆ ಮೊಮೊಸ್ ತಿನ್ನುವ ಸವಾಲ್: ಗೆದ್ದವರಿಗೆ 1 ಲಕ್ಷ ಬಹುಮಾನ

Be Careful Before Giving Fast Food To Children

ಆಹಾರ ಸೇವಿಸಿದ್ದ 28 ಮಂದಿ ಅಸ್ವಸ್ಥರಾಗಿರುವ ರೋಗಿಗಳು ಹತ್ತಿರದ ಕಾಂಞಾಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ರೋಗಿಗಳ ಮಲ ಮತ್ತು ರಕ್ತಪರೀಕ್ಷೆಯಲ್ಲಿ ಆಹಾರದಲ್ಲಿದ್ದ ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

 ಶ್ರೀಲಂಕಾ ಆಹಾರ ಬಿಕ್ಕಟ್ಟು: ಹಾಲಿನ ಪುಡಿ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ ಶ್ರೀಲಂಕಾ ಆಹಾರ ಬಿಕ್ಕಟ್ಟು: ಹಾಲಿನ ಪುಡಿ, ಅಕ್ಕಿ, ಸಕ್ಕರೆ ಬೆಲೆ ಗಗನಕ್ಕೇರಿದೆ

ಹೇಗೆ ಹರಡುತ್ತದೆ?; ಫಾಸ್ಟ್ ಫುಡ್ ಆಹಾರದಲ್ಲಿದ್ದ ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಗಂಭೀರ ಪ್ರಮಾಣದ ಅತಿಸಾರವಾಗುತ್ತದೆ, ಕಲುಷಿತ ನೀರು, ಕಲುಷಿತ ಆಹಾರ, ತೊಳೆಯದ ಹಣ್ಣು, ತರಕಾರಿಗಳು ಸೋಂಕಿನ ಜನರು ತಯಾರು ಮಾಡಿದ ಆಹಾರ ಸೇವಿಸುವುದರಿಂದ ಆಹಾರದ ಮೂಲಕ ವ್ಯಕ್ತಿಯ ದೇಹಕ್ಕೆ ಸೋಂಕು ತಗುತ್ತದೆ. ಕಡಿಮೆ ಪ್ರಾಯದ ಮಕ್ಕಳು ಈ ಆಹಾರ ತಿಂದರೆ ರೋಗ ಲಕ್ಷಣಗಳು ಉಲ್ಬಣವಾಗಿ ಸಾಯುವ ಪ್ರಮಾಣವೇ ಅತೀ ಹೆಚ್ಚಾಗಿರುತ್ತದೆ. ಅಲ್ಲದೇ ಈ ರೋಗ ಬೇಗ ಹರಡುವ ಸಾಧ್ಯತೆ ಇರುತ್ತದೆ.

ಬ್ಯಾಕ್ಟೀರಿಯಾ ಲಕ್ಷಣಗಳು: ಈ ಬ್ಯಾಕ್ಟೀರಿಯಾ ಲಕ್ಷಣಗಳು ಯಾವುದೆಂದರೆ ಅತಿಸಾರ, ಜ್ವರ, ಹೊಟ್ಟೆನೋವು, ವಾಂತಿ, ಆಯಾಸ ಮತ್ತು ರಕ್ತಸಿಕ್ತ ಮಲವಾಗಿದೆ. ಈ ಬ್ಯಾಕ್ಟೀರಿಯಾ ದೇಹದ ಕರುಳಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ರೋಗ ಲಕ್ಷಣ ಏಳು ದಿನಗಳವರೆಗೆ ಇರೋದರಿಂದ ಚಿಕಿತ್ಸೆ ಸಿಗದಿದ್ದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿನ ರೀತಿಯಲ್ಲಿದೆ ಎಂದು ವೈದ್ಯರು ಈ ಬ್ಯಾಕ್ಟೀರಿಯಾ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಡೆ ಹರಡಿರುವ ಫಾಸ್ಟ ಫುಡ್‌ ಅಂಗಡಿಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ಪರವಾನಗಿ ಪಡೆಯದೇ ಆದಾಯ ದೃಷ್ಟಿಯಲ್ಲಿ ಲಾಭ ಪಡೆಯಲು ಇವು ಸುಲಭವಾಗಿ ಗ್ರಾಹಕರನ್ನು ಆಕರ್ಷಿಸುತ್ತಿವೆ, ಬೇಕರಿಗಳಲ್ಲಿ ಶವರ್ಮಾ, ಬರ್ಗರ್ ಗಳು ಹೇರಳವಾಗಿ ಲಭಿಸುತ್ತವೆ. ಜನರನ್ನು ಸೆಳೆಯುವ ಕೆಲವೊಂದು ಬೇಕರಿ, ಅಂಗಡಿಗಳಲ್ಲಿ ಗ್ರಾಹಕರ ಕೊರತೆಯಿಂದ ಉಳಿದ ಆಹಾರವನನ್ಉ ಮರು ದಿನ ಬಳಕೆ ಮಾಡುವುದರಿಂದ ಇಂತಹ ಘಟನೆಗಳು ನಡೆಯುತ್ತವೆ.

ಇಂತಹ ಫಾಸ್ಟ್‌ಫುಡ್‌ ಸಿದ್ಧಪಡಿಸುವಾಗ ಹಳೆಯದಾಗಿ ಆಹಾರದಲ್ಲಿನ ರಾಸಾಯನಿಕಗಳಿಂದ ಆಹಾರ ವಿಷಯುಕ್ತವಾಗಿ ಮಾರ್ಪಾಡಾಗುತ್ತದೆ. ಬೇಕರಿ, ಅಂಗಡಿಗಳಲ್ಲಿ ಅಡುಗೆ ಮತ್ತು ಆಹಾರ ಸಂಗ್ರಹದ ಸಮಯದಲ್ಲಿ ಅಜಾಗರೂಕತೆಯಿಂದ ವಿಷಾಂಶದಿಂದ ಕೂಡಿ ಅದು ಆರೋಗ್ಯಕ್ಕೆ ಹಾನಿಕರವಾಗುತ್ತದೆ.

ಫಾಸ್ಟಫುಡ್, ಬೇಕರಿ ಅಂಗಡಿಗಳಲ್ಲಿ ಹಾಗೂ ಸಾಮಾನ್ಯವಾಗಿ ಹೋಟೆಲ್‌ ಆಹಾರಗಳಾದ ಶವರ್ಮಾ ಮತ್ತು ಬರ್ಗರ್ ಇತರೆ ಮಾಂಸದ ಆಹಾರದಲ್ಲಿ ಹೆಚ್ಚು ವಿಷಾಂಶ ಕಂಡು ಬರುತ್ತದೆ. ಬೇಕರಿ, ಹೋಟೆಲ್‌ಗಳಲ್ಲಿ ಮುಖ್ಯವಾಗಿ ಸ್ವಚ್ಛತೆಯಿಲ್ಲದೆ ತಯಾರಿಕೆ ಮಾಡಿದ ಆಹಾರದಿಂದಲೂ ವಿ‍ಷ ಅಂಶಗಳು ಕಂಡು ಬರುತ್ತವೆ. ಧೂಳು, ಹುಳಗಳು ಮತ್ತು ಕಲುಷಿತ ನೀರಿನ ಬಳಕೆಯಿಂದ ಬ್ಯಾಕ್ಟೀರಿಯಾಗಳು ಆಹಾರದಲ್ಲಿ ಮಿಶ್ರಣವಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ.

ಕಲುಷಿತ ನೀರಿನ ಬಳಕೆ, ಅಶುಚಿಯಾದ ಅಡುಗೆ, ಆಹಾರವನ್ನು ಸಂಗ್ರಹಿಸಲು ಅಶುಚಿಯಾದ ಪಾತ್ರೆಗಳ ಬಳಕೆ ಮತ್ತು ಮಾಂಸ,ಮೀನು, ಹಾಲು, ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಬೇಯಿಸಿದ ನಂತರ ಬ್ಯಾಕ್ಟಿರಿಯಾ ಸೇರಿಕೊಳ್ಳುತ್ತದೆ.

ವಿಷಾಹಾರ ಸೇವನೆಯಿಂದ ವ್ಯಕ್ತಿಯಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತದೆ. ವಾಕರಿಕೆ, ವಾಂತಿ, ದೇಹದಲ್ಲಿ ನೋವು, ಅತಿಸಾರ, ಹೊಟ್ಟೆ ನೋವು ಮತ್ತು ತಿಂದ ನಂತರ ಜ್ವರ, ಊಟದ ನಂತರ ಗಂಟೆಗಳ ನಂತರ ಅಥವಾ ಕೆಲವೊಮ್ಮೆ ಒಂದು ದಿನದ ವಿರಾಮದ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆಹಾರ ವಿಷವು ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವುದರಿಂದ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು.

English summary
One died and 28 other fall ill after eating Shawarma in Chervatur. Is fast food safe for children. Girl died after eating a shawarma at Chervathoor in Kasaragod.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X