ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮಾ.30ರಂದು ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್‌ 28:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾರ್ಚ್ 30ರಂದು ಸಂಜೆ 7.00 ಗಂಟೆಗೆ ಗುರುಪುರ ಕೈಕಂಬದ ಆದರ್ಶ ನಗರದಲ್ಲಿ "ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಕಾಡೆಮಿ ಅಧ್ಯಕ್ಷರಾದ ಕರಂಬಾರ್ ಮಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಲೀಮು ಮಾಸ್ಟರ್ ಗಳಾದ ಎಂ.ಜಿ. ಅಬ್ದುಲ್ಲ ಗುರುಪುರ, ಎಂ.ಜಿ. ಶಾಹುಲ್ ಹಮೀದ್, ತಾಲೀಮು ಕಲಿಗಾರರಾದ ಇಬ್ರಾಹಿಂ ನಡುಗುಡ್ಡೆ, ಅಮೀರ್ ಗುರುಪುರ ಇವರುಗಳನ್ನು ಸನ್ಮಾನಿಸಲಾಗುವುದು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾತ್ರಿ 8.30 ಗಂಟೆಗೆ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ವಹಿಸಲಿದ್ದು, ಶರೀಫ್ ನಿರ್ಮುಂಜೆ, ಆರೀಸ್ ತೋಡಾರ್, ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಲುಕ್ಮಾನ್ ಅಡ್ಯಾರ್, ಕಾ ಶಿಖ ಬಜ್ಪೆ, ಇಬ್ರಾಹಿಮ್ ಖಲೀಲ್ ಪುತ್ತೂರು ಕವಿಗಳಾಗಿ ಭಾಗವಹಿಸಲಿದ್ದಾರೆ.

Barry Janapada Samskruthika Lace will be held on March 30th

ಸಂಜೆ 7.00 ರಿಂದ 8.00ಗಂಟೆಯವರೆಗೆ ಶರೀಫ್ ಬೆಳ್ಳಾರೆ ಮತ್ತು ಬಳಗದಿಂದ ಬ್ಯಾರಿ ಹಾಡು, ರಾತ್ರಿ 9.00ಗಂಟೆಯಿಂದ 10.00ಗಂಟೆಯವರೆಗೆ ಎಂ.ಜಿ.ಎಂ. ತಾಲೀಮು ಸ್ಪೋರ್ಟ್ಸ್ ಇವರಿಂದ ತಾಲೀಮು ಕಲಿ ನಡೆಯಲಿದೆ.

English summary
Barry Janapada Samskruthika Lace will be held on March 30th in Mangalore. Karambar Mohammad will inaugurate the program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X