ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಸೆಫ್ ವಾಜ್ ಕ್ಷೇತ್ರದಲ್ಲಿ ಅನ್ನದಾನಕ್ಕೆ ಚಾಲನೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ. 17: ಏಸು ಪ್ರಭು ಹಸಿದವನಿಗೆ ಆಹಾರ ನೀಡಿ ಸಂತೈಸಿದ್ದ. ಆಧ್ಯಾತ್ಮಿಕ ಹಸಿವು ಜೋಸೆಫ್‌ವಾಜ್ ಕ್ಷೇತ್ರ ದರ್ಶನದಿಂದ ನೀಗುತ್ತದೆ. ಶಾರೀರಿಕ ಹಸಿವು ನೀಗಿಸಲು ಅನ್ನದಾನ ಆರಂಭಿಸಲಾಗಿದೆ ಎಂದು ಬೆಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಬರ್ನಾಡ್ ಮೊರಾಸ್ ಪ್ರಭು ಹೇಳಿದರು.

ಸಂತ ಜೋಸೆಫ್ ವಾಜ್ ಅವರಿಗೆ ಶ್ರೀಲಂಕಾದಲ್ಲಿ ಸಂತ ಪದವಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಮುಡಿಪು ಮುಕ್ತಿಧರ ಜೋಸೆಫ್ ವಾಜ್ ಕ್ಷೇತ್ರದಲ್ಲಿ ನಡೆಯುತ್ತಿದ್ದ ಚಾರಿತ್ರಿಕ ಸಂಭ್ರಮ ಸಮಾರೋಪದಲ್ಲಿ ಪ್ರತಿ ಶುಕ್ರವಾರ ಅನ್ನದಾನ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. [ಆಸ್ಟ್ರೇಲಿಯಾ ವಧು ವರಿಸಿದ ಮಂಗಳೂರು ಕುವರ]

church

ಬರಲೇ ಇಲ್ಲ ಮುಖ್ಯಮಂತ್ರಿ : ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಮಂಗಳೂರಿಗೆ ಬಂದಿದ್ದ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರದೇ ವಾಪಸ್ ಹೋದರು. ಮುಖ್ಯಮಂತ್ರಿ ಬರುವ ನಿರೀಕ್ಷೆಯಿಂದ ಬಂದಿದ್ದ ಹಲವರು ನಿರಾಸೆಯಿಂದ ಮರಳಿದರು. [ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಸಂಚಾರ ನಿಷೇಧ]

ಸಭೆ ಮುಕ್ತಾಯ ಹಂತದಲ್ಲಿದ್ದಾಗ ಮಾಜಿ ಕೇಂದ್ರ ಮಂತ್ರಿ ಆಸ್ಕರ್ ಫರ್ನಾಂಡಿಸ್ ಆಗಮಿಸಿದರು. ಅವರ ಜೊತೆ ಜಿಲ್ಲಾ ಪಂಚಾಯಿತಿ ಸದಸ್ಯ ಮೆಲ್ವಿನ್ ಡಿಸೋಜ ಇತರರು ಇದ್ದರು.

church

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ. ಅಲೋಸಿಯಸ್ ಪೌಲ್ ಡಿಸೋಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಜೆ.ಆರ್. ಲೋಬೋ, ಡೆನ್ನಿಸ್ ಮೊರಾಸ್ ಪ್ರಭು, ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ವಿಲ್ಲಿಯಂ ಮಿನೇಜಸ್, ಫಾ. ಗ್ರೆಗರಿ ಡಿಸೋಜ, ಧರ್ಮ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ, ಜೋಸೆಫ್ ವಾಜ್ ಕ್ಷೇತ್ರ ಉಪಾಧ್ಯಕ್ಷ ರೋಶನ್ ಡಿಸೋಜಾ, ಕಾರ್ಯದರ್ಶಿ ಲಿಯೋ ಡಿಸೋಜಾ, ಮಾಜಿ ಉಪಾಧ್ಯಕ್ಷ ಮೈಕಲ್ ಡಿಸೋಜಾ, ಎಲಿಯಾಸ್ ಫೆರ್ನಾಂಡಿಸ್ ಇತರರು ಪಾಲ್ಗೊಂಡಿದ್ದರು.

English summary
Barnard Moras of Bengaluru has inaugurated the Annadana service on every Friday at Joseph Vaz in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X