ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾರಕೂರಿನಲ್ಲಿ ಅನಾವರಣಗೊಳ್ಳಲಿದೆ ಆಳೂಪ ಉತ್ಸವದ ವೈಭವ

|
Google Oneindia Kannada News

ಉಡುಪಿ, ಜನವರಿ 23: ಉಡುಪಿ ಎಂದೊಡೆನೆ ಮೊದಲು ನೆನಪಾಗೊದು ಶ್ರೀ ಕೃಷ್ಣ ಮಠ, ಮಲ್ಪೆಯ ಸುಂದರ ಕಡಲ ಕಿನಾರೆ, ಗತಕಾಲದ ಇತಿಹಾಸ ಸಾರುವ ಪುರಾತನ ದೇವಾಲಯಗಳು. ಇತಿಹಾಸದ ಪುಟಗಳನ್ನು ತೆರದಿಡುವ ಬಾರ್ಕೂರು.

ಗತಕಾಲದ ವೈಭವ ಸಾರುವ ಬಾರಕೂರಿನ ಕೋಟೆ ಈಗ ಆಳೂಪ ಉತ್ಸವಕ್ಕೆ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದ್ದು, ಇದೇ ಬರುವ ಜನವರಿ 25 ರಿಂದ ಮೂರು ದಿನಗಳ‌ ಕಾಲ ಗತ ವೈಭವದ ಮೆಲುಕು ಹಾಕಲು ಬಾರಕೂರು ಸಿದ್ಧವಾಗುತ್ತಿದೆ.

ಸಹ್ಯಾದ್ರಿ ಉತ್ಸವ:ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿಕ್ಯಾಪ್ಟರ್ ಆಯೋಜನೆಸಹ್ಯಾದ್ರಿ ಉತ್ಸವ:ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿಕ್ಯಾಪ್ಟರ್ ಆಯೋಜನೆ

ವಿಜಯನಗರದ ಅರಸರು, ಕದಂಬ, ಹೊಯ್ಸಳ, ಕೆಳದಿ ಅರಸರು ಸೇರಿದಂತೆ ಬಾರಕೂರನ್ನು ಆಳೂಪ ವಂಶಸ್ಥರು ಕೂಡ ಸಾವಿರ ವರ್ಷಗಳ ಕಾಲ ಆಳಿದ್ದಾರೆ. ಬಾರಕೂರು ಅಳೂರ ಆಳ್ವಿಕೆಯ ಅಳಿದುಳಿದ ಪಳೆಯುಳಿಕೆಗಳನ್ನು ಇಂದಿಗೂ ತನ್ನ ಒಡಲಲ್ಲಿ ಇರಿಸಿ ಕಾಪಾಡಿಕೊಂಡು ಬಂದಿದೆ.

Barkur getting set for Alupa Utsava

ಅಳೂಪರ ಕಾಲದ ಶಿಲಾಮಯ ದೇಗುಲಗಳು, ಜೈನ ಬಸದಿಗಳು, ಕೆರೆ ಕಂದಕಗಳನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ.

 ಕೊಡಗು ಪ್ರವಾಸಿ ಉತ್ಸವ: ಜನಮನ ಸೆಳೆದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಕೊಡಗು ಪ್ರವಾಸಿ ಉತ್ಸವ: ಜನಮನ ಸೆಳೆದ ಓಪನ್ ಸ್ಟ್ರೀಟ್ ಫೆಸ್ಟಿವಲ್

ಆಳೂಪ ಉತ್ಸವಕ್ಕೆ ಉಡುಪಿಯ ಬಾರ್ಕೂರಿನಲ್ಲಿ ತಯಾರಿಯನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮಾಡುತ್ತಿದೆ. ಪಾಳು ಬಿದ್ದ 12 ಎಕರೆ ಕೋಟೆ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಶಿಲಾಮಯ ದೇಗುಲಗಳು, ಜೈನ ಬಸದಿಗಳು, ಕೆರೆ ಕಂದಕಗಳು ಸ್ವಚ್ಛಗೊಳ್ಳುತ್ತಿವೆ. ಆಳೂಪ ರಾಣಿಯ ಕೆರೆ, ಪುಷ್ಕರಣಿ, ಕತ್ತಲೆ ಬಸದಿಯಂತಹ ಇತಿಹಾಸ ಸಾರುವ ಸ್ಮಾರಕಗಳು ಶೃಂಗಾರಗೊಳ್ಳುತ್ತಿವೆ.

Barkur getting set for Alupa Utsava

 ಇಂದಿನಿಂದ 3 ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ? ಇಂದಿನಿಂದ 3 ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ?

ಪುರಾತತ್ವ ಇಲಾಖೆಯ ನಿಯಮ‌ ನಿಬಂಧನೆಯ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಕೋಟೆ ಸೇರಿದಂತೆ ಶಿಲಾಮಯ ದೇವಾಲಯ, ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜಾಗವನ್ನು ಸ್ವಚ್ಛಗೊಳಿಸುತ್ತಿದೆ. ರಾಜ್ಯದ ಕರಾವಳಿ‌ಯನ್ನು ಅತೀ ಹೆಚ್ಚು ಕಾಲ ಆಳಿದ ಆಳೂಪರ ಉತ್ಸವ ಅಳಿದುಳಿದ ಕೋಟೆ ಕೊತ್ತಲಗಳ ಉಳಿಯುವಿಕೆಗೆ ನಾಂದಿಯಾಗಿದೆ.

English summary
Alupa utsava will be held from January 25 to 27 in Barkur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X