• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೀದಿಬದಿ ವ್ಯಾಪಾರಿಗಳಿಗೆ ಶುಭ ಸುದ್ದಿ ಕೊಟ್ಟ ಸಚಿವ ಬಂಡೆಪ್ಪ ಕಾಶಂಪುರ್

|
   ಬೀದಿ ಬದಿ ವ್ಯಾಪಾರಿಗಳಿಗಾಗಿ ವಿಶೇಷ ಯೋಜನೆಯನ್ನ ರೂಪಿಸಿದ ಎಚ್ ಡಿ ಕುಮಾರಸ್ವಾಮಿ | Oneindia Kannada

   ಮಂಗಳೂರು, ಅಕ್ಟೋಬರ್. 11: ಬೀದಿಬದಿ ಹಾಗೂ ಸಣ್ಣ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ಸಂಕಷ್ಟದಿಂದ ಪಾರು ಮಾಡಲು ರಾಜ್ಯ ಸರಕಾರ ಬಡವರ ಬಂಧು ಸಾಲ ಸೌಲಭ್ಯ ಯೋಜನೆ ಆರಂಭಿಸಲಿದೆ ಎಂದು ಸಚಿವ ಬಂಡೆಪ್ಪ ಕಾಶಂಪುರ್ ತಿಳಿಸಿದ್ದಾರೆ .

   ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಬುಧವಾರ (ಅ.11) ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು 'ಬಡವರ ಬಂಧು' ಯೋಜನೆಗೆ ದೀಪಾವಳಿಗೆ ಮೊದಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

   ಕುಟುಂಬದ ಒಬ್ಬರ ಕೃಷಿ ಸಾಲ ಮಾತ್ರ ಮನ್ನಾ, ನಿಯಮ ವಾಪಸ್ ಪಡೆಯಲಿದೆ ಸರ್ಕಾರ

   ಈ ಯೋಜನೆಯಡಿ 2 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸಿಗಲಿದೆ. ಮೊಬೈಲ್ ಸೇವೆ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರ ರೂಪಾಯಿ ಸಾಲ ದೊರಕಲಿದೆ ಎಂದರು.

   ಕುಮಾರಸ್ವಾಮಿ ಸರ್ಕಾರದಿಂದ ಮತ್ತೊಂದು ಸಾಲಮನ್ನಾಕ್ಕೆ ಯೋಜನೆ

   ಸ್ವಸಹಾಯ ಗುಂಪುಗಳು ಉದ್ಯಮ ಆರಂಭಿಸಲು ಸಹಕಾರ ಇಲಾಖೆ 'ಕಾಯಕ ಯೋಜನೆ 'ಯ ಮೂಲಕ 10 ಲಕ್ಷ ರೂಪಾಯಿ ಸಾಲ ಒದಗಿಸಲಿದೆ. ಇದರಲ್ಲಿ 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಉಳಿದ 5 ಲಕ್ಷ ರೂಪಾಯಿ ಶೇಕಡ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ ಎಂದು ಸ್ಪಷ್ಟಪಡಿಸಿದರು.

   ಸಾಲಮನ್ನಾ ಅರ್ಜಿ, ರೈತರು ಆತಂಕ ಪಡಬೇಕಿಲ್ಲ:ಕುಮಾರಸ್ವಾಮಿ ಅಭಯ

   ಶೀಘ್ರವೇ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಬಂಡೆಪ್ಪ ಕಾಶಂಪುರ್ ತಿಳಿಸಿದರು.

   ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ಮನ್ನಾ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ ರೈತರ 713 ಕೋಟಿ ರೂಪಾಯಿ ಸಾಲ ಮನ್ನಾ ಆಗಲಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಂದರ್ಭ ಸಾಲ ಮನ್ನಾದಡಿ ಜಿಲ್ಲೆಯ 380 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಆಗಿದೆ ಎಂದರು.

   English summary
   Minister Bandeppa Kashempur said that Chief Minister Kumaraswamy will launch 'Badavara Bandhu' scheme before Deepavali festival
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X