ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡಾನೆಗಳ ಬಳಿಕ ಸುಳ್ಯದಲ್ಲಿ ಈಗ ಕಾಡು ಕೋಣಗಳ ಹಾವಳಿ

|
Google Oneindia Kannada News

ಮಂಗಳೂರು, ಡಿಸೆಂಬರ್ 22: ಕಾಡಾನೆಗಳ ಉಪಟಳ ಗಳಿಂದ ಬೇಸತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗು ಸುಳ್ಯ ಪರಿಸರದ ಜನ ಈಗ ಮತ್ತೋಂದು ಅತಂಕ ಎದುರಿಸು ವಂತಾಗಿದೆ. ಕಾಡಂಚಿನಿಂದ ಹಗಲು ರಾತ್ರಿ ಎನ್ನದೇ ಕಾಡಾನೆಗಳು ರಾಜಾರೋಷ ವಾಗಿ ಜನವಸತಿ ಪ್ರದೇಶಗಳಿಗೆ ನುಗ್ಗಿದ ಘಟನೆಗಳು ಇತ್ತಿಚೆಗೆ ಬೆಳಕಿಗೆ ಬಂದಿದ್ದವು. ಅದಲ್ಲದೇ ತೋಟಗಳಿಗೆ ನುಗ್ಗಿ ಅಪಾರ ನಷ್ಟ ಉಂಟುಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿತ್ತು.

Baisons enters agricultural fields in Belthangady

ಆದರೆ ಈಗ ಸುಳ್ಯ ತಾಲೂಕಿನಲ್ಲಿ ಕಾಡುಕೋಣ ಹಾವಳಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಕಾಡು ಕೋಣಗಳ ಉಪಟಳ ಮುಂದುವರಿದಿದೆ.ಸುಳ್ಯದ ಕಾಟೂರು ಪರಿಸರದಲ್ಲಿ ಕಾಡುಕೋಣಗಳು ಹಿಂಡು ಹಿಂಡಾಗಿ ಕೃಷಿ ತೋಟಗಳಿಗೆ ಲಗ್ಗೆ ಇಟ್ಟಿದೆ.

ಕಾಟೂರು ನಿವಾಸಿ ಸತೀಶ್ ಎಂಬುವವರ ತೋಟಕ್ಕೆ ಕಾಡು ಕೋಣ ಗಳು ಬೆಳ್ಳಂಬೆಳಿಗ್ಗೆ ಲಗ್ಗೆ ಇಟ್ಟಿವೆ. ಅದನ್ನು ಸತೀಶ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಕಾಡುಕೋಣಗಳ ಹಾವಳಿಗೆ ಅಡಕೆ ತೋಟದಲ್ಲಿ ಹಾಕಲಾಗಿರುವ ನೀರಿನ ಪೈಪ್ ಗಳೂ ತುಂಡಾಗಿವೆ.ಪೂಮಲೆ ಅರಣ್ಯದಿಂದ ಕಾಡುಕೋಣಗಳ ಹಿಂಡು ನಾಡಿಗೆ ಬರುತ್ತಿದ್ದು,ಅರಣ್ಯ ತಪ್ಪಲಿನ ಗ್ರಾಮಗಳ ಕೃಷಿಕರ ನಿದ್ದೆಗೆಡಿಸಿದೆ.

English summary
Baisons entering agricultural fields in day light at Katuru of Sullia takulu .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X