ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಚಿತ್ರಗಳ ಯಶಸ್ಸಿಗೆ ಕಾರಣ ಗೊತ್ತಾಗಿಲ್ಲ: ರಾಜಮೌಳಿ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 23 : ಮಣಿಪಾಲ್ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಂಐಟಿ) ಹಮ್ಮಿಕೊಂಡಿದ್ದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಭಾಗವಹಿಸಿ ಮೆರಗು ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜಮೌಳಿ , ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಸಂತಸದಿಂದ ಉತ್ತರಿಸುತ್ತಾ ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡರು. ಹೆಚ್ಚಿನ ನಿರ್ದೇಶಕರಿಗೆ ಹೀರೋಗಳಿಗೆ ಸೂಕ್ತವಾಗುವ ಕಥೆ ಮಾಡುವ ಅನಿವಾರ್ಯತೆ ಇರುತ್ತದೆ. ಆದರೆ, ಕಥೆಗೆ ತಕ್ಕಂತ ಹೀರೋಗಳನ್ನು ಆಯ್ಕೆ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಕೆಲವೇ ಕೆಲವು ನಿರ್ದೇಶಕರಿಗೆ ಮಾತ್ರ ಅಂತಹ ಅವಕಾಶ ಸಿಗುತ್ತದೆ. ಆದರೆ ನಾನು ಅದೃಷ್ಟವಂತ ನಿರ್ದೇಶಕ ಎಂದು ಸಂತಸ ವ್ಯಕ್ತಪಡಿಸಿದರು.

Baahubali director S S Rajamouli participated in Manipal MIT diamond jubilee

ನಾನು ಮಾಡಿದ ಚಲನಚಿತ್ರಗಳ ಅಭೂತಪೂರ್ವ ಯಶಸ್ಸಿಗೆ ನಿಜವಾದ ಕಾರಣ ನನಗಿನ್ನೂ ಗೊತ್ತಾಗಿಲ್ಲ. ಪ್ರಾಯಶಃ ನನ್ನ ಕಠಿಣ ಶ್ರಮ ಇರಬಹುದು, ನನ್ನ ಪ್ರಾಮಾಣಿಕತೆ ಇರಬಹುದು. ಆದರೆ ಪ್ರತಿಯೊಬ್ಬನೂ ತನ್ನ ಕೆಲಸದಲ್ಲಿ ಯಶಸ್ಸು ಕಾಣಲು ಆತನದೇ ಆದ 'ಫಾರ್ಮುಲಾ' ಇರಬೇಕು. ಅದನ್ನು 'ಅರ್ಜುನ ರೆಡ್ಡಿ' ಫಾರ್ಮುಲಾ ಎಂದು ಬೇಕಿದ್ದರೆ ಕರೆಯಿರಿ.

ನನ್ನ ವೈಯಕ್ತಿಕ ಬದುಕಿನಂತೆ, ವೃತ್ತಿಪರ ಬದುಕಿನಲ್ಲೂ ಭಾರೀ ಯಶಸ್ಸನ್ನು ಕಂಡುಕೊಂಡಿದ್ದೇನೆ. ನನ್ನ ಪತ್ನಿಗೆ ನಾನು ಜಗತ್ತಿನ ಅತ್ಯುತ್ತಮ ಪತಿ ಎಂದು ಮನವರಿಕೆ ಮಾಡಿದ್ದೇನೆ.

Baahubali director S S Rajamouli participated in Manipal MIT diamond jubilee

ಅದೇ ರೀತಿ ವೃತ್ತಿ ಬದುಕಿನಲ್ಲಿ ನನ್ನ ಚಿತ್ರಗಳು 'ದಿ ಬೆಸ್ಟ್' ಎಂದು ಪ್ರೇಕ್ಷಕರನ್ನು ನಂಬಿಸಿದ್ದೇನೆ. ಯಶಸ್ಸಿಗೆ ಪ್ರಮುಖ ಕಾರಣ ಕಠಿಣ ಶ್ರಮ ಹಾಗೂ ಪ್ರಾಮಾಣಿಕತೆ ಎಂದರು.

ಪೌರಾಣಿಕ ಕತೆಗಳನ್ನು ನಾನು ಚಿಕ್ಕಂದಿನಿಂದಲೂ ಹೆಚ್ಚು ಓದುತ್ತಿದ್ದೆ. ಕರ್ಣ ಈಗಲೂ ನನ್ನ ನೆಚ್ಚಿನ ಪಾತ್ರವಾಗಿದೆ. ಈಗಲೂ ಮಹಾಭಾರತದ ಯಾವುದೇ ಪುಸ್ತಕವನ್ನು ಓದುವಾಗ ದಾನಶೂರ ಕರ್ಣನ ಪಾತ್ರ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ ಎಂದು ರಾಜಮೌಳಿ ಹೇಳಿದರು.

Baahubali director S S Rajamouli participated in Manipal MIT diamond jubilee

ಪೌರಾಣಿಕ ಕತೆಗಳ ಬಗ್ಗೆ ತಮಗೆ ವಿಶೇಷ ಮೋಹ ಏಕೆ ಎಂದು ಪ್ರಶ್ನಿಸಿದಾಗ, ಪೌರಾಣಿಕ ಕತೆಗಳನ್ನು ನಾನು ಅಜ್ಜಿ ಕೇಳುತ್ತಾ, ಪುಸ್ತಕಗಳನ್ನು ಓದುತ್ತಾ ಬೆಳೆದವನು. ಆದುದರಿಂದ ಪೌರಾಣಿಕತೆ ನನ್ನ ರಕ್ತದಲ್ಲಿದೆ. ಅದೀಗ ಚಿತ್ರದ ಮೂಲಕ ಹೊರಬರುತ್ತಿದೆ

ನಾನು ನನ್ನ ವೈಯಕ್ತಿಕ ಬದುಕಿನಂತೆ, ವೃತ್ತಿಪರ ಬದುಕಿನಲ್ಲೂ ಭಾರೀ ಯಶಸ್ಸನ್ನು ಕಂಡುಕೊಂಡಿದ್ದೇನೆ. ನನ್ನ ಪತ್ನಿಗೆ ನಾನು ಜಗತ್ತಿನ ಅತ್ಯುತ್ತಮ ಪತಿ ಎಂದು ಮನವರಿಕೆ ಮಾಡಿದ್ದೇನೆ.

Baahubali director S S Rajamouli participated in Manipal MIT diamond jubilee

ಅದೇ ರೀತಿ ವೃತ್ತಿ ಬದುಕಿನಲ್ಲಿ ನನ್ನ ಚಿತ್ರಗಳು 'ದಿ ಬೆಸ್ಟ್' ಎಂದು ಪ್ರೇಕ್ಷಕರನ್ನು ನಂಬಿಸಿದ್ದೇನೆ ಎಂದು ರಾಜಮೌಳಿ, ಯಶಸ್ಸಿಗೆ ಪ್ರಮುಖ ಕಾರಣ ಕಠಿಣ ಶ್ರಮ ಹಾಗೂ ಪ್ರಾಮಾಣಿಕತೆ ಎಂದರು.

English summary
The 'Baahubali' fame director, Padma Shree S S Rajamouli paid a visit to MIT Manipal campus as part of the diamond jubilee lecture series of the institute on Friday, September 22. Excitement was in the air as students of Manipal Institute of Technology welcomed Tollywood film director and screen writer S S Rajamouli with non-stop whistles and chanting of his name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X