ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಸೆಕ್ಷನ್ 144, ಕರ್ಫ್ಯೂ ಜಾರಿ

|
Google Oneindia Kannada News

ಮಂಗಳೂರು, ಆ 3: ಬಹು ನಿರೀಕ್ಷಿತ ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ, ಆಗಸ್ಟ್ ಐದರಂದು ನಡೆಯಲಿರುವುದರಿಂದ, ಮಂಗಳೂರು ನಗರದಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿ ಮಾಡಿ, ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು | Oneindia Kannada

"ಆಗಸ್ಟ್ ನಾಲ್ಕು ರಾತ್ರಿ ಎಂಟು ಗಂಟೆಯಿಂದ, ಆಗಸ್ಟ್ ಆರು, ಬೆಳಗ್ಗೆ ಆರು ಗಂಟೆಯವರೆಗೆ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ" ಎಂದು ನಗರದ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ಹೇಳಿದ್ದಾರೆ.

ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತ ಕೊಟ್ಟ ಬೆಳಗಾವಿ ಸ್ವಾಮೀಜಿಗೆ ಬೆದರಿಕೆ ಕರೆರಾಮಮಂದಿರ ಭೂಮಿ ಪೂಜೆಗೆ ಮುಹೂರ್ತ ಕೊಟ್ಟ ಬೆಳಗಾವಿ ಸ್ವಾಮೀಜಿಗೆ ಬೆದರಿಕೆ ಕರೆ

"ಭೂಮಿ ಪೂಜೆಯ ದಿನ ಸಮಾಜ ವಿರೋಧಿ ಸಂಘಟನೆಗಳು ವಿಧ್ವಂಸ ಕೃತ್ಯ ಎಸಗುವ ಸಾಧ್ಯತೆಯ ಬಗ್ಗೆ ವರದಿಗಳು ಬಂದಿರುವ ಹಿನ್ನಲೆಯಲ್ಲಿ ನಿಷೇಧಾಜ್ಞೆ ಹೇರಲಾಗುತ್ತಿದೆ"ಎಂದು ಆಯುಕ್ತರು ಹೇಳಿದ್ದಾರೆ.

Ayodhya Ram Mandir Bhoomi Pooja Day: Section 144 Imposed In Mangaluru Commissionerate Limit

"ಈ ಅವಧಿಯಲ್ಲಿ ಐದು ಜನರಿಗಿಂತ ಜಾಸ್ತಿ ಎಲ್ಲೂ ಗುಂಪು ಸೇರುವಂತಿಲ್ಲ. ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ" ಎಂದು ಕಮಿಷನರ್ ವಿಕಾಶ್ ಹೇಳಿದ್ದಾರೆ.

ಆಗಸ್ಟ್ ಐದರಂದು ಕೆಲವು ಸಂಘಟನೆಗಳು ಮಂದಿರ ನಿರ್ಮಾಣ ಬೆಂಬಲಿಸಿ ಕಾರ್ಯಕ್ರಮವನ್ನು ಆಯೋಜಿಸಿವೆ. ಅದೇ ರೀತಿ, ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುವುದಕ್ಕೂ ಪೂರ್ವ ತಯಾರಿ ನಡೆಸಿರುವುದರಿಂದ, ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಪೊಲೀಸ್ ಇಲಾಖೆಯಿಂದ ಹೊರಬಿದ್ದಿದೆ.

ರಾಮ ಮಂದಿರ ಭೂಮಿ ಪೂಜೆಗೆ ಕರ್ನಾಟಕದ 8 ಗಣ್ಯರಿಗೆ ಆಹ್ವಾನರಾಮ ಮಂದಿರ ಭೂಮಿ ಪೂಜೆಗೆ ಕರ್ನಾಟಕದ 8 ಗಣ್ಯರಿಗೆ ಆಹ್ವಾನ

ಇತ್ತ, ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ, ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಗೆ ಮುಹೂರ್ತ ಕೊಟ್ಟಿರುವ, ಬೆಳಗಾವಿಯ ವಿದ್ವಾಂಸ ವಿಜಯೇಂದ್ರ ಶರ್ಮಾ ಬೆದರಿಕೆ ಕರೆಗಳು ಬರುತ್ತಿವೆ ಎಂದು ವರದಿಯಾಗಿದೆ.

English summary
Ayodhya Ram Mandir Bhoomi Pooja Day: Section 144 Imposed In Mangaluru Commissionerate Limits
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X