ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್‌ ತನಿಖಾ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮ

By Ashwath
|
Google Oneindia Kannada News

ಪೊಲೀಸ್‌‌ ಇಲಾಖೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಸುದ್ದಿ ಪ್ರಕಟವಾಗುತ್ತಿರುತ್ತದೆ. ಈ ಸುದ್ದಿ ಪ್ರಕಟವಾದಾಗ ಸಾಮಾನ್ಯ ಜನರಿಗೆ ಪೊಲೀಸ್ ಇಲಾಖೆಯಿಂದ ಮಾನವ ಹಕ್ಕಿನ ಉಲ್ಲಂಘನೆ ಹೇಗೆ ಆಗುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಪೊಲೀಸರು ಅಪರಾಧಿಗಳೆಂದು ಕೆಲವೊಂದು ವ್ಯಕ್ತಿಗಳನ್ನು ಬಂಧಿಸಬೇಕಾದಲ್ಲಿ ಮಾನವ ಹಕ್ಕು ಕಾಯ್ದೆ ಪ್ರಕಾರ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ಇಲ್ಲಿ ಇನ್‌‌‌ಫೋಗ್ರಾಫಿಕ್‌‌ನಲ್ಲಿ ಮಾಹಿತಿ ನೀಡಲಾಗಿದೆ.

ಈ ಇನ್‌ಫೋಗ್ರಾಫಿಕ್‌ನ್ನು ಮಂಗಳೂರಿನ ಹ್ಯೂಮನ್‌ ರೈಟ್‌ ಫೆಡರೇಷನ್‌ ಆಫ್‌ ಇಂಡಿಯಾ ಸಿದ್ದಪಡಿಸಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಇನ್‌‌ಫೋಗ್ರಾಫಿಕ್‌ ಮಾಹಿತಿಯನ್ನು ಓದಿಕೊಂಡು ಹೋಗಿ.

 ಪೊಲೀಸ್ ಸಿಬ್ಬಂದಿ ಹೌದೋ? ಅಲ್ಲವೋ?

ಪೊಲೀಸ್ ಸಿಬ್ಬಂದಿ ಹೌದೋ? ಅಲ್ಲವೋ?

ದಸ್ತಗಿರಿ ಮಾಡುವ ಹಾಗೂ ದಸ್ತಗಿರಿಯಾದ ವ್ಯಕ್ತಿಯನ್ನು ವಿಚಾರಣೆ ಮಾಡುವ ಪೊಲೀಸ್ ಸಿಬ್ಬಂದಿ ಸ್ಪಷ್ಟವಾದ, ಖಚಿತವಾದ ಗುರುತಿನ ಚೀಟಿ ಮತ್ತು ನಾಮಫಲಕವನ್ನು ಹೊಂದಿರಬೇಕು.ವಿಚಾರಣೆ ನಡೆಸುವ ಪೊಲೀಸ್ ಸಿಬ್ಬಂದಿಯ ವಿವರಗಳನ್ನು ನೋಂದಣಿ ಪುಸ್ತಕದಲ್ಲಿ ದಾಖಲೆ ಮಾಡಬೇಕು.

 ಸಾಕ್ಷಿದಾರ ಸಹಿ ಹಾಕಬೇಕು:

ಸಾಕ್ಷಿದಾರ ಸಹಿ ಹಾಕಬೇಕು:

ದಸ್ತಗಿರಿ ಸಮಯದಲ್ಲಿ ಸಂಬಂಧಿತ ಪೊಲೀಸ್ ಅಧಿಕಾರಿ ದಸ್ತಗಿರಿ ಜ್ಞಾಪನವನ್ನು ಸಿದ್ಧಪಡಿಸಬೇಕು. ಆ ಜ್ಞಾಪನವನ್ನು ಒಬ್ಬ ಸಾಕ್ಷಿದಾರ ದೃಢೀಕರಿಸಬೇಕು. ಸಾಕ್ಷಿದಾರ ದಸ್ತಗಿರಿಯಾಗುತ್ತಿರುವ ವ್ಯಕ್ತಿಯ ಸಂಬಂಧಿಯಾಗಿರಬಹುದು ಅಥವಾ ದಸ್ತಗಿರಿ ನಡೆದ ಪ್ರದೇಶದ ವ್ಯಕ್ತಿ ಯಾಗಿರಬಹುದು. ದೃಢೀಕರಿಸಿದ ಪತ್ರಕ್ಕೆ ದಸ್ತಗಿರಿಯಾದವನು ಮೇಲು ರುಜು ಹಾಕಬೇಕು. ಪತ್ರದಲ್ಲಿ ಸಮಯ ಹಾಗೂ ದಿನಾಂಕವನ್ನು ನಮೂದಿಸುವುದು.

 ಮಾಹಿತಿ ನೀಡುವುದು ಹೇಗೆ?

ಮಾಹಿತಿ ನೀಡುವುದು ಹೇಗೆ?

ಜ್ಞಾಪನ ಪತ್ರವನ್ನು ದೃಢೀಕರಿಸುವ ಸಾಕ್ಷಿದಾರ, ದಸ್ತಗಿರಿಯಾದ ವ್ಯಕ್ತಿಯ ಸಂಬಂಧಿ ಅಥವಾ ಪರಿಚಯದ ವ್ಯಕ್ತಿಯಾಗಿಲ್ಲದಿದ್ದಲ್ಲಿ, ದಸ್ತಗಿರಿಯಾಗಿರುವ/ಬಂಧನಕ್ಕೊಳಗಾಗಿರುವ ವ್ಯಕ್ತಿಯು ತನ್ನ ಕಲ್ಯಾಣದ ಬಗ್ಗೆ ಆಸಕ್ತಿಯುಳ್ಳ ಯಾವುದೇ ಒಬ್ಬ ವ್ಯಕ್ತಿಗೆ ತನ್ನ ದಸ್ತಗಿರಿ/ಬಂಧನ ಕುರಿತಂತೆ ಮಾಹಿತಿ ನೀಡುವ ಹಕ್ಕನ್ನು ಹೊಂದಿರುತ್ತಾನೆ.

 ದೂರದ ವ್ಯಕ್ತಿಗಳಿಗೆ ಮಾಹಿತಿ ನೀಡುವುದು

ದೂರದ ವ್ಯಕ್ತಿಗಳಿಗೆ ಮಾಹಿತಿ ನೀಡುವುದು

ದಸ್ತಗಿರಿಯಾದ ವ್ಯಕ್ತಿಯ ಸಂಬಂಧಿ ಅಥವಾ ಸ್ನೇಹಿತ/ತೆ ದಸ್ತಗಿರಿಯಾದ ನಗರ ಅಥವಾ ತಾಲ್ಲೂಕಿನ ಹೊರಗಡೆ ವಾಸಿಸುತ್ತಿದ್ದ ಸಂದರ್ಭದಲ್ಲಿ, ಅವರಿಗೆ ಸಂಬಂಧಿತ ಪೊಲೀಸ್ ಸಿಬ್ಬಂದಿ ದಸ್ತಗಿರಿ ವಿಷಯವನ್ನು ದಸ್ತಗಿರಿ ಮಾಡಿದ 8 ರಿಂದ 12 ಗಂಟೆಯ ಅವಧಿಯೊಳಗೆ ತಿಳಿಸುವುದು.

ದೈಹಿಕ ಪರೀಕ್ಷೆ ಹೇಗೆ?

ದೈಹಿಕ ಪರೀಕ್ಷೆ ಹೇಗೆ?

ದಸ್ತಗಿರಿಗೊಳಪಟ್ಟ ವ್ಯಕ್ತಿ ತನ್ನನ್ನು ದೈಹಿಕ ಪರೀಕ್ಷೆಗೊಳಪಡಿಸ ಬೇಕೆಂದು ಕೋರಿದಲ್ಲಿ, ಆತನನ್ನು ಪರೀಕ್ಷಿಸಬೇಕು. ದೇಹದ ಮೇಲೆ ಯಾವುದೇ ದೊಡ್ಡ ಮತ್ತು ಸಣ್ಣ ಗಾಯದ ಗುರುತುಗಳಿದ್ದರೆ, ಅವುಗಳನ್ನು ದಾಖಲು ಮಾಡಬೇಕು. ಪರೀಕ್ಷಾ ಜ್ಞಾಪನ ಪತ್ರಕ್ಕೆ ದಸ್ತಗಿರಿಯಾದ ವ್ಯಕ್ತಿ ಮತ್ತು ದಸ್ತಗಿರಿ ಮಾಡಿರುವ ಪೊಲೀಸ್ ಅಧಿಕಾರಿ ಇಬ್ಬರು ಸಹಿ ಹಾಕಬೇಕು. ಅದರ ಪ್ರತಿಯನ್ನು ದಸ್ತಗಿರಿಯಾದ ವ್ಯಕ್ತಿಗೆ ನೀಡುವುದು.

48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ

48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆ

ದಸ್ತಗಿರಿಗೊಳಪಟ್ಟಿರುವ ವ್ಯಕ್ತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ನಿರ್ದೇಶಕರಿಂದ ನೇಮಕವಾದ ಅನುಮೋದಿತ ಪಟ್ಟಿಯಲ್ಲಿರುವ ಒಬ್ಬ ವೈದ್ಯರಿಂದ ಪ್ರತಿ 48 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೊಳಪಡಿಸುವುದು.

ದಸ್ತಗಿರಿಯ ಜ್ಞಾಪನವು ಸೇರಿದಂತೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಕಳುಹಿಸಿ ಕೊಡುವುದು.

 ವಕೀಲರಿಗೆ ಭೇಟಿಗೆ ಅವಕಾಶ

ವಕೀಲರಿಗೆ ಭೇಟಿಗೆ ಅವಕಾಶ

ಬಂಧನಕ್ಕೊಳಗಾದ ವ್ಯಕ್ತಿಯನ್ನು ಭೇಟಿ ಮಾಡಲು ಬರುವ ವಕೀಲರಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಡುವುದು.

 ಅನುಮತಿ ನೀಡುವುದು:

ಅನುಮತಿ ನೀಡುವುದು:

ಬಂಧನಕ್ಕೊಳಗಾದ ವ್ಯಕ್ತಿಯನ್ನು ಪ್ರಶ್ನಿಸುವ ಸಮಯದಲ್ಲಿ ಆತ/ಆಕೆ ತನ್ನ ವಕೀಲರನ್ನು ಜೊತೆಯಲ್ಲಿ ಭಾಗಶಃ ಹೊಂದಿರಲು ಅನುಮತಿ ನೀಡುವುದು.

ನಿಯಂತ್ರಣ ಕೊಠಡಿಗೆ ಮಾಹಿತಿ

ನಿಯಂತ್ರಣ ಕೊಠಡಿಗೆ ಮಾಹಿತಿ

ನಿಯಂತ್ರಣ ಕೊಠಡಿಗೆ ದಸ್ತಗಿರಿಯಾದ / ಬಂಧನದಲ್ಲಿಟ್ಟಿರುವ ವ್ಯಕ್ತಿಯ ವಿವರ ಹಾಗೂ ಇಟ್ಟಿರುವ ಸ್ಥಳ ಕುರಿತ ಮಾಹಿತಿಯನ್ನು ದಸ್ತಗಿರಿ ಮಾಡಿರುವ ಪೊಲೀಸ್ ಅಧಿಕಾರಿ ದಸ್ತಗಿರಿ / ಬಂಧನ ಮಾಡಿದ ೧೨ ಗಂಟೆಗಳೊಳಗೆ ತಿಳಿಸಬೇಕು. ಈ ಮಾಹಿತಿಯನ್ನು ಪೊಲೀಸ್ ನಿಯಂತ್ರಣ ಕೊಠಡಿ ಯಲ್ಲಿ ಎದ್ದು ಕಾಣುವಂತಹ ಸೂಚನಫಲಕದಲ್ಲಿ ಪ್ರದರ್ಶಿಸಬೇಕು.

 ವಿಚಾರಣೆ ಹೇಗೆ?

ವಿಚಾರಣೆ ಹೇಗೆ?

* ಬಂಧಿತ ವ್ಯಕ್ತಿಯನ್ನು ಪ್ರಶ್ನಿಸುವಾಗ, ಆತನಿಗೆ/ಆಕೆಗೆ ಇರುವ ಜೀವನದ, ಸ್ವಾತಂತ್ರ್ಯದ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳ ಹಾಗೂ ಚಿತ್ರಹಿಂಸೆ ಮತ್ತು ಅವಹೇಳನದ ವಿರುದ್ಧ ಇರುವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು.
* ಯಾವುದೇ ವ್ಯಕ್ತಿಯನ್ನು ಅಧಿಕೃತ ಬಂಧನಕ್ಕೆ ಒಳಪಡಿಸದೆ ಪೊಲೀಸ್ ಠಾಣೆಯಲ್ಲಿ ಇರಲು ಒತ್ತಾಯಿಸಲಾಗದು.
* ಬಂಧಿತ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡ ಸಮಯದಿಂದ 24 ಗಂಟೆಯೊಳಗೆ ಸಂಬಂಧಪಟ್ಟ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು.
*ಯಾವುದೇ ವ್ಯಕ್ತಿಯನ್ನು ದಸ್ತಗಿರಿಗೊಳಪಡಿಸುವ ಸಮಯದಲ್ಲಿ ಆ ವ್ಯಕ್ತಿಯ ಮೇಲೆ ಗಾಯಗಳು ಇದ್ದಲ್ಲಿ, ಅವುಗಳನ್ನು ಬಂಧನದ ನೋಂದಣಿ ಪುಸ್ತಕದಲ್ಲಿ ನಮೂದಿಸಲಾಗುವುದು.
* ಅವಶ್ಯಕತೆಯಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ಮಾಡುವಾಗ ಬಲಪ್ರಯೋಗ ಮಾಡುವಂತಿಲ್ಲ.

English summary
When police arrests or detains any person, what kind of procedure police should follow? Human Rights Federation of India in Mangalore has listed 12 important points a citizen should be aware of, when police detains or arrests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X