ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಪೊಲೀಸ್ ಠಾಣೆಯಲ್ಲೇ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 15; ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣವೊಂದರ ಮಾತುಕತೆಗೆ ಠಾಣೆಗೆ ಆಗಮಿಸಿದ್ದ ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಉರ್ವ ಠಾಣೆಯಲ್ಲಿ ನಡೆದಿದೆ.

ಉರ್ವ ಪೊಲೀಸ್ ಠಾಣಾ ಸಿಬ್ಬಂದಿ ಪೂಜಾ ಹಿರೇಮಠ ಮತ್ತು ನಾರಾಯಣ ಹಲ್ಲೆಗೊಳಗಾದವರು. ಪ್ರಕರಣವೊಂದರ ಮಾತುಕತೆಗೆ ಉರ್ವ ಪೊಲೀಸ್ ಠಾಣೆಗೆ ಬುಧವಾರ ರಾತ್ರಿ ಮಂಗಳೂರು ನಗರ ನಿವಾಸಿಗಳಾದ ನೋವೆಲ್ ಸೀಕ್ವೇರಾ, ಜಾನ್ ಸೀಕ್ವೇರಾ ಮತ್ತೊಬ್ಬಳು ಯುವತಿ ಆಗಮಿಸಿದ್ದರು.

ಚಾಮರಾಜನಗರ; ಮೊದಲ ಮಹಿಳಾ ಎಸ್ಪಿ ವರ್ಗಾವಣೆ ಚಾಮರಾಜನಗರ; ಮೊದಲ ಮಹಿಳಾ ಎಸ್ಪಿ ವರ್ಗಾವಣೆ

ಪೊಲೀಸ್ ಅಧಿಕಾರಿಯ ಜೊತೆ ಮಾತುಕತೆ ನಡೆಸುತ್ತಿರುವ ವೇಳೆ ನೋವೆಲ್ ಸ್ವೀಕ್ವೇರಾ ಮೊಬೈಲ್‌ನಲ್ಲಿ ಮಾತುಕತೆಯ ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿದ ಪೂಜಾ ಹಿರೇಮಠ ವಿಡಿಯೋ ಮಾಡದಂತೆ ತಾಕೀತು ಮಾಡಿದ್ದಾರೆ.

ಉತ್ತರ ಕನ್ನಡದ ಮೊದಲ ಮಹಿಳಾ ಎಸ್ಪಿಯಾಗಿ ವರ್ತಿಕಾ ಕಟಿಯಾರ್ ನೇಮಕ ಉತ್ತರ ಕನ್ನಡದ ಮೊದಲ ಮಹಿಳಾ ಎಸ್ಪಿಯಾಗಿ ವರ್ತಿಕಾ ಕಟಿಯಾರ್ ನೇಮಕ

Attack On Woman Police Constable Three Arrested

ಪೊಲೀಸರ ಎಚ್ಚರಿಕೆಯ ಬಳಿಕವೂ ನೋವೆಲ್ ವಿಡಿಯೋ ಮಾಡಿದ್ದು, ಪೂಜಾ ಮೊಬೈಲ್ ಕಿತ್ತುಕೊಂಡಿದ್ದಾರೆ. ಈ ವೇಳೆ ಕಿತ್ತುಕೊಂಡ ಮೊಬೈಲ್ ವಾಪಸ್ ಕೊಡುವಂತೆ ನೋವೇಲ್ ಸೀಕ್ವೇರಾ ಪೊಲೀಸ್ ಸಿಬ್ಬಂದಿ ಪೂಜಾ ಹಿರೇಮಠ ಮೇಲೆ ದಾಳಿ ಮಾಡಿದ್ದಾನೆ.

ಮಂಗಳೂರು; ವಿದ್ಯಾರ್ಥಿನಿಯಿಂದ ಲಂಚ, ಪ್ರೊಫೆಸರ್‌ಗೆ 5 ವರ್ಷ ಜೈಲು ಮಂಗಳೂರು; ವಿದ್ಯಾರ್ಥಿನಿಯಿಂದ ಲಂಚ, ಪ್ರೊಫೆಸರ್‌ಗೆ 5 ವರ್ಷ ಜೈಲು

ಜೊತೆಗಿದ್ದ ಸಿಬ್ಬಂದಿ ನಾರಾಯಣ್ ಮೇಲೂ ನೋವೇಲ್ ಸೇರಿದಂತೆ ಮತ್ತಿಬ್ಬರೂ ದಾಳಿ ಮಾಡಿದ್ದು, ಪೊಲೀಸರು ಯುವತಿ ಸೇರಿದಂತೆ ಮೂವರನ್ನೂ ಬಂಧಿಸಿದ್ದಾರೆ. ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

English summary
Three people arrested for attack on woman police constable at Mangaluru Urwa police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X