ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂಟುತ್ತಾ, ತೆವಳುತ್ತಾ ಸಾಗಿದ ಮಂಗಳೂರು ಪಂಪ್​ವೆಲ್ ಫ್ಲೈಓವರ್ ಕೊನೆಗೂ ಸಂಚಾರಕ್ಕೆ ಮುಕ್ತ

|
Google Oneindia Kannada News

ಮಂಗಳೂರು, ಜ 29: ಕರಾವಳಿ ಭಾಗದಲ್ಲಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇನ್ನಿಲ್ಲದಂತೇ ಟ್ರೋಲ್ ಆಗಲು ಕಾರಣವಾಗಿದ್ದ ನಗರದ ಪಂಪ್​ವೆಲ್ ಮೇಲ್ಸೇತುವೆ ಕೊನೆಗೂ ಸಂಚಾರಕ್ಕೆ ಮುಕ್ತವಾಗಲಿದೆ.

ಬುಧವಾರ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳ ಜೊತೆ ಕಾಮಗಾರಿಯನ್ನು ವೀಕ್ಷಿಸಿದ, ಈ ಭಾಗದ ಸಂಸದರೂ ಆಗಿರುವ ನಳಿನ್ ಕಟೀಲ್, ಉದ್ಘಾಟನೆಯ ದಿನಾಂಕವನ್ನು ಪ್ರಕಟಿಸಿದರು.

ವಿದ್ಯುತ್ ಬಿಲ್ ಕೇಳಿದ್ದಕ್ಕೆ ಮೆಸ್ಕಾಂ ಸಿಬ್ಬಂದಿ ಮೇಲೆ ಯು.ಟಿ.ಖಾದರ್ ಆಪ್ತ ಹಲ್ಲೆವಿದ್ಯುತ್ ಬಿಲ್ ಕೇಳಿದ್ದಕ್ಕೆ ಮೆಸ್ಕಾಂ ಸಿಬ್ಬಂದಿ ಮೇಲೆ ಯು.ಟಿ.ಖಾದರ್ ಆಪ್ತ ಹಲ್ಲೆ

ಇದೇ ಶುಕ್ರವಾರ, ಜನವರಿ 31ರಂದು ಬೆಳಗ್ಗೆ ಈ ಫ್ಲೈ ಓವರ್ ಉದ್ಘಾಟನೆಗೊಳ್ಳಲಿದ್ದು, ಅಂದೇ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಸಂಸದ ಕಟೀಲ್ ಹೇಳಿದರು.

At Last Pumpwell Fly Over In Mangaluru Free For Traffic From Jan 31st

ಹತ್ತು ವರ್ಷಗಳ ಹಿಂದೆ ಈ ಫ್ಲೈ ಓವರ್ ಕಾಮಗಾರಿಯ ಗುತ್ತಿಗೆಯನ್ನು ನವಯುಗ ಕಂಪೆನಿ ಪಡೆದುಕೊಂಡಿತ್ತು. ಮೂರು ವರ್ಷದೊಳಗೆ, ಅಂದರೆ 2013ರಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ, ಟೆಂಡರ್ ಪಡೆದುಕೊಂಡಿತ್ತು.

600 ಮೀಟರ್ ಉದ್ದದ ಈ ಫ್ಲೈಓವರ್ ಕಾಮಗಾರಿ ಮುಗಿಸಲು, ನವಯುಗ ಸಂಸ್ಥೆ, ಹಲವು ಗಡುವುಗಳನ್ನು ಪಡೆದುಕೊಂಡಿತ್ತು. ಆದರೂ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾಮಾಜಿಕ ತಾಣಗಳಲ್ಲಿ ಫ್ಲೈಓವರ್ ಕಾಮಗಾರಿ ಮತ್ತು ಸಂಸದ ಕಟೀಲ್, ಭಾರೀ ಟ್ರೋಲ್ ಗೆ ಒಳಗಾಗಿದ್ದರು.

ಹತ್ತು ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಸಾಗಿದ್ದ ಪಂಪ್​ವೆಲ್ ಫ್ಲೈಓವರ್ ಕಾಮಗಾರಿ 2019ರ ಡಿಸೆಂಬರ್ ವೇಳೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ಸಂಸದ ನಳಿನ್ ಕಟೀಲ್ ಈ ಹಿಂದೆ ಭರವಸೆ ನೀಡಿದ್ದರು.

English summary
At Last Pumpwell Fly Over In Mangaluru (Dakshina Kannada) Free For Traffic From Jan 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X