ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುರುಕುಗೊಂಡ ಮುಂಗಾರು: ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 10: ಕರಾವಳಿಯಲ್ಲಿ ಮುಂಗಾರು ಚುರುಕು ಪಡೆದಿದೆ. ಮಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಹಲವಾರು ಮರಗಳು ಧರೆಗುರುಳಿರುವ ಪರಿಣಾಮ 2 ಮನೆಗಳು ಜಖಂಗೊಂಡಿವೆ.

ನಗರದ ನಂತೂರು ಕದ್ರಿ ರಸ್ತೆಯಲ್ಲಿ ತಡರಾತ್ರಿ ಮಳೆಗೆ ರಸ್ತೆ ಕಾಣದೆ ಕಾರು ಚಾಲಕನೋರ್ವ ರಸ್ತೆ ಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಸುಮಾರು 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನಗರದ ಹಲವೆಡೆ ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

As many trees were damaged by rainfall Mangalore

In Pics : ಹುಚ್ಚೆದ್ದು ಹೊಡೆಯುತ್ತಿರುವ ಮಳೆಗೆ ಮುಳುಗಿದ ಮಂಗಳೂರು

ಇನ್ನು ಹಂಪನಕಟ್ಟೆಯಲ್ಲಿ ಭಾರೀ ಗಾತ್ರದ ಮರ ಧರಾಶಾಯಿಯಾಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ನಿನ್ನೆ ಇಡೀ ದಿನ ಸುರಿದಿದ್ದ ಮಳೆ ಇಂದು ಮುಂದುವರಿಯುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿ , ಹೊಳೆಗಳು ಉಕ್ಕಿ ಹರಿಯುತ್ತಿದೆ.

As many trees were damaged by rainfall Mangalore

ಕಡಲ ಅಬ್ಬರವೂ ಹೆಚ್ಚಾಗಿದ್ದು , ಜಿಲ್ಲಾಡಳಿತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

English summary
As many trees were damaged by rainfall Mangalore yesterday. More than 30 electric pillars have fallen through the city for heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X