ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿದ ವಿಟ್ಲದ ಅಪರ್ಣಾ

|
Google Oneindia Kannada News

ಮಂಗಳೂರು ಜೂನ್ 22: ಹಲಸಿನ ಕಾಯಿ, ಹಣ್ಣು, ಹಲಸಿನ ಬೀಜ ಎಲ್ಲದರಿಂದಲೂ ಖಾದ್ಯಗಳನ್ನು ತಯಾರಿಸಬಹುದು. ಹಲಸಿನ ಹಣ್ಣಿನ ಐಸ್‌ಕ್ರೀಂ, ಐಸ್‌ ಕ್ಯಾಂಡಿ, ಹೋಳಿಗೆ, ಹಲಸಿನ ಹಣ್ಣಿನ ಹಲ್ವ, ಚಾಟ್ಸ್, ಗುಜ್ಜೆ ಮಂಚೂರಿ, ಕಬಾಬ್, ಹಲಸು ರೋಸ್ಟ್, ಪಲಾವ್‌, ಪೋಡಿ, ಹಲಸಿನ ಬೀಜದ ಆಂಬೊಡೆ, ಹಲಸಿನಕಾಯಿ ಆಂಬೊಡೆ, ಹಲಸಿನ ಬೀಜದ ಜಾಮೂನ್ ಹೀಗೆ ಥರಾವರಿ ಖಾದ್ಯಗಳನ್ನು ತಯಾರಿಸಲಾಗುತ್ತಿದೆ.

 ಆನಂದ ಮಹೀಂದ್ರಾ ಆಕರ್ಷಿಸಿದ ಅಡಿಕೆ ಮರವೇರುವ ಬೈಕ್ ಆನಂದ ಮಹೀಂದ್ರಾ ಆಕರ್ಷಿಸಿದ ಅಡಿಕೆ ಮರವೇರುವ ಬೈಕ್

ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಕೆಲವು ವರ್ಷಗಳಿಂದ ಹೊಸ ಹೊಸ ಆವಿಷ್ಕಾರಗಳೂ ನಡೆಯುತ್ತಲೇ ಇವೆ. ಆದರೆ ಹಲಸನ್ನು ಖಾದ್ಯವಾಗಿ ಮಾತ್ರವಲ್ಲ, ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ವಿಟ್ಲದ ಅಪರ್ಣಾ.

Aparna Harish from bantwal prepared soap by Jack fruit

ನಮ್ಮ ಆರೋಗ್ಯಕ್ಕೆ, ಸೌಂದರ್ಯಕ್ಕೆ ಲಾಭದಾಯಕವಾದ ಹಲವಾರು ಪೋಷಕಾಂಶಗಳನ್ನು ಹಲಸು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಕಬ್ಬಿಣಂಶಗಳಿವೆ. ನಾರಿನಂಶ ಕೂಡ ಹೇರಳವಾಗಿದೆ.
ಇದನ್ನೇ ಗಮನಿಸಿದ ಬಂಟ್ವಾಳ ತಾಲೂಕಿನ ವಿಟ್ಲದ ಅಪರ್ಣಾ ಹರೀಶ್‌ ಅವರು ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಅಪರ್ಣಾ ಹರೀಶ್‌, ಹಲಸಿನ ತೊಳೆ, ಕ್ಯಾಲಮಿನ್ ಪೌಡರ್‌, ತೆಂಗಿನೆಣ್ಣೆ, ಹರಳೆಣ್ಣೆಯನ್ನು ಬೆರೆಸಿ ತಯಾರಿಸಿರುವ ಈ ಸೋಪು ವಿಟಮಿನ್‌ ಸಿ ಮತ್ತು ಡಿ ಅಂಶಗಳನ್ನು ಒಳಗೊಂಡಿದೆ.

 ಹೊಸಗುಂದದಲ್ಲಿ ವಿಶಿಷ್ಟ ವನಮಹೋತ್ಸವ, ಹಲಸು ಗಿಡಗಳ ವಿತರಣೆ ಹೊಸಗುಂದದಲ್ಲಿ ವಿಶಿಷ್ಟ ವನಮಹೋತ್ಸವ, ಹಲಸು ಗಿಡಗಳ ವಿತರಣೆ

Aparna Harish from bantwal prepared soap by Jack fruit

ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿರುವ ಅಪರ್ಣಾ ಅವರು ತಾವು ತಯಾರಿಸಿದ ಸೋಪ್ ‌ಗೆ 'ಝ್ಯ' ಎಂದು ಹೆಸರಿಟ್ಟಿದ್ದಾರೆ. ಸೋಪು ತಯಾರಿಕೆ ನಂತರ, ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್‌ ಆವಿಷ್ಕರಿಸುವ ಆಲೋಚನೆಯೂ ಇದೆ.

English summary
Aparna Harish hailing from Vittla near Bantwal prepared Soap from Jack fruit. By this, aparna proved that jack fruit can also be beauty product.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X