• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಫ್ಐ ನಾಯಕರ ಮೇಲಿನ ಕೇಸ್ ಹಿಂಪಡೆದ ದಾಖಲೆ ಇದ್ದರೆ ಬಹಿರಂಗಪಡಿಸಿ; ಬಿಜೆಪಿಗೆ ಯುಟಿ ಖಾದರ್ ಸವಾಲ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 24: ಕಾಂಗ್ರೆಸ್ ಪಿಎಫ್ಐ ನಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆದ ದಾಖಲೆಗಳಿದ್ದರೆ ಬಿಜೆಪಿ ಸರ್ಕಾರ ಬಹಿರಂಗಪಡಿಸಲಿ ಎಂದು ಮಂಗಳೂರಿನಲ್ಲಿ ವಿಧಾನಸಭಾ ಪ್ರತಿಪಕ್ಷದ ಉಪನಾಯಕ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಢಿ ನಡೆಸಿದ ಅವರು, ಕಾಂಗ್ರೆಸ್ ನಿಂದ ಪಿಎಫ್ಐ ಒಲೈಕೆಯ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಮಾಜದಲ್ಲಿ ಅಶಾಂತಿ, ಭಯ ಕೊಲೆ ಮಾಡುವ ಯಾರೇ ಆಗಲಿ ಅವರ ವಿರುದ್ಧ ಸಾಕ್ಷ್ಯಾಧಾರ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ಈ ಕಾನೂನುನ್ನು ಅನ್ವಯ ಮಾಡಬೇಕು. ರಾಜ್ಯದಲ್ಲಿ ಈಗ ಸರ್ಕಾರ ಬಿಜೆಪಿ ನಡೆಸುತ್ತಿದೆ. ನಾವು ಪಿಎಫ್ಐ ನಾಯಕರ ಕೇಸ್ ಹಿಂಪಡೆದ ಸಾಕ್ಷಿ ತೋರಿಸಲಿ‌. ಸರ್ಕಾರದ ಬಳಿ ದಾಖಲೆ ಇದ್ದರೆ ತೋರಿಸಲಿ. ನಮ್ಮ ಅವಧಿಯಲ್ಲಿ ಗುಂಪು ಗಲಭೆ, ರೈತರ ಹೋರಾಟ ಆದಾಗ ಆಗ ಹಾಕಿದ ಕೇಸ್‌ಗಳನ್ನು ಹಿಂಪಡೆದಿರಬಹುದು. ಬಿಜೆಪಿ ಅಪಪ್ರಚಾರ ಮಾಡುವ ಬದಲು ಸಾಕ್ಷ್ಯಾಧಾರವನ್ನು ತೋರಿಸಲಿ. ಇವರ ಕಾಲದಲ್ಲಿ ಯಾರ ಕೇಸ್ ಹಿಂಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಯುಟಿ ಖಾದರ್ ಸವಾಲೆಸಿದಿದ್ದಾರೆ.

ಅಧಿಕಾರ ಪಡೆಯಲು ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಶುರುಮಾಡಿಕೊಂಡಿದೆ: ಸಿಎಂ ಬೊಮ್ಮಾಯಿಅಧಿಕಾರ ಪಡೆಯಲು ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಶುರುಮಾಡಿಕೊಂಡಿದೆ: ಸಿಎಂ ಬೊಮ್ಮಾಯಿ

ಇನ್ನು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಯುಟಿ ಖಾದರ್ ತಮಿಳುನಾಡಿನಿಂದ ಕೇರಳರವರೆಗೆ ಯಾತ್ರೆ ತಲುಪಿದೆ. ಅಕ್ಟೋಬರ್2 ರಂದು ಚಾಮರಾಜನಗರದ ಗುಂಡ್ಲುಪೇಟೆಗೆ ಯಾತ್ರೆ ಬರಲಿದೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಐದು ಸಾವಿರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಮೂರುವರೆ ಸಾವಿರ ಕೀಮೀ ನಡೆಯುವ ಒಬ್ಬನೇ ನಾಯಕ ಇದ್ದರೆ ಅದು ರಾಹುಲ್ ಗಾಂಧಿ ಮಾತ್ರ.

ರಾಹುಲ್ ಗಾಂಧಿ ಸರ್ವ ಜನರನ್ನು ಬೆರೆಸುವ ಉದ್ದೇಶದಿಂದ ಈ ಯಾತ್ರೆ ಮಾಡುತ್ತಿದ್ದಾರೆ. ಅವಿಶ್ವಾಸ ಮೂಡಿಸುವ , ಜಾತಿ ಧರ್ಮ ಹೆಸರಿನಲ್ಲಿ ಒಡೆಯುವ ಕೆಲಸ ಸರ್ಕಾರ ಮಾಡುತ್ತಿದೆ. ರಾಹುಲ್ ಯಾತ್ರೆ ಸರ್ವರನ್ನು ಜೋಡಿಸುವ ಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಯಾರೂ ನೆಮ್ಮದಿಯಿಂದ ಜೀವನ ಮಾಡುತ್ತಿಲ್ಲ. ಮಕ್ಕಳಿಗೆ ಚಾಕಲೇಟ್ ತೆಗೆದು ಕೊಡಲೂ ಯೋಚನೆ ಮಾಡಬೇಕಾದ ಸ್ಥಿತಿ ದೇಶದಲ್ಲಿದೆ. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ಆದರೆ ಬಡವರು ಮಾತ್ರ ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗಳೂರು ದಸರಾ ಸೌಹಾರ್ದತೆ: ಶತಮಾನದ ಶಾರಾದಾಮಾತೆಗೆ ಮುಸ್ಲಿಂ ನೇಕಾರ ನೇಯ್ದ ಸೀರೆ!ಮಂಗಳೂರು ದಸರಾ ಸೌಹಾರ್ದತೆ: ಶತಮಾನದ ಶಾರಾದಾಮಾತೆಗೆ ಮುಸ್ಲಿಂ ನೇಕಾರ ನೇಯ್ದ ಸೀರೆ!

ಇನ್ನು ಸಾರ್ವಜನಿಕ ಸ್ಥಳದಲ್ಲಿ ಪೇಸಿಎಂ ಎಂಬ ಕಾಂಗ್ರೆಸ್ ಭಿತ್ತಿಪತ್ರದ ಬಗ್ಗೆ ಮಾತನಾಡಿದ ಯುಟಿ ಖಾದರ್, ಕಾಂಗ್ರೆಸ್ ಭಿತ್ತಿ ಪತ್ರ ಅಂಟಿಸಿದರೆ ಹೈ ಕೋರ್ಟ್ ಆದೇಶ ಉಲ್ಲಂಘನೆ ಎಂದು ಆಗುತ್ತದೆ. ಆದರೆ ಬಿಜೆಪಿಯವರು ಏನು ಬೇಕಾದರೂ ಮಾಡಬಹುದು. ಕಾಂಗ್ರೆಸ್ ಮಾಡಿದರೆ ಮಾತ್ರ ಕಾಣೋದು. ನಾವು ನಮ್ಮ ಅಭಿಯಾನವನ್ನು ಮಾಡುತ್ತೇವೆ. ಈ ಪ್ರಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿದ್ದು ಬಿಜೆಪಿ. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಪೋಸ್ಟರ್ ಹಾಕಿಲ್ವಾ. ಆಗ ಕಾನೂನು ಇರಲಿಲ್ವಾ ಎಂದು ಯುಟಿ ಖಾದರ್ ಪ್ರಶ್ನಿಸಿದರು.

English summary
BJP government should disclose if there are records of Congress party withdrawal of cases against PFI leaders, Deputy Leader of Opposition UT Khader said in Mangluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X