ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆರುವಾಜೆಯಲ್ಲಿ ಅಪರೂಪದ ಬುದ್ಧನ ವಿಗ್ರಹ ಪತ್ತೆ

By Prasad
|
Google Oneindia Kannada News

Ancient Buddha idol found in Dakshina Kannada
ಮಂಗಳೂರು, ಸೆ. 25 : ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಜಲದುರ್ಗ ದೇವಾಲಯದ ಬಳಿಯ ಗುಡ್ಡದಲ್ಲಿ ಸುಮಾರು 1800 ವರ್ಷ ಪ್ರಾಚೀನ ಬುದ್ಧನ ಮೂರ್ತಿ, ನಂದಿ, ಹುಲಿಯನ್ನು ಹೋಲುವ ವಿಗ್ರಹಗಳು ಪತ್ತೆಯಾಗಿವೆ.

ಸಿಕ್ಕಿದ ಬುದ್ಧನ ಮೂರ್ತಿಯ ಮುಖದ ಭಾಗ ವಿರೂಪಗೊಂಡಿದ್ದು ಸಂಘರ್ಷ ನಡೆದಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಈ ಬುದ್ಧನ ಮೂರ್ತಿ ಕ್ರಿಸ್ತ ಶಕ 6-7ನೇ ಶತಮಾನದ್ದು. ಇಲ್ಲಿ ಸಿಕ್ಕ ನಂದಿ ವಿಗ್ರಹದ ಕಣ್ಣುಗಳು ಉಬ್ಬಿ ಕೊಂಡಿವೆ. ಆದ್ದರಿಂದ ಇವುಗಳು ಕ್ರಿಸ್ತ ಶಕ ಎರಡನೇ ಶತಮಾನದ ಶಾತ ವಾಹನರ ಕಾಲದಲ್ಲಿ ನಿರ್ಮಾಣವಾಗಿವೆ ಎಂದು ಹೇಳಬಹುದು.

ಇಲ್ಲ್ಲಿಸಿಕ್ಕ ಮಾನವನ ಕಾಲಿನ ವಿಗ್ರಹದಲ್ಲಿ ಕಾಲುಂಗುರ ಇರುವುದರಿಂದ ಇದೊಂದು ಸ್ತ್ರೀ ವಿಗ್ರಹದ ಅವಶೇಷ ಎನ್ನಬಹುದು ಎಂದು ಬೆಳ್ಳಾರೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಲಕ್ಷ್ಮೀ ಜಿ ಪ್ರಸಾದ ಅವರು ಬೆಂಗಳೂರಿನ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಇತಿಹಾಸ ಅಕಾಡೆಮಿ ವಿಚಾರ ಸಂಕಿರಣದಲ್ಲಿ ತಿಳಿಸಿದರು.

ಪ್ರಾಚ್ಯವಸ್ತು ಸಂರಕ್ಷಣ ಇಲಾಖೆ ಮತ್ತ್ತಮಿಥಿಕ್ ಸೊಸೈಟಿ ಸಹಯೋಗದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಸೆಪ್ಟೆಂಬರ್ 21ರಿಂದ 23ರವರೆಗೆ 3 ದಿನಗಳ ವಾರ್ಷಿಕ ಸಮ್ಮೇಳನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು.

ಈ ವಿಚಾರ ಸಂಕಿರಣದಲ್ಲಿ ಪೆರುವಾಜೆಯಲ್ಲಿ ಪತ್ತೆಯಾದ ಅಪರೂಪದ ಬುದ್ಧನ ಮೂರ್ತಿ ಎಂಬ ವಿಷಯದಲ್ಲಿ ಸಂಪ್ರಬಂಧ ಮಂಡಿಸಿದ ಲಕ್ಷ್ಮೀಯವರು "ಸ್ಥಳೀಯರು ಇವನ್ನು ಭೂತಕ್ಕೆ ಸಂಬಂಧಿಸಿದ್ದೆಂದು ಭಾವಿಸಿ, ಭೂತದ ಗುಡಿಯಲ್ಲಿ ಪ್ರತಿಷ್ಠಾಪಿಸಿ ನಂತರ ಈ ವಿಗ್ರಹಗಳನ್ನು ಉಪ್ಪಿನಂಗಡಿ ಹೊಳೆಯಲ್ಲ್ಲಿಹಾಕುತ್ತಿದ್ದರು. ಇಂಥವನ್ನು ಅವರ ಕೈಯಿಂದ ಪಡೆದು ಸಂರಕ್ಷಿಸುವ ಕಾರ್ಯ ಆಗಬೇಕು" ಎಂದು ಹೇಳಿದರು.

English summary
Ancient Buddha idol, Nandi and Tiger resembling scruptures have been excavated in Perupaje in Dakshina Kannada district. Archeologists say Buddha idol belongs to 6th or 7th century AD. A seminar was organized in Mythic society in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X