ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್‌ ಕೇಸ್‌ನಲ್ಲಿ ಅನುಶ್ರೀ; ಸ್ಪಷ್ಟನೆ ನೀಡಿದ ಪೊಲೀಸ್ ಆಯುಕ್ತರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08; ನಿರೂಪಕಿ ಅನುಶ್ರೀ ಡ್ರಗ್ ಕೇಸ್ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಅನುಶ್ರೀ ಹೆಸರನ್ನು ಕೈಬಿಟ್ಟಿರುವ ಪೊಲೀಸರು 6 ಮಂದಿ ಆರೋಪಿಗಳ ವಿರುದ್ದ ಅಂತಿಮ ವರದಿ ಸಲ್ಲಿಸಿದ್ದಾರೆ.

ಚಾರ್ಜ್ ಶೀಟ್‌ನಲ್ಲಿ ಅನುಶ್ರೀಗೆ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ. ಆದರೆ ಈ ನಡುವೆ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಕಿಶೋರ್ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಳು ಎಂದು ಹೇಳಿಕೆ ನೀಡಿದ್ದು ಇದೀಗ ಸಂಚಲನ ಸೃಷ್ಟಿಸಿದೆ.

ಡ್ರಗ್ ಪ್ರಕರಣದಲ್ಲಿ ಆ್ಯಂಕರ್ ಅನುಶ್ರೀಗೆ ಕೊಂಚ ರಿಲೀಫ್ ಸಿಕ್ಕದಂತಾಗಿದೆ. ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಆ ಅಂತಿಮ ವರದಿಯಲ್ಲಿ ಆರೋಪಿಗಳ ಪಟ್ಟಿಯಲ್ಲಿ ಅನುಶ್ರೀ ಹೆಸರು ಕೈಬಿಡಲಾಗಿದೆ.

ಸ್ಯಾಂಡಲ್‌ವುಡ್ ಡ್ರಗ್ ಕೇಸ್: ಪೊಲೀಸರಿಗೆ ಟೋಪಿ ಹಾಕಿದ್ದ ಪೆಡ್ಲರ್ ಥಾಮಸ್ ಸ್ಯಾಂಡಲ್‌ವುಡ್ ಡ್ರಗ್ ಕೇಸ್: ಪೊಲೀಸರಿಗೆ ಟೋಪಿ ಹಾಕಿದ್ದ ಪೆಡ್ಲರ್ ಥಾಮಸ್

Anchor Anushree Name In Drug Case Mangaluru Police Commissioner Clarification

ಆದರೆ ಪ್ರಕರಣದ ಎ2 ಆರೋಪಿ ಕೊರಿಯೊಗ್ರಾಫರ್ ಕಿಶೋರ್ ಅಮನ್ ತನ್ನ ಹೇಳಿಕೆಯಲ್ಲಿ ಅನುಶ್ರೀ, ತರುಣ್ ಹಾಗೂ ತಾನು ಜೊತೆಯಾಗಿ ಸೇರಿ ಡ್ರಗ್ ಪಾರ್ಟಿ ಮಾಡುತ್ತಿದ್ದೆವು ಎಂದು ಹೇಳಿದ್ದಾನೆ. ಇದರ ಜೊತೆ ಪಾರ್ಟಿಗೆ ಅನುಶ್ರೀ ಡ್ರಗ್ ತಗೊಂಡು ಬರುತ್ತಿದ್ದರು ಅಂತಾ ಚಾರ್ಚ್‌ಶೀಟ್‌ನಲ್ಲಿ ಹೇಳಿಕೆ ನೀಡಿದ್ದಾನೆ.

ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲಿಬ್ರಿಟಿಗಳ ಮನೆಗಳ ಮೇಲೆ ದಾಳಿ ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲಿಬ್ರಿಟಿಗಳ ಮನೆಗಳ ಮೇಲೆ ದಾಳಿ

ಆದರೆ ಕಿಶೋರ್ ಅಮನ್ ಅವನದ್ದೇ ಎನ್ನಲಾದ ಸಹಿ ಇರುವ ಈ ಚಾರ್ಜ್‌ಶೀಟ್‌ನಲ್ಲಿರುವ ಹೇಳಿಕೆ ಇದು ಯಾವುದು ನನ್ನದಲ್ಲ, ಇದರ ಬಗ್ಗೆ ನನಗೇನು ಗೊತ್ತಿಲ್ಲ, ನಮ್ಮ ಡ್ರಗ್ ಕೇಸ್‌ಗೂ ಅನುಶ್ರೀಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾನೆ.

ಸ್ಯಾಂಡಲ್ ವುಡ್ ಡ್ರಗ್ ಡೀಲ್: ಮಾದಕ ವ್ಯಸನಿಗಳು, ಅವರಿಗೆ ವಿಧಿಸಲಿರುವ ಜೈಲು ಶಿಕ್ಷೆ EXCLUSIVE ವಿವರ ಸ್ಯಾಂಡಲ್ ವುಡ್ ಡ್ರಗ್ ಡೀಲ್: ಮಾದಕ ವ್ಯಸನಿಗಳು, ಅವರಿಗೆ ವಿಧಿಸಲಿರುವ ಜೈಲು ಶಿಕ್ಷೆ EXCLUSIVE ವಿವರ

ಅನುಶ್ರೀಯವರಿಗೆ ಡ್ಯಾನ್ಸ್ ಶೋ ಕೊರಿಯೋಗ್ರಾಫ್ ಮಾಡಿದ್ದೇನೆ. ಆಮೇಲೆ ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಡ್ಯಾನ್ಸ್ ಶೋ ಗೆದ್ದ ಸಂಧರ್ಭದಲ್ಲಿ ಅನುಶ್ರೀ ನಮಗೆಲ್ಲಾ ಒಂದು ರೆಸ್ಟೋರೆಂಟ್‌ನಲ್ಲಿ ಪಾರ್ಟಿ ನೀಡಿದ್ದರು. ಆ ಬಳಿಕ ನಾನು ಅನುಶ್ರೀಯವರನ್ನು ಭೇಟಿಯಾಗಿಲ್ಲ.

ಚಾರ್ಚ್ ಶೀಟ್‌ನಲ್ಲಿ ಇರೋದು ನನ್ನ ಹೇಳಿಕೆಯಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅನುಶ್ರೀ ಗೂ ಡ್ರಗ್ಸ್ ಕೇಸ್‌ಗೂ ಯಾವುದೇ ಸಂಬಂಧ ಇಲ್ಲ. ನಾನು ಅನುಶ್ರೀ ವಿರುದ್ಧ ಆ ಥರ ಯಾವುದೇ ಹೇಳಿಕೆ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಬಂದಿರುದೆಲ್ಲವೂ ಸಂಪೂರ್ಣ ಸುಳ್ಳು. ನಾವು ಯಾವುದೇ ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀ ಅಂತಹ ಹುಡುಗಿಯೂ ಅಲ್ಲ.

ಅನುಶ್ರೀ ಜೊತೆ ಡ್ರಿಂಕ್ಸ್, ಡ್ರಗ್ಸ್ ಪಾರ್ಟಿ ಮಾಡಿಲ್ಲ. ನಾನು ಅನುಶ್ರೀಗೆ ಕೇವಲ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಆಮೇಲೆ ಅನುಶ್ರೀಯವರ ಜೊತೆ ಸಂಬಂಧ ಇಲ್ಲ. ಈಗ ಹಬ್ಬಿರುವ ಸುಳ್ಳು ವಿಚಾರದ ಹಿಂದೆ ಬೇರೆ ಯಾರೋ ಇರಬಹುದು. ನಾನು ಎರಡು ಬಾರಿ ಡ್ರಗ್ಸ್ ತೆಗೆದುಕೊಂಡಿದ್ದೇನೆ. ಈಗ ಪ್ರತಿ ತಿಂಗಳು ಕೋರ್ಟ್‌ಗೆ ಹಾಜರಾಗುತ್ತಿದ್ದೇನೆ ಅಂತಾ ಕಿಶೋರ್ ಅಮನ್ ಹೇಳಿದ್ದಾನೆ.

"ಕಿಶೋರ್ ಅಮನ್ ಹೇಳಿಕೆಯಲ್ಲಿ ಅನುಶ್ರೀ ವಿರುದ್ದ ಡ್ರಗ್ ಸೇವನೆ, ಮಾರಾಟ ಆರೋಪಿ ಕೇಳಿ ಬಂದಿದ್ದರು ಸಹ ವಿಚಾರಣೆ ನಡೆಸಿದ ಪೊಲೀಸರಿಗೆ ಇದಕ್ಕೆ ಪೂರಕವಾಗಿ ಯಾವುದೇ ಸಾಕ್ಷಿ, ಪುರಾವೆಗಳು ಸಿಕ್ಕಿರಲಿಲ್ಲ. ಹೀಗಾಗಿ ಸಂಪೂರ್ಣ ವಿಚಾರಣೆ ನಡೆಸಿಯೇ ಈ ಅಂತಿಮ ವರದಿಯನ್ನು ಒಂಬತ್ತು ತಿಂಗಳ ಹಿಂದೆಯೇ ಸಲ್ಲಿಕೆ ಮಾಡಿದ್ದೇವೆ" ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

"ಆರೋಪಿಗಳಿಗೆ ಚಾರ್ಜ್‌ಶೀಟ್ ಬಗೆಗೆ ಇರುವ ಆರೋಪಗಳನ್ನು ತಮ್ಮ ವಕೀಲರ ಮೂಲಕ ಕೋರ್ಟ್‌ನಲ್ಲಿ ಹೇಳಿಕೊಳ್ಳಬಹುದು. ಇದರ ಹೊರತು ಆರೋಪಿ ಮಾಡಿರುವ ಆರೋಪದ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ" ಎಂದು ಆಯುಕ್ತರು ತಿಳಿಸಿದ್ದಾರೆ.

"ಜಾರ್ಜ್‌ಶೀಟ್‌ನಲ್ಲಿ ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ. ಕಿಶೋರ್ ಅಮನ್ ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಸಂಪೂರ್ಣ ತನಿಖೆ ಪೂರ್ತಿ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ‌ ಮಾಡಿದ್ದೇವೆ. ಇಂದ್ರಜಿತ್ ಆರೋಪದ ಬಗ್ಗೆ ನಾನೇನು ಹೇಳಲ್ಲ" ಎಂದು ಆಯುಕ್ತರು ಸ್ಪಷ್ಟಪಡಿಸಿದರು.

"ನಾನು ಮಂಗಳೂರು ಆಯುಕ್ತನಾಗಿ ಅಧಿಕಾರ ಸ್ವೀಕರಿಸಿ ಎಂಟು ತಿಂಗಳಾಗಿದೆ ಅಷ್ಟೇ. ಒಂಭತ್ತು ತಿಂಗಳ‌ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈಗ ಯಾಕೆ ಈ ವಿಚಾರ ಸುದ್ದಿಯಾಯಿತು ಗೊತ್ತಿಲ್ಲ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ. ಆರು ಜನ ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಿದ್ದೇವೆ. ಐದು ಜನ ಆರೋಪಿಗಳಿಗೆ ಜಾಮೀನು ಆಗಿದೆ. ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸೆ.19, 2020 ಡ್ರಗ್ಸ್ ಪ್ರಕರಣ ದಾಖಲು ಆಗಿತ್ತು. ಡಿ.11, 2020 ಅಂತಿಮ ವರದಿ ಸಲ್ಲಿಸಿದ್ದೇವೆ" ಎಂದು ಆಯುಕ್ತರು ತಿಳಿಸಿದರು.

ಪ್ರಕರಣ ಸಂಬಂಧ ಈಗಾಗಲೇ 6 ಜನರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ ಐದು ಮಂದಿ ಜಾಮೀನಿನ ಮೇಲೆ ಹೊರ ಬಂದಿದ್ದು, ಓರ್ವ ನ್ಯಾಯಾಂಗ ಬಂಧನದಲ್ಲಿದ್ದಾನೆ. ಒಟ್ಟಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪ್ರಕರಣದಲ್ಲಿ ಇದೀಗ ಅನುಶ್ರೀಗೆ ಕೊಂಚ ರಿಲೀಫ್ ಸಿಕ್ಕಿದ್ದು ಮುಂದೆನಾಗುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

Recommended Video

ಲಾಕ್ ಡೌನ್ ಆದಮೇಲೆ ಮತ್ತೆ ಡ್ರಗ್ ಪಾರ್ಟಿಗಳು ನಡೀತಿದೆ! | Oneindia Kannada

English summary
N. Shashi Kumar police commissioner of Mangaluru clarification on sandalwood drug case and anchor Anushree name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X