ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾದಕ್ಕೆ ಗುರಿಯಾದ 'ಅಮ್ಮನೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮ

|
Google Oneindia Kannada News

ಮಂಗಳೂರು, ಫೆಬ್ರವರಿ 04: ಶಕ್ತಿ ಸ್ವರೂಪಿಣಿ ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಂಗಳೂರಿನಿಂದ ಪ್ರತಿವರ್ಷವೂ 'ಅಮ್ಮನೆಡೆಗೆ ನಮ್ಮ ನಡಿಗೆ' ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಪ್ರತಿವರ್ಷ ಈ 20 ಕಿ.ಮೀ. ನಡಿಗೆಯಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ. ಜಾತಿ, ಪಕ್ಷಗಳ ಎಲ್ಲೆ ಮೀರಿ ಎಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ದೇವಿಯ ಆರಾಧಕರು ಈ ನಡಿಗೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.

ಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣುಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣು

ನಿನ್ನೆ ಭಾನುವಾರ (ಫೆಬ್ರವರಿ 3 ರಂದು) ಈ ಬಾರಿಯ 'ಅಮ್ಮನೆಡೆಗೆ ನಮ್ಮ ನಡಿಗೆ' ಪಾದಯಾತ್ರೆ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಧಾರ್ಮಿಕ ಕಾರ್ಯಕ್ರಮ ವಿವಾದಕ್ಕೆ ಗುರಿಯಾಗಿದೆ.

Ammanadege namma nadige programme ends up in dispute

ಹೌದು, ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ರಾಜಕೀಯ ಕೆಸರೆರೆಚಾಟ ಆರಂಭವಾಗಿದೆ. 'ಅಮ್ಮನೆಡೆಗೆ ನಮ್ಮ ನಡಿಗೆ' ಪಾದಯಾತ್ರೆ ಕಾರ್ಯಕ್ರಮವಲ್ಲ, ಬದಲಿಗೆ ಬಿಜೆಪಿ ಪಕ್ಷದ ಪಾದಯಾತ್ರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಜಿಲ್ಲೆಯ ಬಹುತೇಕ ಎಲ್ಲಾ ಬಿಜೆಪಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಆರೋಪಕ್ಕೆ ಕಾರಣವಾಗಿದೆ.

 ಇದೆಂಥ ವಿಪರ್ಯಾಸ! ಹೆಗಡೆಗೆ ಪಾಠ ಕಲಿಸೋಕೆ ಪತ್ನಿಯನ್ನು ಎಳೆದುತರೋದಾ?! ಇದೆಂಥ ವಿಪರ್ಯಾಸ! ಹೆಗಡೆಗೆ ಪಾಠ ಕಲಿಸೋಕೆ ಪತ್ನಿಯನ್ನು ಎಳೆದುತರೋದಾ?!

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಧಾರ್ಮಿಕ ಕಾರ್ಯಕ್ರಮವನ್ನು ಅತ್ಯಂತ ಚಾಣಕ್ಷತನದಿಂದ ಬಳಸಿಕೊಳ್ಳಲಾಗಿದೆ ಎಂದು ದೂರಲಾಗುತ್ತಿದೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ‌ ವೇದವ್ಯಾಸ್ ಕಾಮತ್ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ಬಿಜೆಪಿ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Ammanadege namma nadige programme ends up in dispute

 'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ! 'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ!

ಪಾದಯಾತ್ರೆಯ ಮಧ್ಯೆ ಮಧ್ಯೆ ನಡೆದಂತಹ ಕಾರ್ಯಕ್ರಮದಲ್ಲಿ ಬಿಜೆಪಿಯ ಆ ಮುಖಂಡ , ಬಿಜೆಪಿಯ ಈ ಮುಖಂಡ ಬಂದಿದ್ದಾರೆಂದು ಬಹುಪರಾಕ್ ಮಾಡಿದ್ದೇ ಮಾಡಿದ್ದು. ಇದನ್ನೆಲ್ಲಾ ಅತ್ಯಂತ ಸಮೀಪದಿಂದ ನೋಡಿದ ದೇವಿ ಭಕ್ತರಿಗೆ ಇದು ದೇವಿಯ ಕಾರ್ಯಕ್ರಮವೋ ಅಥವಾ ಬಿಜೆಪಿಯ ಪ್ರಚಾರ ಕಾರ್ಯಕ್ರಮವೋ ಎನ್ನುವ ಗೊಂದಲವೂ ಮೂಡಿಸಿತ್ತು.

English summary
Kateelu temple Ammanadege namma nadige programme ends up in dispute as BJP took part in it. There is objection as BJP has clubed into it to take fame in the coming elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X