ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 6ರಿಂದ ಮೂಡುಬಿದರೆಯಲ್ಲಿ ಬೃಹತ್‌ ಉದ್ಯೋಗ ಮೇಳ

|
Google Oneindia Kannada News

ಮಂಗಳೂರು, ಜುಲೈ. 04 : ಶಿಕ್ಷಣ ಕಾಶಿ ಎಂದೇ ಗುರುತಿಸಲ್ಪಡುವ ಮೂಡುಬಿದರೆ, ಈಗ ಉದ್ಯೋಗ ಆಕಾಂಕ್ಷಿಗಳನ್ನು ಕೈಬೀಸಿ ಕರೆಯುತ್ತಿದ್ದು, ಇಲ್ಲಿಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಬೃಹತ್ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ.

ಜುಲೈ 6 ಮತ್ತು 7ರಂದು ಆಳ್ವಾಸ್ ನ ವಿದ್ಯಾಗಿರಿ ಆವರಣದಲ್ಲಿ ಆಳ್ವಾಸ್ ಪ್ರಗತಿ ಬೃಹತ್‌ ಉದ್ಯೋಗ ಮೇಳ 2018 ಆಯೋಜಿಸಲಾಗಿದ್ದು, ಉದ್ಯೋಗ ಆಕಾಂಕ್ಷಿಗಳನ್ನು ಆಕರ್ಷಿಸುತ್ತಿದೆ.

ಕೆಎಸ್ಆರ್‌ಟಿಸಿ 200 ಹುದ್ದೆ ನೇಮಕಾತಿ : ಅರ್ಜಿ ಸಲ್ಲಿಸುವುದು ಹೇಗೆ? ಕೆಎಸ್ಆರ್‌ಟಿಸಿ 200 ಹುದ್ದೆ ನೇಮಕಾತಿ : ಅರ್ಜಿ ಸಲ್ಲಿಸುವುದು ಹೇಗೆ?

ಆಳ್ವಾಸ್ ಸಂಸ್ಥೆಯ 10ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಇದಾಗಿದ್ದು, ಈ ಮೇಳ 2 ದಿನಗಳ ಕಾಲ ನಡೆಯಲಿದೆ. ಜುಲೈ 6ರಂದು ಮೊದಲ ಸುತ್ತು ಹಾಗೂ 7ರಂದು ಕೊನೆಯ ಸುತ್ತಿನ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.

Alvas Pragathi 2018 job fair on July 6th

ಗ್ರಾಮೀಣ ಭಾಗದ ಉದ್ಯೋಗ ಆಕಾಂಕ್ಷಿಗಳಿಗಾಗಿಯೇ ಈ ಮೇಳ ಅಯೋಜಿಸಲಾಗಿದೆ. ಕಳೆದ 9 ವರ್ಷಗಳಿಂದ ಗ್ರಾಮೀಣ ಸ್ಥರದ ಉದ್ಯೋಗಾಸಕ್ತರನ್ನೂ ಈ ಮೇಳ ತಲುಪಿದೆ. ಹೆಚ್ಚಾಗಿ ನಗರ ಪ್ರದೇಶದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ.

ಈ ಬಾರಿಯ ಆಳ್ವಾಸ್ ಪ್ರಗತಿ 2018ರ ಆವೃತ್ತಿಯಲ್ಲಿ ಪದವಿ, ವೈದ್ಯಕೀಯ, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಆರ್ಟ್ಸ್, ಕಾಮರ್ಸ್, ಮ್ಯಾನೇಜ್‌ಮೆಂಟ್‌, ಬೇಸಿಕ್ ಸೈನ್ಸ್‌, ನರ್ಸಿಂಗ್‌, ಐಟಿಐ, ಡಿಪ್ಲಮೊ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ, ವಿದ್ಯಾರ್ಹತೆಯುಳ್ಳ ಪ್ರತಿಭಾವಂತರಿಗೆ ಅವಕಾಶಗಳು ಒದಗಿ ಬರಲಿದೆ.

ಮ್ಯಾನುಫ್ಯಾಕ್ಚರಿಂಗ್ , ಹೆಲ್ತ್ ಕೇರ್‌, ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೊಮೊಬೈಲ್, ಬ್ಯಾಂಕಿಂಗ್‌ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ.

Alvas Pragathi 2018 job fair on July 6th

ನೋಂದಣಿ ಪ್ರಕ್ರಿಯೆ ಮುಕ್ತವಾಗಿದ್ದು, ಜುಲೈ 6ರವರೆಗೆ ಮಾತ್ರ ಲಭ್ಯವಿರುತ್ತದೆ. ಉತ್ಪಾದನಾ ವಲಯದ ಕಿರ್ಲೋಸ್ಕರ್, ಟೊಯೊಟೊ , ಟೆಕ್ಸ್ ಟೈಲ್‌ ಮೆಷಿನರಿ, ಟೊಯೊಟೊ ಇಂಡಸ್ಟ್ರೀಸ್ , ಎಂಜಿನ್‌ ಇಂಡಿಯಾ, ಅಜೆಕ್ಸ್ ಫಿಯೋರಿ, ತೊಷಿಬಾ, ಮಿಟ್ಸುಬಿಸಿ- ಎಲೆಕ್ಟ್ರಿಕ್ ಇಂಡಸ್ಟ್ರಿಯಲ್‌ ಸಿಸ್ಟಮ್ಸ್‌ ಕಾರ್ಪೋರೇಷನ್ , ಅಲ್‌ ಕಾರ್ಗೊ ಲಾಜಿಸ್ಟಿಕ್ , ಇಂಡೊ ಯೆಸ್ ಎಂಐಎಂ ಟೆಕ್‌, ಕೆನೀಸ್ ಟೆಕ್ನಾಲಜಿಸ್ ಗಳಲ್ಲಿ ಬಿಇ ಮೆಕ್ಯಾನಿಕಲ್‌, ಡಿಪ್ಲೊಮಾ, ಐಟಿಐ ಪದವೀಧರರಿಗೆ ಹೆಚ್ಚು ಅವಕಾಶಗಳು ಒದಗಿ ಬರಲಿದೆ.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಪಾಸ್‌ಪೋರ್ಟ್‌ ಅಳತೆಯ 5 ರಿಂದ 10 ಫೋಟೊ, ರೆಸ್ಯೂಮ್, ದೃಢೀಕರಿಸಿದ ಎಲ್ಲ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳು, ಆನ್‌ಲೈನ್‌ ನೋಂದಣಿಯ ಐಡಿಯೊಂದಿಗೆ ಹಾಜರಾಗಬೇಕು ಎಂದು ಕೋರಲಾಗಿದೆ.

English summary
Alvas Education Foundation will held the 10th annual Alvas Pragathi employment mela on July 6th and 7th . Over 250 companies will take part in the two days of fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X