ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ 14ರಿಂದ ಆಳ್ವಾಸ್ ನುಡಿಸಿರಿ ವಿರಾಸತ್ 2019

|
Google Oneindia Kannada News

ಮಂಗಳೂರು, ಜುಲೈ 25: ಕನ್ನಡ ನಾಡು-ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ವಿರಾಸತ್ 2019 ಇದೇ ನವೆಂಬರ್ 14 ರಿಂದ 4 ದಿನಗಳ ಕಾಲ ನಡೆಯಲಿದೆ. ಆಳ್ವಾಸ್ ವಿರಾಸತ್'ಗೆ 25 ಮತ್ತು ಆಳ್ವಾಸ್ ನುಡಿಸಿರಿಗೆ 15 ವರ್ಷಗಳು ಸಂದಿದ್ದು, ಈ ವರ್ಷ 26 ಮತ್ತು 16ನೇ ವರ್ಷಗಳನ್ನು ವಿನೂತನಾಗಿ ಆಚರಿಸಲು ಆಳ್ವಾಸ್ ಪ್ರತಿಷ್ಠಾನ ತೀರ್ಮಾನಿಸಿದೆ.

 ನವೆಂಬರ್ 16 ರಂದು ಮೂಡಬಿದ್ರೆಯಲ್ಲಿ 15 ನೇ ಆಳ್ವಾಸ್ ನುಡಿಸಿರಿ ನವೆಂಬರ್ 16 ರಂದು ಮೂಡಬಿದ್ರೆಯಲ್ಲಿ 15 ನೇ ಆಳ್ವಾಸ್ ನುಡಿಸಿರಿ

ಈ ಕುರಿತು ಮೂಡಬಿದರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, "ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಕಾರ್ಯಕ್ರಮವು ಕನ್ನಡ ನಾಡು-ನುಡಿ-ಸಂಸ್ಕೃತಿಯ ಉತ್ಸವವಾಗಿದೆ. ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನವಾದರೆ, ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ" ಎಂದು ಹೇಳಿದರು.

Alvas Nudisiri Virasath 2019 on november 14

"ನವೆಂಬರ್ 14ರಂದು ಬೆಳಿಗ್ಗೆ ಆಳ್ವಾಸ್ ವಿದ್ಯಾರ್ಥಿ ಸಿರಿ ಇದ್ದು, ಸಂಜೆ ಆಳ್ವಾಸ್ ವಿರಾಸತ್ ಮತ್ತು ಆಳ್ವಾಸ್ ಕೃಷಿಸಿರಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ನವೆಂಬರ್ 15ರಂದು ಬೆಳಿಗ್ಗೆ ಆಳ್ವಾಸ್ ನುಡಿಸಿರಿ ಉದ್ಘಾಟನೆಗೊಂಡು, ನವೆಂಬರ್ 17ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ" ಎಂದು ಮಾಹಿತಿ ನೀಡಿದರು.

English summary
Alva's education foundation's Alvas Nudisiri Virasath will be held for 4 days from November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X