ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ ನೋಡಿ ಆಳ್ವಾಸ್ ನುಡಿಸಿರಿಗೆ ಚಾಲನೆ

|
Google Oneindia Kannada News

ಮೂಡಬಿದಿರೆ, ನ.14 : 'ಕರ್ನಾಟಕದ ವರ್ತಮಾನದ ತಲ್ಲಣಗಳು' ಎಂಬ ಮುಖ್ಯ ಪರಿಕಲ್ಪನೆಯಲ್ಲಿ ನಡೆಯುತ್ತಿರುವ 2014ರ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಕ್ಕೆ ಮೂಡಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಚಾಲನೆ ಸಿಕ್ಕಿದೆ.

ಶುಕ್ರವಾರ ಹಿರಿಯ ಸಾಹಿತಿ ನಾ.ಡಿಸೋಜ ಅವರು ಮೂರು ದಿನಗಳ ನಾಡು ನುಡಿಯ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕವಿ ಸಿದ್ದಲಿಂಗಯ್ಯ, ಸಚಿವರ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣ ಮಾಡಿದ ನಾ.ಡಿಸೋಜ ಅವರು, ವರ್ತಮಾನ ಅನ್ನುವುದೇ ತಲ್ಲಣದ ವಿಷಯ ಯಾವ ವರ್ತಮಾನಕ್ಕೆ ಪೂರ್ವದ ಸಾಂಸ್ಕೃತಿಕ ಹಿನ್ನಲೆ ಮತ್ತು ಪ್ರಗತಿಪರ ಭವಿಷ್ಯದ ಚಿಂತನೆಯಿರುವುದಿಲ್ಲವೋ ಅದು ಅಪಾಯಕಾರಿ ವರ್ತಮಾನವಾಗುತ್ತದೆ ಎಂದು ಹೇಳಿದರು.

ಡಾ.ಸಿದ್ಧಲಿಂಗಯ್ಯ ಮೂರು ದಿನಗಳ ಸಮ್ಮೇಳನದ ಅಧ್ಯಕ್ಷರಾಗಿದ್ದು, ಅಧ್ಯಕ್ಷೀಯ ಭಾಷಣ ಮಾಡಿ, ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ಸುದ್ದಿ ಮಾಧ್ಯಮಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿರುವುದು ಆತಂಕಕಾರಿ ಎಂದರು.

ಮಾನವ, ಮಂಗಳಗ್ರಹವನ್ನು ತಲುಪುವ ಸಂದರ್ಭದಲ್ಲೂ ಸಾವಿರಾರು ಕುಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ದಲಿತವರ್ಗದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಂತಾಗಿದೆ. ದೇವಾಲಯ, ಉಪಹಾರಗೃಹ ಸಾರ್ವಜನಿಕ ಬಾವಿಗಳಿಂದ ದಲಿತರು ದೂರವಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರುಗಳ ಕನಸು ನನಸಾಗಬೇಕಾಗಿದೆ. ಅಸ್ಪೃಶ್ಯತೆಯಂತಹ ಈ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಲು ದಲಿತವರ್ಗದವರು ಜಾಗೃತರಾಗುವುದರ ಜೊತೆಗೆ ಈ ಬಗ್ಗೆ ನಡೆಯುವ ನಿವಾರಣಾ ಚಳುವಳಿಗಳಿಗೆ ಮೇಲ್ವರ್ಗದ ಯುವಕರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಸಜ್ಜನರು ವಿದ್ಯಾಗಿರಿಯಲ್ಲಿ ಸೇರಿರುವುದರಿಂದ ಶಿಕ್ಷಣ ಕೇಂದ್ರ ಪಾವನವಾಗಿದೆ. ಪ್ರಾದೇಶಿಕ ಭಾಷೆಗಳ ಅವಲೋಕನವಾಗಬೇಕು. ಈ ಮೂಲಕ ನಾಡಿಗೆ ಒಳ್ಳೆಯ ಸಂದೇಶ ಸಿಗುವಂತಾಗಬೇಕಾಗಿದೆ. ಕನ್ನಡದ ಮನಸ್ಸುಗಳನ್ನು ಒಂದೇ ಸೂರಿನಲ್ಲಿರಿಸುವ ಪ್ರಯತ್ನ ನುಡಿಸಿರಿಯಾಗಿದೆ ಎಂದರು.

ಸಚಿವ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭಾಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ, ಆಳ್ವಾಸ್ ಸಂಸ್ಥೆ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. [ಚಿತ್ರಗಳು :ಐಸಾಕ್ ರಿಚರ್ಡ್, ಮಂಗಳೂರು]

in Moodbidri

ಮೂರು ದಿನಗ ನುಡಿಸಿರಿಗೆ ಇಂದು ಚಾಲನೆ ಸಿಕ್ಕಿದೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇತರ ಪ್ರತಿನಿಧಿಗಳಿಗೆ 100 ರೂ. ಪ್ರತಿನಿಧಿ ಶುಲ್ಕದೊಂದಿಗೆ ಮೂರು ದಿನವೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

English summary
Writer Na. D'Souza inaugurated the 11th edition of Alva's Nudisiri 2014 on Friday. Nudisiri hosted by Alva's Education Foundation, Moodbidri. Three days festival will held at Sundari Anand Alva campus of Alva's educational institution Moodbidri, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X