ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಮಟ್ಟದಲ್ಲಿ ಆಳ್ವಾಸ್ ನ ಆಕಾಂಕ್ಷಾಗೆ 3, ಸಚಿನ್ ಗೆ 7ನೇ rank

|
Google Oneindia Kannada News

ಮಂಗಳೂರು, ಜೂನ್ 17: ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ ಜೆ.ಇ.ಇ ಅಡ್ವಾನ್ಸ್ಡ್ ಹಾಗೂ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ನಾಟಾ) ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿಗಳು ಉನ್ನತ ಸಾಧನೆಗೈದಿದ್ದು, ರಾಷ್ಟ್ರ ಮಟ್ಟದಲ್ಲಿ ಆಳ್ವಾಸ್ ನ ಇಬ್ಬರು ವಿದ್ಯಾರ್ಥಿಗಳಿಗೆ ಮೂರು ಹಾಗೂ ಏಳನೇ rank ಲಭಿಸಿದೆ.

ದೇಶದ ಪ್ರತಿಷ್ಠಿತ 23 ಐ.ಐ.ಟಿಗಳಲ್ಲಿ ಇಂಜಿನಿಯರಿಂಗ್ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರಮಟ್ಟದ ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಸಚಿನ್ ಅಖಿಲ ಭಾರತ rank (ಎಐಆರ್)ನಲ್ಲಿ 7ನೇ rank ಪಡೆದಿದ್ದಾರೆ.

 625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ... 625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ...

ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿವಾಸ್ ಎನ್. ಎಐಆರ್-332, ಗುಂಡಪ್ಪ ಎಐಆರ್-469, ಮಂಜುನಾಥ ಜಿ.ಎಸ್ ಎಐಆರ್-1044, ಅಲೋಕ್ ಕುಮಾರ್-1101, ಭರತ್ ಎ.ಕೋಲಿ ಎಐಆರ್-2029, ಅನುಷ್ ಎಐಆರ್-2980, ವರುಣ್ ಕುಮಾರ್ ಎಐಆರ್-3409, ವಸಂತ ಕುಮಾರಿ ಎನ್. ಎಐಆರ್-3725, ಅಕ್ಷಯ್ ಮುಗಲಿಹಾಲ್ ಎಐಆರ್-3763, ಚೇತನ್ ರಾಜು ಲಿಂಗಮೂರ್ತಿ ಎಐಆರ್-4366, ಬಿ.ಬಿ ವಿಶ್ವನಾಥ್ ಎಐಆರ್-4456, ಚೇತನ್ ಎಸ್.ರೆಡ್ಡಿ ಎಐಆರ್-4970, ಪ್ರಮತ್ ಮೂಗಿ ಎಐಆರ್-12484, ಕಿರಣ್ ಕುಮಾರ್ ಎಐಆರ್-17786, ಸುಹಾನ್ ಬಂಗೇರ ಎಐಆರ್-24186ನೇ ರ್ಯಾಂಕ್ ಪಡೆದಿದ್ದಾರೆ.

 625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ... 625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ...

ಆಕಾಂಕ್ಷಾ ವಿ ಅಕ್ಕಿಹಾಲ್ ಮೂರನೇ RANK: ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ನಾಟಾ) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ 480ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದು, ಅದರಲ್ಲಿ ಆಕಾಂಕ್ಷಾ ವಿ. ಅಕ್ಕಿಹಾಲ್ ಮೂರನೇ rank ಗಳಿಸಿದ್ದಾರೆ.

Alvas college got 7th and 3rd rank in jee advanced and nata exams

ಏಪ್ರಿಲ್ 14ರಂದು ನಡೆದ ನಾಟಾ ಪರೀಕ್ಷೆಯಲ್ಲಿ ಕೃತಿಕಾ ಡಿ.-28, ಅನ್ವೇಶ ಜೈನ್ -31, ಕವನ ಜೆ ಹೌಶಿ-35, ಚಂದನ ಎ ಎಂ- 36, ಅನಿರುದ್ದ್ ಎಂ.ಎಂ.-52, ದೀಪಿಕಾ ಎಚ್. ಎಸ್-73, ಪ್ರಿಯಾಂಕ ವಿ ನಾಯ್ಕ್-78, ಮೈತ್ರಿ ಪಟವರ್ಧನ್ -82, ವರುಣ್ ಸತ್ಪುಟೆ-94, ನಿರಂಜನ್ ಎಸ್ ಪಟ್ಟಣಶೆಟ್ಟಿ -100, ಕಿರಣ್ ಕುಮಾರ್-108, ದಿಯಾ ದೇಚಮ್ಮ ಡಿ -110, ಲಿಖಿತ್ ಕೆ -116, ಶ್ರೀನಿಧಿ-123, ವೈ ಲಿಖಿತ ಗೌಡ-127, ಕೀರ್ತಿ ಎನ್ ಸಿ-129, ನಿಹಾಲ್ ಜಿ ಆರ್-132, ಅನುಶ್-144, ಮನೋಜ್ ಎನ್-145, ಕಾರ್ತಿಕ್ ಕುಲ್ಕರ್ಣಿ -150, ಒಟ್ಟು 21 ವಿದ್ಯಾರ್ಥಿಗಳು 150ರ ಒಳಗಿನ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ 523 ವಿದ್ಯಾರ್ಥಿಗಳಲ್ಲಿ 480 ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

 ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 22ನೇ ಸ್ಥಾನ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ರಾಷ್ಟ್ರಮಟ್ಟದಲ್ಲಿ 22ನೇ ಸ್ಥಾನ

ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಉಪನ್ಯಾಸಕರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ನಾಟಾ ಸಂಯೋಜಕ ಅಶ್ವತ್ಥ್ ಎಸ್.ಎಲ್, ಜೆ.ಇ.ಇ ಸಂಯೋಜಕ ಗಣನಾಥ ಶೆಟ್ಟಿ ಉಪಸ್ಥಿತರಿದ್ದರು.

English summary
Alvas college of mudubidire got 7th and 3rd rank in j.e.e advanced and national aptitude test for architecture said Alvas Education Trust chairman Dr.M. Mohan Alva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X