ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ 17 ಪದಕ

|
Google Oneindia Kannada News

ಮಂಗಳೂರು, ಜನವರಿ 17: ಪುಣೆಯಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ. ಈ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ 6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕ ಸೇರಿದಂತೆ ಒಟ್ಟು 17 ಪದಕ ಬಾಚಿಕೊಂಡಿದ್ದಾರೆ.

ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ ಹೈ ಜಂಪ್ ನಲ್ಲಿ ಸುಪ್ರಿಯ ಚಿನ್ನ, ಅಭಿನಯ ಶೆಟ್ಟಿ ಬೆಳ್ಳಿ, ಶಾಟ್ ಪುಟ್ ನಲ್ಲಿ ಅನಾಮಿಕ ದಾಸ್ ಚಿನ್ನ, ಶುಭ ವಿ.ಗೆ 400, 200 ಮೀಟರ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದಾರೆ. ಹಾಗೆಯೇ ವೈಟ್ ಲಿಫ್ಟಿಂಗ್ ನಲ್ಲಿ 71 ಕೆಜಿ ವಿಭಾಗದಲ್ಲಿ ಲಾವಣ್ಯ ಬೆಳ್ಳಿ, 87 ಕೆಜಿ ವಿಭಾಗದಲ್ಲಿ ಭವಿಷ್ಯ ಬೆಳ್ಳಿ, ಕುಸ್ತಿ ವಿಭಾಗದಲ್ಲಿ ಲಕ್ಷ್ಮೀ ರಡೇಕರ್ ಕಂಚಿನ ಪದಕ ಗೆದ್ದಿದ್ದಾರೆ.

Alvas athletes bagged 17 medals in Khelo India sports events

ಖೇಲೋ ಇಂಡಿಯಾದಲ್ಲಿ ಕರಾವಳಿ ಬಾಲಕಿಯರ ಪಾರಮ್ಯಖೇಲೋ ಇಂಡಿಯಾದಲ್ಲಿ ಕರಾವಳಿ ಬಾಲಕಿಯರ ಪಾರಮ್ಯ

ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ ಮನು ಡಿ.ಪಿ. ಜವಾಲಿನ್ ನಲ್ಲಿ ಚಿನ್ನ, ಅಜೀತ್ ಕುಮಾರ್ 5000 ಮೀ. ಓಟದಲ್ಲಿ ಚಿನ್ನ, ದಿನೇಶ್ 10,000 ಮೀ. ಓಟದಲ್ಲಿ ಚಿನ್ನ, ಪ್ರಜ್ವಲ್ ಮಂದಣ್ಣ 100 ಮೀ. ಓಟದಲ್ಲಿ ಬೆಳ್ಳಿ, ರಿನ್ಸ್ ಜೋಸೆಫ್ 400 ಮೀ. ಓಟದಲ್ಲಿ ಬೆಳ್ಳಿ, ಸೌರವ್ ತನ್ವರ್ ಶಾಟ್ ಪುಟ್ ನಲ್ಲಿ ಬೆಳ್ಳಿ, ಸತ್ಯಂ ಚೌಧರಿ ಶಾಟ್ ಪುಟ್ ನಲ್ಲಿ ಬೆಳ್ಳಿ, ಯಮನೂರಪ್ಪ ಹ್ಯಾಮರ್ ತ್ರೋ ವಿಭಾಗದಲ್ಲಿ ಕಂಚು, ವೈಟ್‍ಲಿಫ್ಟಿಂಗ್ ನ 109 ಕೆ.ಜಿ ವಿಭಾಗದಲ್ಲಿ ನಿಶಾಂತ್ ಕಂಚಿನ ಸಾಧನೆ ಮಾಡಿದ್ದಾರೆ.

 ಅಂಗವಿಕಲರ ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ಚಾಂಪಿಯನ್ ಅಂಗವಿಕಲರ ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ಚಾಂಪಿಯನ್

ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

English summary
Alvas college athletes bagged 6 gold, 8 silver and 3 bronzes total 17 medals in Khelo India sports events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X