ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ಕಾಲೇಜಿನ 33 ವಿದ್ಯಾರ್ಥಿಗಳು ಡಿಫೆನ್ಸ್ ಅಕಾಡೆಮಿಗೆ ಆಯ್ಕೆ

|
Google Oneindia Kannada News

ಮಂಗಳೂರು, ಜೂನ್ 24: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ 33 ವಿದ್ಯಾರ್ಥಿಗಳು ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿಗೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಎನ್.ಡಿ.ಎ ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪುಣೆಯ ಕಡಕ್‌ವಾಸ್ಲದಲ್ಲಿರುವ ಎನ್.ಡಿ.ಎ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆಗೆ ದೇಶಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು . ಈ ಪೈಕಿ ಪರೀಕ್ಷೆಯಲ್ಲಿ 7904 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. ಇದೊಂದು ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿದ ವಿಟ್ಲದ ಅಪರ್ಣಾ ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿದ ವಿಟ್ಲದ ಅಪರ್ಣಾ

ಆಳ್ವಾಸ್ ವಿದ್ಯಾರ್ಥಿಗಳಾದ ಶ್ರೀನಿವಾಸ್ ಎನ್., ನಿರಂಜನ್ ಎಸ್. ಪಟ್ಟನ್‌ಶೆಟ್ಟಿ, ಲೋಹಿತ್ ಎಂ.ಎಸ್., ಮೊಹಮ್ಮದ್ ಅರ್ಶ್, ನಂದೀಶ ಕೆ., ಪಿ. ಎಸ್. ರವೀಂದ್ರ, ವರುಣ್ ತೇಜ್ ವೈ.ಡಿ., ಹರ್ಷ ವಿ, ಅಮೋಘ ಪ್ರಭು, ಸುಜಿತ್ ಡಿ, ಗಗನ್ ಕೆ., ಶ್ರೀವಾಸ್ತ ಎನ್.ಎಸ್., ಶ್ರೇಯಾಂಕ್ ಶ್ರೀಧರ್ ಶೆಟ್, ಹರೀಶ್ ಆರ್. ನಂದನಿ, ಬಾಲಾಜಿ ನಾಯ್ಡು ವಿ., ಪ್ರಜ್ವಲ್ ಎಂ., ಗುರುಪ್ರಸಾದ್ ನಿರ್ವಾನಿ ಕಬಡಗಿ, ಶ್ಯಾಮ್ ವಿಠಲ್ ಅಮಾಠೆ, ನಿತಿನ್ ಎಸ್, ಮನೋಜ್ ಪಿ. ಎಂ., ಅರುಣ್ ಕೆ.ಎಂ, ಶರಣ್ ಎ. ಪಟೀಲ್, ರವಿಕಿರಣ್ ಬರಾಗಿ, ಅಕ್ಷಯ್ ಕುಮಾರ್ ನಲಟವಾಡ್, ಹರ್ಷ ವೈ . ಶಿಹೋರ, ಮಹೇಶ್ ಎಂ. ಕಂಪಲಿ, ಪ್ರಶಾಂತ್ ಎಸ್. ಶಟ್ಟರಗಿ, ಸಂತೋಷ್ ಎಸ್. ಮುಡೆನೂರ್, ಶಶಿಧರ್ ಗೌಡಕೆ. ಎಂ, ಶಿವಕುಮಾರ್ ಹಾಲನಗಲಿ, ಚಿನ್ಮಯ್ ಎಸ್. ನಡಿಗಿರ್, ಪ್ರಮತ್ ಪಿ. ಮೂಗಿ, ಸುಹಾನ್ ಜೆ. ಬಂಗೇರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

Alvas 33 students selected for NDA

ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ 17 ಪದಕಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್ ಗೆ 17 ಪದಕ

ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ನಡೆಯುವ ಎಸ್ ಎಸ್ ಬಿ ಸುತ್ತಿಗೆ ಭಾಗವಹಿಸುವ ಅರ್ಹತೆ ಪಡೆದಿರುತ್ತಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲರಾದ ರಮೇಶ್ ಶೆಟ್ಟಿ ಹಾಗೂ ಸಂಯೋಜಕರುಗಳಾದ ಅಶ್ವಥ್‌ ಎಸ್.ಎಲ್ ಮತ್ತು ಗಣನಾಥ ಶೆಟ್ಟಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

English summary
33 students of Alvas College of Moodbidre selected for NDA main exam , this time 6 laks students attended entrance exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X