ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಕ್ತಾದಿಗಳ ಗಮನಕ್ಕೆ: ಕುಕ್ಕೆ ಸುಬ್ರಮಣ್ಯದಲ್ಲಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಸೇವೆ ಆರಂಭಕ್ಕೆ ದಿನ ನಿಗದಿ

|
Google Oneindia Kannada News

ಮಂಗಳೂರು, ಸೆ 13: ನಾಡಿನ ಪ್ರಸಿದ್ದ ನಾಗಾರಾಧನೆಯ ಕ್ಷೇತ್ರವಾಗಿರುವ, ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ, ಕೊರೊನಾ ಹಾವಳಿಯಿಂದ, ನಿಂತು ಹೋಗಿದ್ದ ಸೇವೆಗಳು ಮತ್ತೆ ಪುನರಾರಂಭಗೊಳಿಸಲು ಮುಜರಾಯಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

"ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲಾ ಸೇವೆಗಳು, ಹಲವು ಷರತ್ತುಗಳೊಂದಿಗೆ, ಸೋಮವಾರದಿಂದ (ಸೆ.14) ಆರಂಭವಾಗಲಿದೆ"ಎಂದು ದೇವಾಲಯದ ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

ಸೆ.16ರಿಂದ ಮೂರು ದಿನ ಭಕ್ತರಿಗೆ ಮಾದಪ್ಪನ ದರ್ಶನ ಭಾಗ್ಯವಿಲ್ಲಸೆ.16ರಿಂದ ಮೂರು ದಿನ ಭಕ್ತರಿಗೆ ಮಾದಪ್ಪನ ದರ್ಶನ ಭಾಗ್ಯವಿಲ್ಲ

"ಹಲವು ನಿಯಮಗಳನ್ನು ಜಾರಿಗೆ ತಂದು ಸೇವೆ ಆರಂಭಿಸಲು, ಧಾರ್ಮಿಕ ದತ್ತಿ ಇಲಾಖೆ ಅನುಮತಿ ನೀಡಿದೆ. ಸೇವಾರ್ಥಿಗಳಿಗೆ ಮಾತ್ರ ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ"ಎಂದು ರೂಪಾ ಹೇಳಿದ್ದಾರೆ.

All Types Of Sevas Is Starting From September 13 In Kukke Subramanya Temple

ದೇವಾಲಯ ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30ರವರೆಗೆ ಮತ್ತು 3.30 ರಿಂದ ರಾತ್ರಿ 8ಗಂಟೆಯವರೆಗೆ ತೆರೆದಿರುತ್ತದೆ. ಪ್ರತಿದಿನ ಮೂವತ್ತು ಭಕ್ತರಿಗೆ ಮಾತ್ರ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ನಡೆಸಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಎರಡು ಸೇವೆಯಲ್ಲಿ ಇಬ್ಬರಿಗೆ ಮಾತ್ರ ಒಂದು ಟಿಕೆಟ್ ನಲ್ಲಿ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಇನ್ನು, ಮಹಾಪೂಜೆ ಮತ್ತು ಪಂಚಾಮೃತ ಸೇವೆಯ ಹತ್ತು ಟಿಕೆಟ್ ಅನ್ನು ಮಾತ್ರ ವಿತರಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

"ಸರ್ಪ ಸಂಸ್ಕಾರ ಸೇವೆ ಸಲ್ಲಿಸುವವರಿಗೆ ಎರಡು ದಿನ, ಬೇರೆ ಸೇವೆ ನೀಡುವವರಿಗೆ ಒಂದು ದಿನ ಮಾತ್ರ ದೇವಾಲಯದ ವಸತಿ ಗೃಹದಲ್ಲಿ ತಂಗಲು ಅವಕಾಶ ಕಲ್ಪಿಸಲಾಗುವುದು" ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

English summary
All Types Of Sevas Is Starting From September 13 In Kukke Subramanya Temple, In Dakshina Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X