ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ನಿರ್ವಹಣೆ ಹೆಚ್ಚಳ

|
Google Oneindia Kannada News

ಮಂಗಳೂರು, ಡಿಸೆಂಬರ್ 2: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಇಳಿಮುಖಗೊಂಡರೂ ಆತಂಕ ಕಡಿಮೆಯಾಗಿಲ್ಲ. ಈ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನವೆಂಬರ್‌ ತಿಂಗಳಲ್ಲಿ ಒಂದು ಸಾವಿರ ವಿಮಾನಗಳ ನಿರ್ವಹಣೆ ಮಾಡಿ ದಾಖಲೆ ಬರೆದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ ತಿಂಗಳಲ್ಲಿ ಒಟ್ಟು 987 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನ ನಿರ್ವಹಣೆ ಮಾಡಲಾಗಿತ್ತು. ಅದರಲ್ಲಿ 196 ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ. 2020ರ ಅಕ್ಟೋಬರ್‌ನಲ್ಲಿ 593 ವಿಮಾನಗಳ ನಿರ್ವಹಣೆ ಮಾತ್ರ ನಡೆಸಿತ್ತು.

ಲಕ್ಷ ದಾಟಿದ ಪ್ರಯಾಣಿಕರು
ನವೆಂಬರ್‌ ತಿಂಗಳಲ್ಲಿ ಒಂದೂಕಾಲು ಲಕ್ಷ ಮಂದಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಸಂಚರಿಸಿದ್ದಾರೆ. ಅಕ್ಟೋಬರ್‌ನಲ್ಲಿ 25,458 ಮಂದಿ ಅಂತಾರಾಷ್ಟ್ರೀಯ ಮತ್ತು 81,583 ದೇಶೀಯ ಪ್ರಯಾಣಿಕರು ಸೇರಿ ಒಟ್ಟು 1,07,041 ಮಂದಿ ಸಂಚರಿಸಿದ್ದಾರೆ.

Airport Traffic Management Increased At Mangaluru International Airport

ಕೋವಿಡ್ ಭೀತಿ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಕುಸಿದಿದ್ದು, ಅಂತಾರಾಷ್ಟ್ರೀಯ ಮತ್ತು ದೇಶೀಯ ಎರಡೂ ಸೇರಿ ಒಟ್ಟು 53,566 ಮಂದಿ ಮಾತ್ರ ಪ್ರಯಾಣಿಸಿದ್ದರು.

ಹೆಚ್ಚಳ ನಿರೀಕ್ಷೆ
ಲಾಕ್‌ಡೌನ್ ತೆರವು ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಡಿಸೆಂಬರ್‌ ತಿಂಗಳಲ್ಲಿ ಕ್ರಿಸ್‌ಮಸ್, ಹೊಸ ವರ್ಷ ಮತ್ತು ಸೌದಿ ಅರೇಬಿಯಾಕ್ಕೆ ನೇರ ಸಂಚಾರಕ್ಕಿದ್ದ ನಿರ್ಬಂಧ ತೆರವು ಹಿನ್ನೆಲೆಯಲ್ಲಿ ಪ್ರಯಾಣಿಕರ ಇನ್ನೂ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ.

ಇದೇ ವೇಳೆ ಹೊಸ ಪ್ರದೇಶಗಳಿಗೆ ವಿಮಾನ ಸಂಚಾರ ಆರಂಭಿಸುವ ನಿರೀಕ್ಷೆಗಳಿದ್ದು, ಕೋವಿಡ್ ನಿಯಮಾವಳಿ ಸಡಿಲಿಕೆ ಬಳಿಕ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಲಿದೆ. ಇಂಡಿಗೋ ವಿಮಾನ ಸಂಸ್ಥೆಯು ಡಿ.1ರಿಂದ ಮುಂಬಯಿಗೆ ಇನ್ನೊಂದು ವಿಮಾನ ನಿರ್ವಹಣೆ ಮಾಡಲಿದ್ದು, ಅದು ಜನವರಿ ಅಂತ್ಯ ತನಕ ಕಾರ್ಯಾಚರಿಸಲಿದೆ.

ತಿರುಪತಿ ವಿಮಾನ ನಿಲ್ದಾಣಕ್ಕೂ ಹೊಸ ವಿಮಾನ ಆರಂಭಿಸಲು ಹಿರಿಯ ಅಧಿಕಾರಿಗಳ ಅನುಮೋದನೆಗಾಗಿ ಕಾಯಲಾಗುತ್ತಿದೆ. ಬೆಂಗಳೂರಿಗೆ ಪ್ರತಿದಿನ ನಾಲ್ಕು, ಮುಂಬಯಿಗೆ ತಲಾ ಎರಡು, ಹೈದರಾಬಾದ್‌ ಮತ್ತು ಚೆನ್ನೈಗೆ ಒಂದು ಮತ್ತು ಶಾರ್ಜಾಕ್ಕೆ ವಿಮಾನ ಆರಂಭಿಸುವ ಪ್ರಯತ್ನ ನಡೆಸಲಾಗುತ್ತಿವೆ.

Recommended Video

ಸರಳತೆ ಮೆರೆದ ಡಿಕೆ ಶಿವಕುಮಾರ್ | Oneindia Kannada

ಹುಬ್ಬಳ್ಳಿಗೆ ವಿಮಾನ ಆರಂಭಿಸುವ ಯೋಜನೆ ಇತ್ತಾದರೂ ಕೋವಿಡ್‌ನಿಂದ ವಿಳಂಬವಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ಹೇಳುತ್ತಿವೆ. ಸ್ಪೈಸ್ ಜೆಟ್‌ನಿಂದ ದುಬೈ, ಬೆಂಗಳೂರು ಮತ್ತು ಹೈದರಾಬಾದ್‌ ಮಾತ್ರ ವಿಮಾನ ಹಾರಾಟವಿದ್ದು, ಶೀಘ್ರ ಬೆಂಗಳೂರಿಗೆ ಮತ್ತೊಂದು ವಿಮಾನ ಸೇವೆ ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

English summary
Mangaluru International Airport recorded a thousand flights managment in November month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X