ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಮೈಸೂರು ನಡುವೆ ಏರ್ ಇಂಡಿಯಾ ವಿಮಾನ ಸಂಚಾರ

|
Google Oneindia Kannada News

ಮಂಗಳೂರು, ಅಕ್ಟೋಬರ್ 16 : ಮಂಗಳೂರು ಮತ್ತು ಮೈಸೂರು ಕರ್ನಾಟಕದ ಎರಡು ಪ್ರಸಿದ್ಧ ಪ್ರವಾಸಿ ತಾಣಗಳು. ಏರ್ ಇಂಡಿಯಾ ಎರಡೂ ನಗರಗಳ ನಡುವೆ ವಿಮಾನ ಸಂಚಾರ ಆರಂಭಿಸಲು ತೀರ್ಮಾನಿಸಿದೆ.

ಅಕ್ಟೋಬರ್ 25ರಿಂದ ಮಂಗಳೂರು-ಮೈಸೂರು ನಡುವೆ ಪ್ರಾಯೋಗಿಕವಾಗಿ ವಿಮಾನ ಸಂಚಾರ ಆರಂಭವಾಗಲಿದೆ. ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ವಿಮಾನ ಸೇವೆಯನ್ನು ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಅದಾನಿ ಗ್ರೂಪ್‌ಗೆ ಮಂಗಳೂರು ವಿಮಾನ ನಿಲ್ದಾಣ; ಮುಹೂರ್ತ ಫಿಕ್ಸ್ ಅದಾನಿ ಗ್ರೂಪ್‌ಗೆ ಮಂಗಳೂರು ವಿಮಾನ ನಿಲ್ದಾಣ; ಮುಹೂರ್ತ ಫಿಕ್ಸ್

ಕರಾವಳಿ ಭಾಗದ ಮಂಗಳೂರು ಮತ್ತು ಮೈಸೂರು ನಡುವೆ ಈಗ ರಸ್ತೆ ಮತ್ತು ರೈಲು ಸಂಪರ್ಕವಿದೆ. ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಕೆಲವು ರೈಲು ಮೈಸೂರು ಮೂಲಕ ಸಂಚಾರ ನಡೆಸುತ್ತವೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ

Air India To Launch Mangaluru Mysuru Flights Soon

ಏರ್ ಇಂಡಿಯಾ ಎರಡೂ ನಗರಗಳ ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಇದರಿಂದಾಗಿ ಎರಡೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಹಾಯಕವಾಗುವ ನಿರೀಕ್ಷೆ ಇದೆ. ಉದ್ಯಮಿಗಳು ಸಹ ಎರಡೂ ನಗರದ ನಡುವೆ ವಿಮಾನ ಸಂಚಾರಕ್ಕಾಗಿ ಬೇಡಿಕೆ ಇಟ್ಟಿದ್ದರು.

ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ... ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ...

ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ವಿಮಾನವನ್ನು ಏರ್ ಇಂಡಿಯಾ ಮೈಸೂರು ಮಾರ್ಗವಾಗಿ ಹಾರಾಡ ನಡೆಸುವ ನಿರೀಕ್ಷೆ ಇದೆ. ಬೆಂಗಳೂರಿನಿಂದ ಬೆಳಗ್ಗೆ 6.50ಕ್ಕೆ ಹೊರಡುವ ವಿಮಾನ ಮೈಸೂರಿಗೆ ಹೋಗಿ 8.05ಕ್ಕೆ ಮಂಗಳೂರು ತಲುಪುವ ನಿರೀಕ್ಷೆ ಇದೆ.

English summary
Air India to launch flight service to Maysuru from Mangaluru international airport. It may help to boost tourism in both tourist place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X