ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾರದ ಏರ್ ಇಂಡಿಯಾ ಪೈಲಟ್:ಇಡೀ ರಾತ್ರಿ ವಿಮಾನದಲ್ಲೇ ಕಳೆದ ಪ್ರಯಾಣಿಕರು

|
Google Oneindia Kannada News

ಮಂಗಳೂರು, ಮಾರ್ಚ್ 28:ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಪೈಲಟ್ ಬಾರದ ಕಾರಣ ಪ್ರಯಾಣಿಕರು ರಾತ್ರಿಯಿಡೀ ವಿಮಾನದಲ್ಲೇ ಕಳೆದ ಪ್ರಸಂಗ ಬೆಳಕಿಗೆ ಬಂದಿದೆ.

ದುಬೈಯಿಂದ-ಮಂಗಳೂರಿಗೆ ನಿನ್ನೆ ರಾತ್ರಿ ಆಗಮಿಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ಬಾರದ ಕಾರಣ ಮಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ರಾತ್ರಿ ವಿಮಾನ ದಲ್ಲೇ ಕಳೆದಿದ್ದಾರೆ.

ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳುಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು

ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್ ಪ್ರೆಸ್ ನಿನ್ನೆ ರಾತ್ರಿ (ಮಾ.27 )11:40ಕ್ಕೆ ದುಬೈಯಿಂದ ಹೊರಡಬೇಕಿತ್ತು. ನಿಗದಿಯಂತೆ ಪ್ರಯಾಣಿಕರೆಲ್ಲರೂ ವಿಮಾನ ಏರಿದ ಬಳಿಕ ವಿಮಾನ ಟೆಕ್ ಆಫ್ ಗಾಗಿ ಕಾಯುತ್ತಿದ್ದರು. ಆದರೆ ನಿಗದಿತ ಸಮಯಕ್ಕೆ ಪೈಲಟ್ ಆಗಮಿಸಲೇ ಇಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆವರೆಗೂ ಪ್ರಯಾಣಿಕರು ವಿಮಾನ ದಲ್ಲೇ ಕಾಲ ಕಳೆದಿದ್ದಾರೆ.

Air India Express passengers waited for pilot all night

ಏರ್ ಇಂಡಿಯಾ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಪೈಲಟ್ ಆಗಮಿಸಿದ್ದು, ವಿಮಾನ ಮಂಗಳೂರಿನತ್ತ ಪಯಣ ಆರಂಭಿಸಿದೆ ಎಂದು ಹೇಳಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಯಾಣಿಕರಿಗೆ ತಂಗಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದೆ ವಿಮಾನದಲ್ಲೇ ಪ್ರಯಾಣಿಕರನ್ನು ಉಳಿಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಸಂಕಷ್ಟಪಡಬೇಕಾಯಿತು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

 ಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯ ಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳ ಪ್ರಕಾರ ಕೊನೆಯ ಕ್ಷಣದಲ್ಲಿ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷ ವಿಮಾನ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ ಪ್ರಯಾಣಿಕರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ.

English summary
Passengers of Air India Express flight from Dubai to Mangaluru had waited for several hours in Dubai airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X