ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದಾಗ ಕೋಮಾದಿಂದ ಎದ್ದ ವೃದ್ಧೆ!

|
Google Oneindia Kannada News

ಮಂಗಳೂರು, ಆ. 24: ವೈದ್ಯರ ಸತತ ಪ್ರಯತ್ನದ ಬಳಿಕವೂ ಅಲ್ಲಿ ವೃದ್ಧೆಯೊಬ್ಬರು ಬದುಕುಳಿಯದ ಸ್ಥಿತಿ ತಲುಪಿದ್ದರು. ಕಳೆದ ಹಲವು ದಿನಗಳಿಂದ ಕೋಮಾಕ್ಕೆ ಹೋಗಿದ್ದರು. ಕೋಮಾಗೆ ಜಾರಿದ್ದ ವೃದ್ಧೆ ಬದುಕುವ ಸಾಧ್ಯತೆ ಇಲ್ಲವೆಂದು ವೈದ್ಯರು ಹೇಳಿದ್ದರಿಂದ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆಯಲ್ಲಿದ್ದಾಗಲೇ ಕುತೂಹಲಕಾರಿ ಘಟನೆ ಸಂಭವಿಸಿದೆ.

ಜಿಲ್ಲೆಯ ಸುಳ್ಯದ ಮರ್ಕಂಜ ಗ್ರಾಮದ ಪಟ್ಟೆಮನೆಯ ಹೇಮಾವತಿ ರೈ(80) ಕೋಮಾಕ್ಕೆ ಜಾರಿ ಸಾವಿನಂಚಿನಲ್ಲಿದ್ದು, ಅವರು ಬದುಕುವುದು ಕಷ್ಟವೆಂದು ಹೇಳಿದ್ದ ವೈದ್ಯರು ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ವೃದ್ಧೆಯ ಕುಟುಂಬದವರು, ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಸಾವಿನ ಕೊನೆಗಳಿಗೆಯಲ್ಲಿ ಹೇಮಾವತಿ ಚೇತರಿಸಿಕೊಂಡಿದ್ದಾರೆ.

Age old women recovered from coma while her family and relatives are preparing for the funeral

ಮೃತದೇಹ ಅದಲು-ಬದಲು: ಕೋವಿಡ್ ಆಸ್ಪತ್ರೆಯ ಎಡವಟ್ಟಿಗೆ ಹಿಡಿಶಾಪಮೃತದೇಹ ಅದಲು-ಬದಲು: ಕೋವಿಡ್ ಆಸ್ಪತ್ರೆಯ ಎಡವಟ್ಟಿಗೆ ಹಿಡಿಶಾಪ

ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕೋಮಾಕ್ಕೆ ಜಾರಿದ್ದ ಅವರು ಆಕ್ಸಿಜನ್ ತೆಗೆದರೆ ಉಳಿಯುವುದು ಕಷ್ಟ. ಅವರನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಆಂಬುಲೆನ್ಸ್‌ನಲ್ಲಿ ಮನೆಗೆ ಕರೆತರುವಾಗ ಅವರು ಚೇತರಿಸಿಕೊಂಡಿದ್ದು ಅವರಿಗೆ ಮನೆಯಲ್ಲಿ ಆರೈಕೆ ಮಾಡಲಾಗುತ್ತಿದೆ.

English summary
80 years old age Hemavathi Rai is in a coma stage and doctor's said it was difficult to live. Hemavathi has recovered from the death while her family and relatives are preparing for the funeral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X