ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

12 ವರ್ಷಗಳ ನಂತರ ಕುಮಾರಪರ್ವತಕ್ಕೆ ಮರಳಿ ಬಂದಳು ನೀಲಿಕುರುಂಜಿ

|
Google Oneindia Kannada News

Recommended Video

12 ವರ್ಷಗಳ ನಂತರ ಪಶ್ಚಿಮ ಘಟ್ಟದಲ್ಲಿ ಅರಳಿದ ನೀಲಿ ಕುರುಂಜಿ ಹೂಗಳು | Oneindia Kannada

ಮಂಗಳೂರು, ಅಕ್ಟೋಬರ್. 24: ಪಶ್ಚಿಮ ಘಟ್ಟ ಪ್ರಕೃತಿ ಸೌಂದರ್ಯದ ಗಣಿ. ಈ ಘಟ್ಟದ ಒಡಲಲ್ಲಿ ಏನಿದೆ? ಏನಿಲ್ಲ ಎಂಬುದು ಊಹೆಗೂ ನಿಲುಕುವುದಿಲ್ಲ. ಈಗ ಚುಮು ಚುಮು ಚಳಿಯ ನಡುವೆ ಈ ಪಶ್ಚಿಮ ಘಟ್ಟವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಈಗ ಪಶ್ಚಿಮ ಘಟ್ಟದ ಸಾಲನ್ನು ನೋಡುವುದೇ ಚಂದ. ಪಶ್ಚಿಮ ಘಟ್ಟದಲ್ಲಿ 12 ವರ್ಷಕ್ಕೊಮ್ಮೆ ಅರಳುವ ನೀಲಿ ಕುರುಂಜಿ ಹೂ ಈ ವರ್ಷ ಮತ್ತೆ ಅರಳಿದೆ. ಬೆಟ್ಟಗಳೆಲ್ಲಾ ನೀಲಿ ಹೊದ್ದಂತೆ ಭಾಸವಾಗುತ್ತಿದೆ. ಇಡೀ ಪಶ್ಚಿಮಘಟ್ಟದ ವನ ಸಿರಿಯೇ ನೀಲಿಯ ಚಿತ್ತಾರ ಬಿಡಿಸಿದ ಸೀರೆ ಉಟ್ಟಂತೆ ಕಾಣುತ್ತಿದೆ.

ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ

ಎತ್ತ ಕಣ್ಣು ಹಾಯಿಸಿದರೂ ನೀಲಿಯೋ ನೀಲಿ. ದಕ್ಷಿಣ ಭಾರತದ ಇತರ ಕಡೆಗಳಲ್ಲಿ ಬಿಡುವ ಈ ಹೂಗೆ ಇಷ್ಟೊಂದು ಗಾಢವಾದ ಬಣ್ಣವಿರುವುದಿಲ್ಲ. ಆ ನೀಲ ಲತೆ ಇಲ್ಲಿ ಮಾತ್ರ ಕಂಡುಬರುತ್ತದೆ ಎಂಬುದು ಮತ್ತೊಂದು ವಿಶೇಷ.

12 ವರ್ಷಗಳಿಗೊಮ್ಮೆ ಪಶ್ಚಿಮ ಘಟ್ಟದ ಕೆಲವೇ ಭಾಗಗಳಲ್ಲಿ ಅರಳಿ ಪ್ರವಾಸಿಗರ ಕಣ್ಮನ ಸೆಳೆಯುವ ಹೂವು ನೀಲಿಕುರುಂಜಿ ಹೂ. ಈ ಬಾರಿ ಚಿಕ್ಕಮಗಳೂರು, ಮೂನ್ನಾರ್ ನಲ್ಲಿ ಅರಳಲಿದೆ ಎಂದು ಮೊದಲೇ ನಿರೀಕ್ಷೆ ಮಾಡಲಾಗಿತ್ತು.

ಮುಂಗಾರು-ಸೂರ್ಯಕಾಂತಿ ಜುಗಲ್ಬಂದಿ ನೋಡಬನ್ನಿ!ಮುಂಗಾರು-ಸೂರ್ಯಕಾಂತಿ ಜುಗಲ್ಬಂದಿ ನೋಡಬನ್ನಿ!

ನೀಲಕುಂಜಿ ಒಂದು ಜಾತಿಯ ಹೂ. ಇದು ದಕ್ಷಿಣ ಭಾರತದಲ್ಲಿರುವ ಪಶ್ಚಿಮ ಘಟ್ಟದ ಬೆಟ್ಟದಲ್ಲಿರುವ ಸೋಲಾ ಕಾಡಿನಲ್ಲಿ ಕಂಡು ಬರುತ್ತದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಯಾಂತಸ್ ಕುಂತಿಯಾನ. ನೀಲಗಿರಿ ಬೆಟ್ಟವನ್ನು ಈ ಹೆಸರಿನಲ್ಲಿ ಗುರುತಿಸಲ್ಪಡಲು ಈ ಹೂವೇ ಕಾರಣ. ಏಕೆಂದರೆ ಈ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಮುಂದೆ ಓದಿ...

 ಸಂತೋಷಕ್ಕೆ ಪಾರವಿರಲಿಲ್ಲ

ಸಂತೋಷಕ್ಕೆ ಪಾರವಿರಲಿಲ್ಲ

ಕರ್ನಾಟಕದ ಪ್ರಮುಖ ಚಾರಣ ತಾಣಗಳಲ್ಲಿ ಒಂದಾದ ಕುಮಾರಪರ್ವತದಲ್ಲಿ ಮೈದಳೆದು ಚಾರಣಿಗರ ಕಣ್ಣಿಗೆ ಹಬ್ಬವಾಗಿದೆ. ಕುಮಾರಪರ್ವತಕ್ಕೆ ಕೆಲ ದಿನಗಳ ಹಿಂದೆ ಚಾರಣ ಹೋಗಿದ್ದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಸುಕುಮಾರ್ ಕಮಿಲ ಹಾಗೂ ಅವರ ಮಿತ್ರರ ತಂಡ ಪರ್ವತ ಮೇಲೇರುವಾಗ ಈ ನೀಲಿ ಕುರುಂಜಿ ಹೂ ಅರಳಿರುವುದು ಗೋಚರಿಸಿದೆ.

ನೀಲಿ ಕುರುಂಜಿ ನೋಡೋದಕ್ಕೆ ಈ ಬಾರಿ ಮೂನ್ನಾರ್ ಗೆ ಹೋಗಬೇಕು ಎಂದು ಕೊಂಡಿದ್ದ ಸುಕುಮಾರ್ ಅವರ ಮಿತ್ರರಿಗೆ ಇದುವೇ ನೀಲಿಕುರುಂಜಿ ಎಂದು ಗೊತ್ತಾದಾಗ ಸಂತೋಷಕ್ಕೆ ಪಾರವಿರಲಿಲ್ಲ.

 ಕುಮಾರ ಪರ್ವತದ ತುದಿಯಲ್ಲಿ

ಕುಮಾರ ಪರ್ವತದ ತುದಿಯಲ್ಲಿ

2006ರಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗಗಳಲ್ಲಿ ನೀಲಿಕುರುಂಜಿ ಅರಳಿ ನಿಂತಿತ್ತು. ಈ ಹೂವು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿತ್ತು.

ಪಶ್ಚಿಮ ಘಟ್ಟಗಳಿಗಷ್ಟೇ ಸೀಮಿತವಾಗಿರುವ ಈ ಹೂವು ನಿರೀಕ್ಷೆಯಂತೆ 12 ವರ್ಷ ಬಳಿಕ ಎಂದರೆ ಈ ವರ್ಷ ಆಗಸ್ಟ್, ಸೆಪ್ಟೆಂಬರ್ ಸಮಯದಲ್ಲಿ ಮತ್ತೆ ಅರಳಬೇಕಿತ್ತು. ಆದರೆ ಚಿಕ್ಕಮಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದಿಲ್ಲ. ಬದಲಿಗೆ ಕುಮಾರ ಪರ್ವತದ ತುದಿಯಲ್ಲಿ ಅರಳಿ ನಿಂತಿದೆ.

ಡಾ.ರಾಜ್‌ಕುಮಾರ್ ನೆಟ್ಟು ನೀರೆರೆದಿದ್ದ ಪಿಂಕ್ ಫ್ಲವರ್ ಗಿಡ ಸಂರಕ್ಷಣೆಗೆ ಕ್ರಮಡಾ.ರಾಜ್‌ಕುಮಾರ್ ನೆಟ್ಟು ನೀರೆರೆದಿದ್ದ ಪಿಂಕ್ ಫ್ಲವರ್ ಗಿಡ ಸಂರಕ್ಷಣೆಗೆ ಕ್ರಮ

 ಎಲ್ಲೆಲ್ಲಿ ಅರಳುತ್ತದೆ ?

ಎಲ್ಲೆಲ್ಲಿ ಅರಳುತ್ತದೆ ?

ಕುಮಾರಪರ್ವತದ ಗಿರಿಗದ್ದೆ ಭಾಗದಿಂದ ಮೇಲಕ್ಕೆ ತೆರಳುವಾಗ ಕಲ್ಲುಚಪ್ಪರ ಕಳೆದು ಮಾರಿಹಳ್ಳ ಎಂಬ ಕಣಿವೆಯ ಕಡೆಗೆ ದೊಡ್ಡ ಪ್ರಮಾಣದಲ್ಲಿ ಈ ಹೂಗಳು ಕಂಗೊಳಿಸುತ್ತಿವೆ. ಬಳಿಕ ಕುಮಾರ ಪರ್ವತ ಶಿಖರದ ದಾರಿಯುದ್ದಕ್ಕೂ ಇಕ್ಕೆಲಗಳಲ್ಲೂ ನೀಲಿಕುರುಂಜಿ ಗೋಚರಿಸುತ್ತದೆ.

ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಬಳ್ಳಾರಿ ಜಿಲ್ಲೆಯ ಸಂಡೂರು, ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮೂನ್ನಾರ್ ಗಳಲ್ಲಿ ನೀಲಿಕುರುಂಜಿ ಅರಳುತ್ತದೆ.

 ವಯಸ್ಸನ್ನು ಲೆಕ್ಕ ಹಾಕುತ್ತಿದ್ದರು

ವಯಸ್ಸನ್ನು ಲೆಕ್ಕ ಹಾಕುತ್ತಿದ್ದರು

ಏಕ ಜೀವಚಕ್ರ ಹೂ ನೀಲಿಕುರುಂಜಿ ಹೂವಾಗಿ ಅರಳುವುದು ಅದರ ಜೀವಕಾಲದಲ್ಲಿ ಒಮ್ಮೆ ಮಾತ್ರ. ಅದು ಹೂವಾಗಿ ಒಣಗಿ ಬೀಜ ಉದುರಿ ಮತ್ತೆ ಗಿಡವಾಗಿ ಮತ್ತೆ ಹೂವಾಗುವುದಕ್ಕೆ ತೆಗೆದುಕೊಳ್ಳುವ ಅವಧಿ 12 ವರ್ಷ. ಒಮ್ಮೆ ಅರಳಿದರೆ ಸುಮಾರು 30ರಿಂದ 40 ದಿನಗಳ ಕಾಲ ಅರಳಿರುತ್ತದೆ.

ಕುಮಾರಪರ್ವತ ನೀಲಕುರುಂಜಿ ಹೂ ಚಾರಣಿಗರ ಕಣ್ಮನ ಸೆಳೆಯುತ್ತಿದ್ದು, ತನ್ನ ಸೌಂದರ್ಯದಿಂದಲೇ ಜನರನ್ನು ಆಕರ್ಷಿಸುತ್ತಿದೆ. ಹಿಂದೆ ಈ ಘಟ್ಟದ ಸಾಲಿನಲ್ಲಿ ವಾಸಿಸುತ್ತಿದ್ದ ಪಾಳ್ಯ ಆದಿವಾಸಿಗಳು ಆ ಒಂದು ಹೂವಿನ ಸಹಾಯದಿಂದ ಅವರ ವಯಸ್ಸನ್ನು ಲೆಕ್ಕ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಹೂವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟು ಗೌರವಿಸಿದ ಇಸ್ರೇಲ್ಹೂವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟು ಗೌರವಿಸಿದ ಇಸ್ರೇಲ್

English summary
Neelakurinji flower blooms in 12 years. After 12 long years Neela Kurinji flower bloom in Kumara Parvatha area of Western Ghat. The last bloom took place in 2006.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X