ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದಾನಿ ಗ್ರೂಪ್‌ಗೆ ಮಂಗಳೂರು ವಿಮಾನ ನಿಲ್ದಾಣ; ಮುಹೂರ್ತ ಫಿಕ್ಸ್

|
Google Oneindia Kannada News

ಮಂಗಳೂರು, ಅಕ್ಟೋಬರ್ 16 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣಕ್ಕೆ ಮುಹೂರ್ತ ನಿಗದಿಯಾಗಿದೆ. ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಲಾಗಿದೆ.

ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯು ಅಂತಿಮ ಘಟ್ಟ ತಲುಪಿದೆ. 69 ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ನವೆಂಬರ್ 15ರೊಳಗೆ ಖಾಸಗಿಯ ಪಾಲಾಗಲಿದೆ.

ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಅಗತ್ಯವಿರುವ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ನವೆಂಬರ್ 1ರಿಂದಲೇ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆಗೆ ನೀಡಲಾಗುತ್ತದೆ. ಪ್ರಸ್ತುತ ಹಸ್ತಾಂತರವಾದರೂ ಉದ್ಯೋಗಿಗಳು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ವಿಮಾನ ನಿಲ್ದಾಣಗಳ ಬಿಡ್‌ನಲ್ಲಿ ಅಕ್ರಮ: ಅದಾನಿ ವಿರುದ್ಧ ಸಂಸದನ ಆರೋಪ ವಿಮಾನ ನಿಲ್ದಾಣಗಳ ಬಿಡ್‌ನಲ್ಲಿ ಅಕ್ರಮ: ಅದಾನಿ ವಿರುದ್ಧ ಸಂಸದನ ಆರೋಪ

ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಬಗ್ಗೆ ಅದಾನಿ ಸಂಸ್ಥೆ ಹಲವು ತಿಂಗಳಿನಿಂದ ಅಧ್ಯಯನ ನಡೆಸಿದೆ. ನಿಲ್ದಾಣದ ನಿರ್ದೇಶಕ ಹುದ್ದೆ ಕೆಲವು ತಿಂಗಳು ಮಾತ್ರ ಇರಲಿದ್ದು, ಬಳಿಕ ಅದಾನಿ ಸಂಸ್ಥೆ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳಲು ಸಿಇಓ ನೇಮಕ ಮಾಡಲಿದೆ.

 ಪ್ರಧಾನಿ ಮೋದಿಗೆ ಹೊಸ ರಥ: ಭಾರತಕ್ಕೆ VVIP ವಿಮಾನ ಬೋಯಿಂಗ್ ಬಿ 777 ಪ್ರಧಾನಿ ಮೋದಿಗೆ ಹೊಸ ರಥ: ಭಾರತಕ್ಕೆ VVIP ವಿಮಾನ ಬೋಯಿಂಗ್ ಬಿ 777

ಒಂದು ವರ್ಷ ಜಂಟಿ ಕಾರ್ಯ ನಿರ್ವಹಣೆ

ಒಂದು ವರ್ಷ ಜಂಟಿ ಕಾರ್ಯ ನಿರ್ವಹಣೆ

ಒಂದು ವರ್ಷಗಳ ಕಾಲ ಅದಾನಿ ಸಂಸ್ಥೆ ಮತ್ತು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಜಂಟಿಯಾಗಿ ಕಾರ್ಯ ನಿರ್ವಹಣೆ ಮಾಡಲಿವೆ. ಹೂಡಿಕೆ, ಟರ್ಮಿನಲ್ ಕಟ್ಟಡದ ವಾಣಿಜ್ಯ ಚಟುವಟಿಕೆ, ಲಾಭ-ನಷ್ಟದ ವ್ಯವಹಾರ, ವಿಮಾನಯಾನ ಸಂಸ್ಥೆಗಳು ನೀಡುವ ಬಾಡಿಗೆ ಈ ವ್ಯವಹಾರಗಳನ್ನು ಅದಾನಿ ಸಂಸ್ಥೆ ನೋಡಿಕೊಳ್ಳಲಿದೆ. ಪ್ರಾಧಿಕಾರ ವಿಮಾನಗಳ ಆಗಮನ, ನಿರ್ಗಮನ ವಿಚಾರ ನೋಡಿಕೊಳ್ಳಲಿದ್ದು, ಸಂಸ್ಥೆಗೆ ಮಾರ್ಗದರ್ಶಕರಾಗಿ ಕೆಲಸ ಮಾಡಲಿದೆ.

ಹೊಸ ನೇಮಕಾತಿ ಇಲ್ಲ

ಹೊಸ ನೇಮಕಾತಿ ಇಲ್ಲ

ಅದಾನಿ ಸಂಸ್ಥೆ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳಲು ಆರಂಭಿಸಿದರೂ ಈಗಿರುವ ಉದ್ಯೋಗಿಗಳು ಹಿಂದಿನಂತೆಯೇ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಒಂದು ವರ್ಷಗಳ ಬಳಿಕ ಸಂಸ್ಥೆ ಹೊಸ ನೇಮಕಾತಿಯನ್ನು ಮಾಡಿಕೊಳ್ಳಲಿದೆ ಎಂಬ ಮಾಹಿತಿ ಇದೆ.

ಬಾಡಿಗೆಗಳು ಪರಿಷ್ಕರಣೆ ಆಗಲಿವೆ

ಬಾಡಿಗೆಗಳು ಪರಿಷ್ಕರಣೆ ಆಗಲಿವೆ

ವಿಮಾನ ನಿಲ್ದಾಣದ ವಾಣಿಜ್ಯ ಚಟುವಟಿಕೆ ಅದಾನಿ ಸಂಸ್ಥೆ ಪಾಲಾದ ಬಳಿಕ ಟರ್ಮಿನಲ್ ಕಟ್ಟಡದ ಬಾಡಿಗೆ ಪರಿಷ್ಕರಣೆ ಆಗುವ ನಿರೀಕ್ಷೆ ಇದೆ. ಪ್ರತ್ಯೇಕ ಏರ್ ಪೋರ್ಟ್ ಕಾಂಪ್ಲೆಕ್ಸ್, ಮಾಲ್ ನಿರ್ಮಾಣವಾಗಲಿದೆ. ಅದಾನಿ ಸಂಸ್ಥೆ ನಿಲ್ದಾಣದ ಅಭಿವೃದ್ಧಿಗಾಗಿ ಹೂಡಿಕೆಯನ್ನು ಸಹ ಮಾಡಲಿದೆ.

50 ವರ್ಷಗಳಿಗೆ ಗುತ್ತಿಗೆ

50 ವರ್ಷಗಳಿಗೆ ಗುತ್ತಿಗೆ

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡಲಾಗುತ್ತದೆ. 2018ರಲ್ಲಿ ಇದಕ್ಕಾಗಿ ಟೆಂಡರ್ ಆಹ್ವಾನ ಮಾಡಲಾಗಿತ್ತು. 2019ರ ಜುಲೈನಲ್ಲಿ ಕೇಂದ್ರ ಸರ್ಕಾರ ಅದಾನಿ ಸಂಸ್ಥೆಗೆ 50 ವರ್ಷಗಳ ಕಾಲ ನಿರ್ವಹಣೆಗೆ ಗುತ್ತಿಗೆ ನೀಡಿ ಆದೇಶ ಹೊರಡಿಸಿತ್ತು.

English summary
The Adani group all set to take over the maintenance of Mangaluru International Airport. Hand over process will complete before November 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X