ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಮರಳುಗಾರಿಕೆ,ಮಾದಕ ದ್ರವ್ಯ ಕಡಿವಾಣಕ್ಕೆ ಕ್ರಮ: ದ.ಕನ್ನಡ ಎಸ್‌ಪಿ

|
Google Oneindia Kannada News

ಮಂಗಳೂರು, ಜನವರಿ 02 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ, ಗಾಂಜಾ ಸಹಿತ ಮಾದಕ ದ್ರವ್ಯ ಜಾಲವು ಪೊಲೀಸ್ ಇಲಾಖೆಗೆ ಸವಾಲಾಗಿರುವ ಬಗ್ಗೆ ತಿಳಿದುಕೊಂಡಿದ್ದೇನೆ. ಅವುಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ನೂತನ ಎಸ್ ಪಿ, ಬಿ.ಎಂ.ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ಸಿಎಲ್ 5 ಪರವಾನಗಿ ಪಡೆಯುವಲ್ಲಿ ದಕ್ಷಿಣ ಕನ್ನಡ ನಂ 1ಸಿಎಲ್ 5 ಪರವಾನಗಿ ಪಡೆಯುವಲ್ಲಿ ದಕ್ಷಿಣ ಕನ್ನಡ ನಂ 1

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಅತೀ ಸೂಕ್ಷ್ಮ ಜಿಲ್ಲೆ ಎಂಬುದು ತಿಳಿದಿದೆ. ಸಮಸ್ಯೆಗಳು ಆದಾಗ ಅಥವಾ ಸವಾಲುಗಳು ಎದುರಾದಾಗ ಅವುಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಅವರು ಮರಳುಗಾರಿಕೆ, ಗಾಂಜಾ ಸಹಿತ ಮಾದಕ ದ್ರವ್ಯ ಜಾಲವು ಪೊಲೀಸ್ ಇಲಾಖೆಗೆ ಸವಾಲಾಗಿರುವ ಬಗ್ಗೆ ತಿಳಿದುಕೊಂಡಿದ್ದೇನೆ. ಅವುಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟ ಪಡಿಸಿದರು.

ಪ್ರೊ.ಭಗವಾನ್ ದೇವರನ್ನು ಶತ್ರುತ್ವದಿಂದ ಒಲಿಸಿಕೊಳ್ಳುತ್ತಿದ್ದಾರೆ: ವೀರೇಂದ್ರ ಹೆಗ್ಗಡೆಪ್ರೊ.ಭಗವಾನ್ ದೇವರನ್ನು ಶತ್ರುತ್ವದಿಂದ ಒಲಿಸಿಕೊಳ್ಳುತ್ತಿದ್ದಾರೆ: ವೀರೇಂದ್ರ ಹೆಗ್ಗಡೆ

ಸಾರ್ವಜನಿಕರಿಗೆ ಪೊಲೀಸರ ಮತ್ತು ಪೊಲೀಸ್ ಠಾಣೆಗಳ ಬಗ್ಗೆ ಭಯವಿದೆ. ಅದನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಸಂವಹನದ ಕೊರತೆ ಇದೆ. ಇದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಸಮಾಜಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲೂ ಸಾರ್ವಜನಿಕರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

Action will be definitely be taken against drug smuggling- S P Lakshmi Prasad

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಮೊದಲಿನಂತಿಲ್ಲ. ಅದನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಲಾಗಿದೆ. ಆರಂಭದ ದಿನಗಳಿಗೆ ಹೋಲಿಸಿದರೆ ಈಗ ನಕ್ಸಲ್ ಚಟುವಟಿಕೆ ಅಷ್ಟೇನು ಇಲ್ಲ. ಇದಕ್ಕೆ ಪೊಲೀಸ್ ಇಲಾಖೆ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಸಿಕ್ಕಿದೆ ಎಂದು ಅವರು ಹೇಳಿದರು.

English summary
speaking to media persons in Mangaluru Dakshina Kannada SP Lakshmi Prasad said that I am yet to study the situation about Dakshina kannada district. Action will be definitely be taken against drug smuggling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X