ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಳ ಮಹಜರು ವೇಳೆ ಪೊಲೀಸ್‌ ಮೇಲೆ ದಾಳಿ... ಆರೋಪಿ ಮುಸ್ತಾಕ್‌ ಕಾಲಿಗೆ ಗುಂಡು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್‌ 23: ನಗರದಲ್ಲಿ ಸ್ಥಳ ಮಹಜರಿನ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ನಟೋರಿಯಸ್ ಕ್ರಿಮಿನಲ್ ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರಕರಣವೊಂದರಲ್ಲಿ ಸ್ಥಳ ಮಹಜರು ಮಾಡಲು ಬಂದ ವೇಳೆ ಪೊಲೀಸ್ ಮೇಲೆ ದಾಳಿ ನಡೆಸಿರುವ ಆರೋಪಿ ಮೇಲೆ ಪೊಲೀಸರು ಗುಂಡಿಕ್ಕಿ ವಶಕ್ಕೆ ತೆಗೆದುಕೊಂಡಿದ್ದಾರೆ. ಮಿಸ್ಟಾ ಅಲಿಯಾಸ್ ಮುಸ್ತಾಕ್(26) ಗುಂಡಿನ ದಾಳಿಗೊಳಗಾದ ಆರೋಪಿ.

ಅಗಸ್ಟ್ 19ರಂದು ಮಂಗಳೂರು ನಗರ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮಿಸ್ತಾ ಹಾಗೂ ಆತನ ಗೆಳೆಯ ಆಶಿಕ್ ವಿದ್ಯಾರ್ಥಿ ಯೂಸೂಫ್ ಮಿರ್ಶಾದ್(19) ಮೊಬೈಲ್ ಕಸಿದುಕೊಂಡಿದ್ದಾನೆ‌‌. ಆದ್ದರಿಂದ ಆತನ ಮಾವ ರಮ್ಲಾನ್ ಆಸಿಫ್ ಈ ಬಗ್ಗೆ ವಿಚಾರಿಸಿದ್ದಕ್ಕೆ ಮಿಸ್ತಾ ಅಲಿಯಾಸ್ ಮುಸ್ತಾಕ್ ವಳಚ್ಚಿಲ್ ಬಳಿಯ ಬದ್ರಿಯಾ ಮದರಸಾ ಬಳಿ ಡ್ರ್ಯಾಗರ್ ನಿಂದ ಇರಿದು ಹಲ್ಲೆಗೈದಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ಸ್ಥಳ ಮಹಜರು ಮಾಡುತ್ತಿದ್ದ ವೇಳೆ ಆತ ಏಕಾಏಕಿ ಪೊಲೀಸ್ ಮೇಲೆ ದಾಳಿ ನಡೆಸಿದ್ದಾನೆ.

ಕೌಟುಂಬಿಕ ಹಣಕಾಸಿನ ಕಲಹ; ಅಜ್ಜನಿಂದಲೇ ಬಾಲಕನ ಅಪಹರಣ!ಕೌಟುಂಬಿಕ ಹಣಕಾಸಿನ ಕಲಹ; ಅಜ್ಜನಿಂದಲೇ ಬಾಲಕನ ಅಪಹರಣ!

ಈ ಹಿನ್ನೆಲೆಯಲ್ಲಿ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಮತ್ತೊಂದು ಸುತ್ತು ಮಿಸ್ ಫೈರ್ ಆಗಿದ್ದು ಒಂದು ಗುಂಡು ಆತನ ಕಾಲಿಗೆ ಬಿದ್ದಿದೆ‌. ಆರೋಪಿ ನಡೆಸಿರುವ ದಾಳಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ವಿನಾಯಕ ಭಾವಿಕಟ್ಟೆಗೆ ತರಚಿದ ಗಾಯವಾಗಿದೆ. ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಗೆ ಕೈಗೆ ಗಾಯವಾಗಿದೆ‌. ಆರೋಪಿ‌ ಮಿಸ್ಟಾ ಹಾಗೂ ಪೊಲೀಸ್ ಸಿಬ್ಬಂದಿ ಸದ್ದಾಂ ಹುಸೈನ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Accused Shot by Police while trying to Nab them in Mangaluru

ಆರೋಪಿ ಮಿಸ್ತಾ ವಿರುದ್ಧ ಗಾಂಜಾ ಸಾಗಾಟ, ಗಾಂಜಾ ಸೇವನೆ, ಕೊಲೆಯತ್ನ, ಗಲಭೆ ಸೇರಿದಂತೆ ಹಲವು ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಿಸ್ಬಾ ಮಾಡುತ್ತಿದ್ದು ಪೊಲೀಸ್ ಇಲಾಖೆ ಆರೋಪಿ ಮಿಸ್ತಾನನ್ನು ಗಡಿಪಾರು ಮಾಡುವ ಯೋಚನೆಯನ್ನೂ ಮಾಡಿತ್ತು.

ಧ್ವನಿವರ್ಧಕದಲ್ಲಿ ಆಜಾನ್: ಇತರ ಧರ್ಮೀಯರ ಭಾವನೆಗೆ ಧಕ್ಕೆ ಇಲ್ಲ ಎಂದ ಹೈಕೋರ್ಟ್ಧ್ವನಿವರ್ಧಕದಲ್ಲಿ ಆಜಾನ್: ಇತರ ಧರ್ಮೀಯರ ಭಾವನೆಗೆ ಧಕ್ಕೆ ಇಲ್ಲ ಎಂದ ಹೈಕೋರ್ಟ್

ಈ‌ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, " ಮಿಸ್ತಾ ಆಲಿಯಾಸ್ ಮುಸ್ತಾಕ್ ಮತ್ತು ಆಶಿಕ್ ಎಂಬ ಆರೋಪಿಗಳು ಅಗಸ್ಟ್ 19 ರಂದು ರಮ್ಲಾನ್ ಆಸಿಫ್ ಎಂಬುವವರ ಮೇಲೆ ಏಕಾಏಕಿ ದಾಳಿ ಮಾಡಿದ್ದರು. ಈ ಘಟನೆಯನ್ನು ರಮ್ಲಾನ್ ಆಸಿಫ್ ಗಂಭೀರ ಸ್ವರೂಪದಲ್ಲಿ ದಾಳಿಗೆ ಒಳಗಾಗಿದ್ದಾರೆ. ರಮ್ಲಾನ್ ಮೇಲೆ ಡ್ಯ್ರಾಗರ್ ನಿಂದ ಕಿವಿ, ಬಾಯಿ, ಎದೆಗೆ ಡ್ರ್ಯಾಗರ್ ನಿಂದ ಗಾಯ ಮಾಡಲಾಗಿದೆ.

ಇದೇ ಪ್ರಕರಣದ ವಾಹನ ಸೀಝ್ ಮಾಡುವ ಸಂಧರ್ಭದಲ್ಲಿ ಏಕಾಏಕಿ ಪೊಲೀಸರ‌ ಮೇಲೆ ಆರೋಪಿ ಮುಸ್ತಾಕ್ ದಾಳಿ ಮಾಡಿದ್ದು, ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಿನಾಯಕ‌ ಭಾವಿಕಟ್ಟಿ ಆತ್ಮರಕ್ಷಣೆಗಾಗಿ ಮೂರು ರೌಂಡ್ ಫೈರ್ ಮಾಡಿದ್ದಾರೆ. ಆರೋಪಿ ಮುಸ್ತಾಕ್ ಮೇಲೆ 307 ಪ್ರಕರಣ, ಕೊಲೆ, ದರೋಡೆ, ಕಳ್ಳತನ ಪ್ರಕರಣಗಳೂ ಇದೆ. ಮಲ್ಪೆ, ಕೋಣಾಜೆ ಪೊಲೀಸ್ ಠಾಣೆಯಲ್ಲೂ ಆರೋಪಿ ಮುಸ್ತಾಕ್ ಮೇಲೆ ಪ್ರಕರಣಗಳಿವೆ.

ಈತ ಅಡ್ಯಾರ್ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದು, ಗಾಂಜಾ ಸೇವಿಸಿ ಸಿಕ್ಕ ಸಿಕ್ಕವರ ಮೇಲೆ ಡ್ಯ್ರಾಗರ್ ದಾಳಿ ಮಾಡುತ್ತಿದ್ದ. ಜನ ಈತನ ಮೇಲೆ ಹೆದರಿಕೆಯಿಂದ ಪೊಲೀಸ್ ದೂರು ನೀಡುತ್ತಿರಲಿಲ್ಲ. ದ.ಕ-ಕೇರಳದ 40 ‌ಚೆಕ್ ಫೊಸ್ಟ್ ನಲ್ಲಿ ಎಂದೂ ಮಾಡದಿರುವ ತಪಾಸಣೆ ಮಾಡಲಾಗಿದೆ. ಗಾಂಜಾ ಪ್ರಕರಣಗಳ ದಾಖಲಾತಿ ಕೂಡಾ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Recommended Video

Zimbabweಯಲ್ಲಿ IPL ಗೆದ್ದ ಟೀಂಗೆ ಸಿಕ್ಕೋದು 8.5 ಲಕ್ಷ ಅಷ್ಟೇ | *Trending | OneIndia Kannada

English summary
Managaluru rural police shot at an accused who was wanted in an attempt to murder a case, as he allegedly tried to escape after attacking a policeman on Monday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X