ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಸಿಟಿ ಬಸ್ ಗಳ ಮೇಲೆ ಧೀರ ಯೋಧ ಅಭಿನಂದನ್ ಭಾವಚಿತ್ರ

|
Google Oneindia Kannada News

ಮಂಗಳೂರು, ಮಾರ್ಚ್ 12:ದಶಕಗಳ ಹಿಂದಿನ ಮಿಗ್ 21 ನಿಂದ 4ನೇ ತಲೆಮಾರಿನ ಪಾಕಿಸ್ತಾನದ ಅತ್ಯಾಧುನಿಕ ಎಫ್ 16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ದೇಶದ ಹೀರೋ ಆಗಿದ್ದಾರೆ.

ಎಫ್ 16 ವಿಮಾನವನ್ನು ಹೊಡೆದುರುಳಿಸಿ, ನಂತರ ಪಾಕ್ ಸೈನ್ಯದ ಬಂಧನದಲ್ಲಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್ ಅವರು ಮರಳಿ ಭಾರತಕ್ಕೆ ಬಂದಾಗಿದೆ. ಪಾಕ್ ನೆಲದಲ್ಲೇ ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ಪಠ್ಯ ಕೂಡ ಸಿದ್ಧವಾಗುತ್ತಿದೆ.

ಮಂಗಳೂರಲ್ಲೂ ಅಭಿನಂದನ್ ಮೀಸೆಯ ಸ್ಟೈಲ್ ಕ್ರೇಜ್ ಶುರುಮಂಗಳೂರಲ್ಲೂ ಅಭಿನಂದನ್ ಮೀಸೆಯ ಸ್ಟೈಲ್ ಕ್ರೇಜ್ ಶುರು

ಈ ವೀರ ಯೋಧ ಭಾರತದ ಯುವಜನಾಂಗದ ಹೀರೋ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಸ್ಟೇಟಸ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಅಭಿನಂದನ್ ಅವರ ಭಾವಚಿತ್ರಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಅವರ ಸ್ಟೈಲ್ ಆಗಿ ಮೀಸೆ ಮತ್ತು ಹೇರ್‌ಸ್ಟೈಲ್ ಈಗ ಟ್ರೆಂಡ್ ಆಗಿ ಮೂಡಿಬಂದಿವೆ.

Abhinandan Varthamans picture painted on city bus in Mangaluru

ಈಗ ಅಭಿನಂದನ್ ವರ್ಧಮಾನ್ ಅವರ ಮೇಲಿನ ಅಭಿಮಾನ ಮಂಗಳೂರಿನ ಸಿಟಿ ಬಸ್ ಗಳಲ್ಲಿಯೂ ವ್ಯಕ್ತವಾಗುತ್ತಿದೆ. ಹೌದು, ಮಂಗಳೂರಿನ ಸಿಟಿ ಬಸ್ ಒಂದರ ಮೇಲೆ ಅಭಿನಂದನ್ ಅವರ ಭಾವ ಚಿತ್ರ ಅನಾವರಣಗೊಂಡಿದೆ.

 ಅಭಿನಂದನ್ ಅಲೆ! ವಿಂಗ್ ಕಮಾಂಡರ್ ಮೀಸೆಗೆ ಡಿಮ್ಯಾಂಡೋ ಡಿಮ್ಯಾಂಡು! ಅಭಿನಂದನ್ ಅಲೆ! ವಿಂಗ್ ಕಮಾಂಡರ್ ಮೀಸೆಗೆ ಡಿಮ್ಯಾಂಡೋ ಡಿಮ್ಯಾಂಡು!

ಮಂಗಳಾದೇವಿ-ಕಾವೂರು ನಡುವೆ ಸಂಚರಿಸುವ 14 ಡಿ ನಂಬರಿನ ಬಸ್ ಮೇಲೆ ಅಭಿನಂದನ್ ಅವರ ಚಿತ್ರ ಬಿಡಿಸಲಾಗಿದ್ದು, ಸೆಲ್ಯೂಟ್ ಇಂಡಿಯನ್ ಆರ್ಮಿ ಎಂದು ಬರೆಯಲಾಗಿದೆ.

Abhinandan Varthamans picture painted on city bus in Mangaluru

ಈ ಬಸ್ ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ ನ ಸಿಬ್ಬಂದಿ, ದೇಶ ಕಾಯುವ ಈ ಯೋಧರಿಗೆ ನಮ್ಮದೊಂದು ಸಲಾಮ್. ಅದರಲ್ಲೂ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ದೇಶದ ನಿಜವಾದ ಹೀರೋ. ಅವರ ಬಗ್ಗೆ ಅಪಾರ ಅಭಿಮಾನ ಇದೆ. ಆದ್ದರಿಂದ ಅವರ ಸ್ಟೈಲಿಶ್ ಮೀಸೆ ಇರುವ ಚಿತ್ರವನ್ನು ಬಸ್ ಮೇಲೆ ಬಿಡಿಸಲಾಗಿದೆ ಎಂದು ತಿಳಿಸಿದ್ದಾರೆ.

English summary
Wing Commander Abhinandan Varthaman returned home as a Hero. He is trend in young hearts.Now Abhinandan's picture painted on city bus in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X