ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲೂ ಅಭಿನಂದನ್ ಮೀಸೆಯ ಸ್ಟೈಲ್ ಕ್ರೇಜ್ ಶುರು

|
Google Oneindia Kannada News

ಮಂಗಳೂರು, ಮಾರ್ಚ್ 05: ಎರಡನೇ ತಲೆಮಾರಿನ ಮಿಗ್ 21 ನಿಂದ 4 ನೇ ತಲೆಮಾರಿನ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ನಂತರ ಪಾಕ್ ಸೈನ್ಯದ ಬಂಧನದಲ್ಲಿದ್ದ ವೀರ ಯೋಧ ವಿಂಗ್‌ ಕಮಾಂಡರ್‌ ಅಭಿನಂದನ್ ಅವರು ಮರಳಿ ಭಾರತಕ್ಕೆ ಬಂದಿದ್ದಾರೆ.

ಪಾಕ್ ನೆಲದಲ್ಲೇ ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆ ಇದೀಗ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿಸಿದೆ.

ಈ ವೀರ ಯೋಧ ಭಾರತದ ಯುವಜನಾಂಗದ ಹೀರೋ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ, ಹಾಗೆಯೇ ವಾಟ್ಸಪ್ ಸ್ಟೇಟಸ್, ಡಿಪಿಯಲ್ಲಿ ಅಭಿನಂದನ್ ಅವರ ಭಾವಚಿತ್ರ ರಾರಾಜಿಸುತ್ತಿದೆ. ಇದೀಗ ಅವರ ಮೀಸೆ ಮತ್ತು ಹೇರ್‌ಸ್ಟೈಲ್ ಟ್ರೆಂಡ್ ಆಗಿದೆ.

ಅಭಿನಂದನ್ ಅಲೆ! ವಿಂಗ್ ಕಮಾಂಡರ್ ಮೀಸೆಗೆ ಡಿಮ್ಯಾಂಡೋ ಡಿಮ್ಯಾಂಡು!ಅಭಿನಂದನ್ ಅಲೆ! ವಿಂಗ್ ಕಮಾಂಡರ್ ಮೀಸೆಗೆ ಡಿಮ್ಯಾಂಡೋ ಡಿಮ್ಯಾಂಡು!

ನೆಚ್ಚಿನ ಯೋಧ ಅಭಿನಂದನ್ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಬಹುತೇಕ ಅಭಿಮಾನಿಗಳು ವೀರ ಯೋಧನ ಸ್ಟೈಲ್ ಫಾಲೋ ಮಾಡುತ್ತಿದ್ದಾರೆ. ಮೀಸೆ ಹಾಗೂ ಹೇರ್‌ಸ್ಟೈಲ್ ನಲ್ಲಿ ಅಭಿಮಾನಿಗಳು ಮಿಂಚುತ್ತಿದ್ದಾರೆ. ಮೆನ್ಸ್ ಪಾರ್ಲರ್ ಗಳಲ್ಲಿ ಅಭಿನಂದನ್ ಮೀಸೆಯ ಸ್ಟೈಲ್ ಗೆ ಬೇಡಿಕೆ ಹೆಚ್ಚಾಗಿದೆ. ಎಲ್ಲೆಲ್ಲಿ? ಹೇಗೆ? ನೀವೇ ಓದಿ..

 ಮಂಗಳೂರಿನಲ್ಲೂ ಶುರುವಾಗಿದೆ

ಮಂಗಳೂರಿನಲ್ಲೂ ಶುರುವಾಗಿದೆ

ಪಾಕಿಸ್ತಾನದ ವಶದಿಂದ ಭಾರತಕ್ಕೆ ಮರಳಿರುವ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆ ಯುವಕರಲ್ಲಿ ವಿಶೇಷ ಆಕರ್ಷಣೆ ಹುಟ್ಟಿಸಿದೆ. ಇದೀಗ ಬಹುತೇಕ ಯುವಕರು ಅಭಿನಂದನ್ ಅವರಂತೆ ಮೀಸೆ ಹೊಂದಲು ಮುಂದಾಗುತ್ತಿದ್ದಾರೆ. ಈ ಟ್ರೆಂಡ್ ಮಂಗಳೂರಿನಲ್ಲೂ ಶುರುವಾಗಿದೆ.

 ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು

 ಸಿಂಗಮ್ ಮೀಸೆಯೂ ಫೇಮಸ್

ಸಿಂಗಮ್ ಮೀಸೆಯೂ ಫೇಮಸ್

ಸ್ವಲ್ಪ ದಿನಗಳ ಹಿಂದೆ ಸೂಪರ್ ಸ್ಟಾರ್ ಸೂರ್ಯ ಅಭಿನಯಿಸಿದ್ದ ತಮಿಳು ಸಿನೆಮಾ ಸಿಂಗಮ್ ತೆರೆಗೆ ಬಂದಾಗ ಸಿಂಗಮ್ ಮೀಸೆ ಯುವಕರಲ್ಲಿ ಟ್ರೆಂಡ್ ಆಗಿ ಮೂಡಿಬಂದಿತ್ತು. ಯುವಕರು ಮಾತ್ರವಲ್ಲದೇ ಪೊಲೀಸ್ ಅಧಿಕಾರಿಗಳು ಕೂಡ ಸಿಂಗಮ್ ಮೀಸೆಗೆ ಮಾರು ಹೋಗಿದ್ದರು. ನಂತರ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದಪ್ಪ ಗಡ್ಡ ಬಿಡುವ ಕ್ರೇಜ್ ಕಾಣಿಸಿಕೊಂಡಿತ್ತು.

 ತಾಯ್ನಾಡಿಗೆ ಅಭಿನಂದನ್: ಬೆಳಿಗ್ಗೆಯಿಂದ ನಡೆದದ್ದೇನು? ಪೂರ್ಣ ವಿವರ ಇಲ್ಲಿದೆ ತಾಯ್ನಾಡಿಗೆ ಅಭಿನಂದನ್: ಬೆಳಿಗ್ಗೆಯಿಂದ ನಡೆದದ್ದೇನು? ಪೂರ್ಣ ವಿವರ ಇಲ್ಲಿದೆ

 ಕನಿಷ್ಟ 10 ಮಂದಿ ಬರುತ್ತಾರೆ

ಕನಿಷ್ಟ 10 ಮಂದಿ ಬರುತ್ತಾರೆ

ಈಗ ಏನಿದ್ದರೂ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಾದರಿಯ ಮೀಸೆಗೆ ಯುವಕರು ಫಿದಾ ಆಗಿದ್ದಾರೆ. ಈಗ ಗಡ್ಡ ಬಿಟ್ಟವರೇ ಅಭಿನಂದನ್ ಮಾದರಿಯ ಮೀಸೆ ಟ್ರಿಮ್ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಮಂಗಳೂರು ನಗರದ ಸೆಲೂನ್ ಗಳಲ್ಲಿ ಅಭಿನಂದನ್ ಮಾದರಿಯ ಮೀಸೆ ಶೇಪ್ ಮಾಡಿಸಲು ಬರುವವರ ಸಂಖ್ಯಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನಕ್ಕೆ ಕನಿಷ್ಟ 10 ಮಂದಿಯಾದರೂ ಬಂದು ಅಭಿನಂದನ್ ಮಾದರಿಯ ಮೀಸೆ ಟ್ರಿಮ್ ಮಾಡಿಸುತ್ತಿದ್ದಾರೆ.

 ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ

ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ

ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಸಲೂನ್ ಸಿಬ್ಬಂದಿ ರಮಣ. ಅಭಿನಂದನ್ ರೀತಿಯಲ್ಲಿ ಮೀಸೆ ಟ್ರಿಮ್ ಮಾಡುವಂತೆ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಇದೇ ರೀತಿ ಸಿಂಗಮ್ ಮೀಸೆ ಕ್ರೇಜ್ ಇತ್ತು. ಈಗ ಅಭಿನಂದನ್ ಅವರನ್ನು ನೋಡಿ ಈಗ ಮತ್ತೆ ಅದೇ ರೀತಿ ಮೀಸೆ ಮಾಡಿಸಿಕೊಳ್ಳಲು ಯುವಕರು ಮುಂದಾಗುತ್ತಿದ್ದಾರೆ .

English summary
Wing Commander Abhinandan Vardhaman returned home as a Hero. Now his stylish Moustache become trend in young hearts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X