ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ಪ್ರೀತಿಯ ಉಲ್ಲಾಳ್ ಬೆಳೆಸಿದ್ದು 19000 ಮರಗಳು

By Ananthanag
|
Google Oneindia Kannada News

ಮಂಗಳೂರು, ಡಿಸೆಂಬರ್ 17: ಪರಿಸರ ಸಂರಕ್ಷಣೆ ಇಂದಿನ ತುರ್ತು. ನಗರದಾದ್ಯಂತ ದಿನೇ ದಿನೇ ಮರಗಿಡಗಳನ್ನು ಕಡಿದು ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಉಸಿರಾಡಲು ಶುದ್ದವಾದ ಗಾಳಿಯ ಕೊರತೆ ಎದುರಾಗಿದೆ. ಆದರೆ ಮಂಗಳೂರಿನಲ್ಲಿ ಸಹಸ್ರಾರು ಮರಗಳನ್ನು ಬೆಳಸಿರುವ ವೃಕ್ಷ ಮಿತ್ರ ಇದ್ದಾರೆ ಇವರದ್ದು ೨೫ ವರ್ಷಗಳ ಪರಿಸರ ಸೇವೆ.

ಅವರೇ ಮಾಧವ ಉಲ್ಲಾಳ್ ಮೂಲತಃ ಪಿಗ್ಮಿ ಕೆಲಸ ಮಾಡುತ್ತಿದ್ದು ಅದರ ಜೊತೆಗೆ ತಮ್ಮ ಪ್ರಿಯ ಹವ್ಯಾಸವಾದ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಂಗಳೂರು ನಗರವೇಕೆ ಕೂಲ್ ಆಗಿದೆ ಗೊತ್ತಾ ? ಏಕೆಂದರೆ ಇವರು ಇಲ್ಲಿಯವರೆಗೆ ಸುಮಾರು 19000 ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ವಿಶೇಷವೆಂದರೆ ಇವರು ಸಸ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟಿರುವುದು. ಹೌದು ಇವರು ಸ್ಕೂಲ್, ಕಾಲೇಜು, ದೇವಸ್ಥಾನ, ಸಮಾಧಿ ಹಾಗು ನಗರದ ಮುಖ್ಯ ರಸ್ತೆಗಳಲ್ಲಿ ಸಸ್ಯಗಳನ್ನು ನೆಟ್ಟಿದ್ದಾರೆ.[ಗಿಡ ಬೆಳೆಸಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯಿರಿ!]

A pigmy collector has planted 19000 saplings in mangaluru

ಇವರ ಉದ್ದೇಶವೆಂದರೆ ಸ್ಟಾರ್ ಅಪ್ಪಲೆ ಹಣ್ಣಿನ ಸಸಿಗಳನ್ನು ಮನೆಮನೆಯಲ್ಲಿ ನೆಡುವುದು. ಈಗಾಗಲೇ ನಗರದ ಪ್ರತಿ ಮನೆಗೆ 5 ಸಸಿಗಳನ್ನು ನೀಡಲು ನಿರ್ಧರಿಸಿದ್ದಾರೆ. ಈ ರೀತಿಯಾಗಿ 12 ವಾರದೊಳಗೆ ಪ್ರತಿ ಮನೆಯಲ್ಲಿಯೂ ಸಸಿಗಳನ್ನು ನೆಡುವ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಗಿಡ ನೆಡಲು ಸುಮಾರು 45ಮನೆಗಳನ್ನು ಆರಿಸಿದ್ದಾರೆ.

A pigmy collector has planted 19000 saplings in mangaluru

ಈ ಕುರಿತು ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಮಾಧವ್ ಉಲ್ಲಾಳ್ ಈ ಸೇಬು ಸಸಿಗಳನ್ನು ನೆಟ್ಟು ನಾನು ಫಲ ಪಡೆದಿದ್ದೇನೆ. ಅಚ್ಚರಿಯ ವಿಷಯವೆಂದರೆ ಮಂಗಳೂರಿನ ವಾತಾವರಣದಲ್ಲಿ ಸೇಬು ಬೆಳೆಯಲು ಸಾಧ್ಯವೇ? ಈ ರೀತಿಯ ಯಕ್ಷ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಕಳೆದ 4 ವರ್ಷಗಳ ಹಿಂದೆ ನಗರದ ಬಂಟ್ಸ್ ಹಾಸ್ಟೆಲ್ ನ ಬಳಿ ಮನೆಯೊಂದರಲ್ಲಿ ಸೇಬು ಸಸಿ ನೆಟ್ಟಿದ್ದೆ, ಅದು ನಾಲ್ಕು ವರ್ಷದ ನಂತರ ಫಲ ನೀಡಿದೆ. ಈ ಮರ ಸುಮಾರು 150 ಫಲಗಳನ್ನು ಕಳೆದ ವರ್ಷ ನೀಡಿದೆ. ಈ ವರ್ಷವೂ ಸುಮಾರು 250 ಫಲಗಳನ್ನು ನೀಡಿದೆ .

A pigmy collector has planted 19000 saplings in mangaluru
ಉಲ್ಲಾಳ್ ರವರು ಬೆಳ್ಳಿಗೆ 11 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಪಿಗ್ಮಿ ಕೆಲಸ ಮಾಡುತ್ತಾರೆ. ಮುಂಜಾನೆಯ ಸಮಯವನ್ನು ತಮ್ಮ ಹವ್ಯಾಸವಾದ ತೋಟಗಾರಿಕೆಗೆ ಬಳಸುತ್ತಾರೆ. ನಂತರ ಅವರು ನೆಟ್ಟ ಗಿಡ ಮರಗಳಿಗೆ ನೀರುಣಿಸುತ್ತಾರೆ.
A pigmy collector has planted 19000 saplings in mangaluru

ಹೀಗೆ ಪ್ರತಿಯೊಬ್ಬರೂ ಪರಿಸರದ ಪ್ರತಿ ಪ್ರೇಮ ಹೊಂದಿರಬೇಕು. ಕೇವಲ ಒಂದು ದಿನ ಗಿಡ ನೆಟ್ಟು ಅದರ ಪಾಡಿಗೆ ಬಿಡುವುದಲ್ಲ . ನೆಟ್ಟ ಗಿಡದ ಪಾಲನೆ ಪೋಷಣೆ ಮಾಡುವುದು ಅತ್ಯಗತ್ಯ. ಈ ರೀತಿಯಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಆದ್ದರಿಂದ ಗಿಡ ನೆಡಿ ಪರಿಸರ ಉಳಿಸಿ ಎನ್ನುವ ಸಂದೇಶ ಸಾರುವಲ್ಲಿ ಉಲ್ಲಾಳ್ ಮೇಲುಗೈ ಸಾಧಿಸಿದ್ದಾರೆ.

English summary
Mr. Ullal, a pigmy collector by profession, has planted about 19,000 saplings of different varieties on the premises of schools, colleges, places of worship, burial grounds, crematoriums and on the road sides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X