ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಿ ಹಾಕದ ಆಡು ಹಾಲು ನೀಡುತ್ತಿದೆ ಕಂಡಿರಾ...!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿ. 27: ಇನ್ನೂ ಒಂದುವರೆ ವರ್ಷ ಪ್ರಾಯದ, ಮರಿಯನ್ನೇ ಹಾಕದ ಆಡೊಂದು ದಿನವೂ ಅರ್ಧ ಲೀ.ನಷ್ಟು ಹಾಲು ಕೊಡುತ್ತಿದೆ ಎಂದರೆ ನಂಬುತ್ತೀರಾ..?

ನಿಜ, ಕೊಣಜೆ ಹತ್ತಿರದ ಪಾವೂರು ಗ್ರಾಮದ ನಿವಾಸಿ ಥಾಮಸ್ ಡಿಸೋಜ ಅವರ ಮನೆಯಲ್ಲಿರುವ ಈ ಆಡು ಕಳೆದ ಒಂಭತ್ತು ತಿಂಗಳುಗಳಿಂದ ಹಾಲು ಕೊಡುತ್ತಿದೆ.

ಥಾಮಸ್ ಹಲವು ವರ್ಷಗಳಿಂದ ಆಡು ಸಾಕುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಆಡೊಂದು ಮರಿ ಹಾಕಿತ್ತು. ಈ ಮರಿ ಕೇವಲ ಆರು ತಿಂಗಳುಗಳಲ್ಲಿ ಹಾಲು ನೀಡಲು ಶುರು ಮಾಡಿತ್ತು. ಅಚ್ಚರಿಗೊಂಡ ಡಿಸೋಜ ಹಾಲನ್ನು ಮೊದಲು ನಾಯಿಗೆ ಕುಡಿಸಿದರು. ನಾಲ್ಕು ತಿಂಗಳುಗಳ ಕಾಲ ನಿರಂತರ ಹಾಲು ಕೊಟ್ಟಾಗ ಪಶು ವೈದ್ಯರನ್ನು ಭೇಟಿ ಮಾಡಿ ಸಂದೇಹ ಪರಿಹರಿಸಿಕೊಂಡರು. ಹಾರ್ಮೋನ್ ವ್ಯತ್ಯಾಸದಿಂದ ಈ ರೀತಿ ಆಗಲು ಸಾಧ್ಯವಿದೆ. ಹಾಲನ್ನು ಉಪಯೋಗಿಸಬಹುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

goat

ಈ ಆಡು ಬೆಳಗ್ಗೆ 300 ಎಂಎಲ್, ಸಂಜೆ 200 ಎಂಎಲ್ ಹಾಲು ಕೊಡುತ್ತದೆ. ಇದುವರೆಗೆ ಗಂಡಿನ ಸಂಪರ್ಕ ಆಗಿಲ್ಲ. ಏಕೆಂದರೆ ನಾನು ಆಡುಗಳನ್ನು ಮೇಯಲು ಕರೆದೊಯ್ಯುವ ಗುಡ್ಡದಲ್ಲಿ ಗಂಡು ಆಡುಗಳೇ ಇಲ್ಲ ಎಂದು ಡಿಸೋಜ ಸ್ಪಷ್ಟಪಡಿಸಿದ್ದಾರೆ. ಏನೇ ಆದರೂ ಈ ಆಡನ್ನು ಮಾರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

"ಹಾರ್ಮೋನ್ ಏರುಪೇರಿನಿಂದ ಈ ರೀತಿ ಆಗಿರಬಹುದು. ಸ್ವಲ್ಪ ಹಾಲು ಸಿಕ್ಕಿದರೆ ಬಳಸಬಾರದು. ಹೆಚ್ಚು ಹಾಲು ಸಿಕ್ಕಿದರೆ ಬಳಸಲು ತೊಂದರೆ ಇಲ್ಲ" ಎಂದು ಕೊಣಾಜೆಯ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಡಾ. ಜೀವಾನಂದ ತಿಳಿಸಿದ್ದಾರೆ.

English summary
A goat of 1.5 year old is giving milk in Pawur village near Konaje. Doctor confirms it is because hormone fluctuation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X