ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ಯಾಸ್ ಸೋರಿಕೆ, ಮಂಗ್ಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ನವೆಂಬರ್, 18: ತಪಾಸಣೆಗೆ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ನಲ್ಲಿ ಗ್ಯಾಸ್ ಸೋರಿಕೆಯಾದ ಕಾರಣ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡ ಘಟನೆ ಹೊಸಂಗಡಿ ವಾಮಂಜೂರು ಚೆಕ್ ಪೋಸ್ಟ್ ಬಳಿ ಬುಧವಾರ ನಡೆದಿದೆ.

ಟೋಟಲ್ ಗ್ರಾಸ್ ಏಜೆನ್ಸಿಯ ಟ್ಯಾಂಕರ್ ಇದಾಗಿದ್ದು ಮಂಗಳೂರಿನಿಂದ ತಿರೂರಿಗೆ ಗ್ಯಾಸ್ ಕೊಂಡೊಯ್ಯಲಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಉಪ್ಪಳದಿಂದ ತಲುಪಿದ ಅಗ್ನಿ ಶಾಮಕ ದಳ ಸೋರಿಕೆಯನ್ನು ಸರಿ ಪಡಿಸಿದರು.

ಗ್ಯಾಸ್ ಸೋರಿಕೆ ಸುದ್ದಿಯಾಗುತ್ತಿದ್ದಂತೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಕುಂಬಳೆ ಸಿ.ಐ ಸುರೇಶ್ ಬಾಬು , ಮಂಜೇಶ್ವರ ಎಸ್.ಐ ಪ್ರಮೋದ್ ನೇತೃತ್ವದ ಪೋಲೀಸ್ ತಂಡ ಸಂಚಾರವನ್ನು ಸುಗಮಗೊಳಿಸಿದರು.[ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಸ್ಫೋಟ]

A gas leakage, highway road full jam at Mangaluru

ಪೋಷಕರ ಬುದ್ದಿಮಾತಿಗೆ ಬೇಸತ್ತು ಮನೆತೊರೆದ ತೀರ್ಥಹಳ್ಳಿ ಯುವಕ

ಕಾರ್ಕಳ, ನವೆಂಬರ್, 18 : ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಮನೆ ಮಂದಿ ಹೇಳಿದ ಬುದ್ದಿ ಮಾತಿಗೆ ಬೆಲೆಕೊಡದ ಬಾಲಕನೊಬ್ಬ ಮನೆತೊರೆದು ಸಂಬಂಧಿಕರ ಮನೆಗೆ ಬಂದು ಉಳಿದುಕೊಂಡಿದ್ದಾನೆ. ಈತ ತೀರ್ಥಹಳ್ಳಿಯ ಕಮ್ಮರಡಿಯಿಂದ ಸೈಕಲ್ ಮೂಲಕ 75 ಕಿ.ಮೀ ಕ್ರಮಿಸಿ ಕಾರ್ಕಳ ಬಜಗೋಳಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾನೆ.

ಯುವರಾಜ್ (14) ಎಂಬಾತ ಮನೆ ತೊರೆದ ಬಾಲಕ. ಈತ ವಿಶ್ವತೀರ್ಥ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದನು. ಕಲಿಕೆಯಲ್ಲಿ ತೀರಾ ಹಿಂದೆ ಉಳಿದಿದ್ದ ಆತನಿಗೆ ಮನೆ ಮಂದಿ ಬುದ್ದಿ ಹೇಳುತ್ತಿದ್ದರು. ಬುದ್ದಿವಾದವನ್ನೇ ಕಿರಿಕಿರಿ ಎಂದುಕೊಂಡ ಆತ ಸೋಮವಾರ ನಸುಕಿನ ಜಾವದಲ್ಲಿ ಸೈಕಲ್ ಏರಿ ಅಲ್ಲಿಂದ ನಾಪತ್ತೆಯಾಗಿದ್ದನು.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]

ಯುವಕ ಏಕಾಏಕಿ ಕಾಣೆಯಾಗಿದ್ದರಿಂದ ಹೆದರಿದ ಮನೆಮಂದಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಆತನ ಚಹರೆ ಬಗ್ಗೆ ಮಾಹಿತಿ ಒದಗಿಸಿದ್ದರು. ಅಷ್ಟರಲ್ಲೇ ಯುವರಾಜ್ ಶಿವಮೊಗ್ಗದ ಸಂಬಂಧಿಕರೊಬ್ಬರಿಗೆ ಕಾರ್ಕಳದಲ್ಲಿ ಇರುವ ಬಗ್ಗೆ ಸಂಜೆ ನಾಲ್ಕರ ವೇಳೆಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾನೆ. ಇದರಿಂದ ಮನೆಮಂದಿ ಇದೀಗ ತಾನೇ ನಿಟ್ಟಿರುಸಿರು ಬಿಡುವಂತಾಗಿದೆ

English summary
A gas leakage, highway road full jam at Mangaluru on Wednesday, November. A 14 year boy leave home town Theertahalli and go to his relation home at Karkal, Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X