ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಗಿಡವಾಗುವ ಪರಿಸರ ಸ್ನೇಹಿ ಮಾಸ್ಕ್ ತಯಾರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 22; ಕೋವಿಡ್ ಎರಡನೇ ಅಲೆ ಅತೀ ವೇಗವಾಗಿ ಹಬ್ಬುತ್ತಿದೆ. ಮಾಸ್ಕ್ ಬೇಡಿಕೆಯೂ ಮಾರ್ಕೆಟ್ ನಲ್ಲಿ ಹೆಚ್ಚಾಗಿದೆ. ವಿವಿಧ ಕಂಪನಿಗಳು ನಾನಾ ತರಹದ ಮಾಸ್ಕ್ ತಯಾರಿಸುತ್ತಿದೆ. ಇದರ ನಡುವೆ ಮಂಗಳೂರಿನ ಯುವಕನೋರ್ವ ಪರಿಸರ ಸ್ನೇಹಿ ಮಾಸ್ಕ್ ತಯಾರು ಮಾಡುವ ಮೂಲಕ ಗಮನ ಸೆಳದಿದ್ದಾರೆ.

ಈ ವಿಶಿಷ್ಟವಾದ ಮಾಸ್ಕ್‌ನಲ್ಲಿ ಸಸ್ಯದ ಬೀಜಗಳನ್ನು ಅಳವಡಿಸಲಾಗಿದ್ದು, ಬಳಸಿ ಬಿಸಾಡಿದರೂ ಮಾಸ್ಕ್ ಗಿಡವಾಗಿ ಬೆಳೆಯುತ್ತದೆ. ಈಗಾಗಲೇ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಬಳಕೆಯೊಂದೇ ಪರಿಹಾರ ಎಂದು ಅಧ್ಯಯನಗಳು ಸಾರಿ ಹೇಳಿದೆ.

 ಮುಖ ಕಾಣದ ಹಾಗೆ ಮಾಸ್ಕ್ ಹಾಕ್ಕೊಂಡು ಸರ್ಕಾರವನ್ನು ಟೀಕಿಸಿದ ಸಿ.ಟಿ. ರವಿ ಮುಖ ಕಾಣದ ಹಾಗೆ ಮಾಸ್ಕ್ ಹಾಕ್ಕೊಂಡು ಸರ್ಕಾರವನ್ನು ಟೀಕಿಸಿದ ಸಿ.ಟಿ. ರವಿ

ಮಾಸ್ಕ್ ಬೇಡಿಕೆ ಹೆಚ್ಚಾದಂತೆಯೇ ಮಾರ್ಕೆಟ್‌ಗೆ ವಿವಿಧ ಬಣ್ಣದ, ವಿವಿಧ ಕಂಪೆನಿಯ ತರಹೇವಾರಿ ಮಾಸ್ಕ್ ಬಂದಿದೆ. ಜನ ಮಾಸ್ಕ್ ಬಳಸಿ ಬಿಸಾಡುವುದರಿಂದ ಮಣ್ಣಲ್ಲಿ ಕರಗದೆ ಮತ್ತೆ ಮಾಲಿನ್ಯವಾಗುವ ಸಾಧ್ಯತೆಗಳ ನಡುವೆ ಮಂಗಳೂರಿನ ಉತ್ಸಾಹಿ ಯುವಕ ಮಾಸ್ಕ್‌ಗೆ ನವೀನ ಸ್ಪರ್ಶ ನೀಡಿ ಗಮನ ಸೆಳೆದಿದಿದ್ದಾರೆ.

ರಾಮನವಮಿ; ಮಾಸ್ಕ್ ವಿತರಿಸಿದ ರಾಮವೇಷಧಾರಿ! ರಾಮನವಮಿ; ಮಾಸ್ಕ್ ವಿತರಿಸಿದ ರಾಮವೇಷಧಾರಿ!

ಮಂಗಳೂರು ನಗರ ಹೊರವಲಯದ ಕಿನ್ನಿಗೋಳಿ ಸಮಿಪದ ಪಕ್ಷಿಕೆರೆಯ ನಿವಾಸಿ ನಿತಿನ್ ವಾಸ್ ಈ ನೂತನ ಮಾಸ್ಕ್ ಆವಿಷ್ಕಾರದ ಜನಕ. ಹತ್ತಿಯಿಂದ ತಯಾರು ಮಾಡಿರುವ ಈ ಮಾಸ್ಕ್ ಪರಿಸರ ಸ್ನೇಹಿಯಾಗಿದೆ. ಬಿಸಾಡುವ ಹತ್ತಿಯನ್ನೇ ಬಳಸಿ ತಯಾರಿಸಿರುವ ಮಾಸ್ಕ್ ಹಲವು ವಿಶೇಷತೆಗಳನ್ನು ಹೊಂದಿದೆ.

ಶಿವಮೊಗ್ಗ; ಪೊಲೀಸರಿಂದ ವಿಭಿನ್ನವಾಗಿ ಮಾಸ್ಕ್ ಕಾರ್ಯಾಚರಣೆ ಶಿವಮೊಗ್ಗ; ಪೊಲೀಸರಿಂದ ವಿಭಿನ್ನವಾಗಿ ಮಾಸ್ಕ್ ಕಾರ್ಯಾಚರಣೆ

ತೆಳುವಾದ ಕಾಟನ್ ಬಟ್ಟೆಯ ಮಾಸ್ಕ್

ತೆಳುವಾದ ಕಾಟನ್ ಬಟ್ಟೆಯ ಮಾಸ್ಕ್

ಹತ್ತಿಯನ್ನು ನೀರಿನಲ್ಲಿ ಅದುಮಿಸಿಟ್ಟು ಪೇಪರ್ ಶೀಟ್ ಗಳನ್ನಾಗಿ ಮಾಡಿ, ಅದನ್ನು 12 ಗಂಟೆಗಳ ಕಾಲ ಒಣಗಿಸಿ ಮಾಸ್ಕ್ ತಯಾರಿಸಲಾಗುತ್ತದೆ. ಮಾಸ್ಕ್ ಹಿಂದಿನ ಭಾಗಕ್ಕೆ ತೆಳುವಾದ ಕಾಟನ್ ಬಟ್ಟೆಗಳನ್ನು ಹಾಕಲಾಗುತ್ತದೆ.

ಮಾಸ್ಕ್ ಬೆಲೆ 25 ರೂ.ಗಳು

ಮಾಸ್ಕ್ ಬೆಲೆ 25 ರೂ.ಗಳು

ಈ ಮಾಸ್ಕ್ ದಾರಗಳನ್ನೂ ಹತ್ತಿಯಿಂದಲೇ ತಯಾರು ಮಾಡಲಾಗಿದೆ. ಈ ನಡುವೆ ಮಾಸ್ಕ್ ನಲ್ಲಿ ಗಿಡಗಳ‌ಬೀಜವನ್ನೂ ಹಾಕಲಾಗುತ್ತದೆ. ಇದು ಒಮ್ಮೆ ಬಳಸಿ ಬಿಸಾಡುವ ಮಾಸ್ಕ್ ಆಗಿದ್ದು, ಬೆಲೆ 25 ರೂ.ಗಳು. ಸಂಪೂರ್ಣ ಕೈಯಿಂದಲೇ ಮಾಸ್ಕ್ ತಯಾರು ಮಾಡಲಾಗಿದೆ. ಈವರೆಗೆ 3000 ಸಾವಿರ ಮಾಸ್ಕ್ ಗಳನ್ನು ತಯಾರು ಮಾಡಲಾಗಿದ್ದು, ನಿಧಾನವಾಗಿ ಬೇಡಿಕೆಯೂ ಜಾಸ್ತಿಯಾಗುತ್ತಿದೆ.‌

ಪೇಪರ್ ಸೀಡ್ ಎಂಬ ಉದ್ಯಮ

ಪೇಪರ್ ಸೀಡ್ ಎಂಬ ಉದ್ಯಮ

ನಿತಿನ್ ವಾಸ್ ಮತ್ತು ಗೆಳೆಯರು ಪೇಪರ್ ಸೀಡ್ ಎಂಬ ಉದ್ಯಮ ಸಂಸ್ಥೆ ಹೊಂದಿದ್ದು ಲಾಕ್ ಡೌನ್‌ಗೆ ಮೊದಲು ಹಲವು ಮಂದಿಗೆ ಉದ್ಯೋಗವನ್ನು ನೀಡಿದ್ದರು‌. ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವುದು ಈ ಸಂಸ್ಥೆಯ ಉದ್ದೇಶವಾಗಿತ್ತು.

ಸೀಮಿತ ಸಂಖ್ಯೆಯ ಕಾರ್ಮಿಕರು

ಸೀಮಿತ ಸಂಖ್ಯೆಯ ಕಾರ್ಮಿಕರು

2017ರಲ್ಲಿ ಆರಂಭವಾಗಿದ್ದ ಸಂಸ್ಥೆ ಮೊದಲು ಹಳ್ಳಿಗಳ 300ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿತ್ತು. ಆದರೆ, ಲಾಕ್ ಡೌನ್ ಅವಧಿಯಲ್ಲಿ ಎಲ್ಲವೂ ನಷ್ಟವಾಗಿದ್ದು, ಈಗ ಸಿಮೀತ ಸಂಖ್ಯೆಯಲ್ಲಿ ಮಾತ್ರ ಜನರು ಕೆಲಸ ಮಾಡುತ್ತಿದ್ದಾರೆ.

English summary
Mangaluru based Paper Seed Co. has come up with a face mask that will protect people from the virus and will bloom into a plant. Nitin Vas founder of the cotton masks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X