ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ 7,897 ಶ್ರದ್ಧಾ ಕೇಂದ್ರ ಸ್ವಚ್ಛ

|
Google Oneindia Kannada News

ಮಂಗಳೂರು, ಜನವರಿ 22: ಈ ಬಾರಿ ಮಕರ ಸಂಕ್ರಾತಿಯ ಸಂದರ್ಭದಲ್ಲಿ ರಾಜ್ಯದ 7,897 ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹೊಸ ದಾಖಲೆ ಬರೆದಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಮ್ಮೂರು ನಮ್ಮ ಶ್ರದ್ಧಾಕೇಂದ್ರ ಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕನಸಿನ ಯೋಜನೆಯಾಗಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ 3 ವರ್ಷಗಳಿಂದ ನಡೆಯುತ್ತಿದೆ.

ಮೈಸೂರಿನ ಸ್ವಚ್ಛತಾ ರಾಯಭಾರಿಯಾದ ರೀಫಾ ತಸ್ಕೀನ್ ಯಾರು ?ಮೈಸೂರಿನ ಸ್ವಚ್ಛತಾ ರಾಯಭಾರಿಯಾದ ರೀಫಾ ತಸ್ಕೀನ್ ಯಾರು ?

ರಾಜ್ಯದ ಒಟ್ಟು 161 ತಾಲೂಕುಗಳ 7,897 ಧಾರ್ಮಿಕ ಕೇಂದ್ರಗಳನ್ನು ಯೋಜನೆಯಡಿಯಲ್ಲಿ ಸ್ವಚ್ಛಗೊಳಿಸಲಾಗಿದೆ . ಜನವರಿ 7ರಿಂದ 14ರವರೆಗೆ ಕಾಸರಗೋಡು ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ ಸ್ವಚ್ಛತೆ ನಡೆಸಲಾಗಿದೆ. 7,498 ಮಂದಿರ, ಬಸದಿ, 34 ಚರ್ಚ್‌, 162 ಮಸೀದಿ ಹಾಗೂ 203 ಇತರ ಶ್ರದ್ಧಾಕೇಂದ್ರ ಸೇರಿದಂತೆ ಒಟ್ಟು 7,897 ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಗಿದೆ.

7897 religious place cleaned during Maskara sankranthi

 ಹಲಸೂರು ಕೆರೆ ಸ್ವಚ್ಛ ಮಾಡಿದ ತಮಿಳುನಾಡಿನ ತಂಬಿಗಳು ಹಲಸೂರು ಕೆರೆ ಸ್ವಚ್ಛ ಮಾಡಿದ ತಮಿಳುನಾಡಿನ ತಂಬಿಗಳು

ಬೆಳ್ತಂಗಡಿ ತಾಲೂಕಿನಲ್ಲಿ ವಿನೂತನವಾಗಿ ಹೇಮಾವತಿ ವಿ.ಹೆಗ್ಗಡೆ ಅವರು ಹೆಸರಿಟ್ಟಂತೆ 115 ಸ್ವಚ್ಛತಾ ಸೇನಾನಿಗಳು 81 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Under Shree Kshethra Dharmasthala rural development scheme , 7897 religious place cleaned on the occasion of Makara snkranthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X