ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿಗೆ 7 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿ ಸಾವು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳವಾರ, ಮೇ 18: 7 ತಿಂಗಳ ಗರ್ಭಿಣಿಯಾಗಿದ್ದ ಕೋಲಾರ ಮೂಲದ ಮಹಿಳಾ ಪೊಲೀಸ್ ಅಧಿಕಾರಿ ಶಾಮಿಲಿ (24 ವರ್ಷ) ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2021ರ ಜನವರಿ 11ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಶಾಮಿಲಿ ಸೇರ್ಪಡೆಯಾಗಿದ್ದರು. ಗರ್ಭಿಣಿಯಾಗಿರುವ ಹಿನ್ನಲೆಯಲ್ಲಿ ರಜೆಯ ಮೇಲೆ ತನ್ನ ಸ್ವಂತ ಊರಾದ ಕೋಲಾರಕ್ಕೆ ತೆರಳಿದ್ದರು.

ಆದರೆ, ಊರಿನಲ್ಲಿ ಕೊರೊನಾ ಸೋಂಕು ವಕ್ಕರಿಸಿಕೊಂಡ ಹಿನ್ನಲೆಯಲ್ಲಿ ಮೇ 2 ರಂದು ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಂಗಳವಾರ ಮುಂಜಾನೆ 4.30ರ ವೇಳೆ ಶಾಮಿಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

Mangaluru: 7 Month Pregnant Woman Police Sub-Inspector Dies To Covid-19

ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಶಾಮಿಲಿಯವರು ಕೊರೊನಾ ಲಸಿಕೆಯನ್ನು ಪಡೆದಿರಲಿಲ್ಲ. ಶಾಮಿಲಿಯವರ ಆರೋಗ್ಯ ಸ್ಥಿತಿಯನ್ನು ಸ್ವತಃ ಕೋಲಾರ ಎಸ್ಪಿಯವರೇ ಗಮನಿಸುತ್ತಿದ್ದರೂ, ದುರಾದೃಷ್ಟವಶಾತ್ ಸಾವನ್ನಪ್ಪಿದ್ದಾರೆ.

ಶಾಮಿಲಿ ಅವರ ಸಾವಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಉನ್ನತ ಅಧಿಕಾರಿಗಳು, ದ.ಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನೆವಾನೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Mangaluru: 7 Month Pregnant Woman Police Sub-Inspector Dies To Covid-19

Recommended Video

Black Fungus ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ | Oneindia Kannada

ಕೋವಿಡ್ ಸೋಂಕಿಗೆ ಬಲಿಯಾದ ಪೊಲೀಸ್ ಕುಟುಂಬದ ಕಿರಿಯ ಸದಸ್ಯ, 24 ವರ್ಷದ ಪಿಎಸ್ಐ ಶಾಮಿಲಿ ಅವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ. ಅವಳ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ, ನಮ್ಮಲ್ಲಿ ಯಾರಾದರೂ ಆಗಿರಬಹುದು, ದಯವಿಟ್ಟು ಪೊಲೀಸರೊಂದಿಗೆ ಸಹಕರಿಸಿ, ಮನೆಯಲ್ಲೇ ಇರಿ ಮತ್ತು ಸುರಕ್ಷಿತವಾಗಿರಿ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.

English summary
Shamili (24 years old), a Kolar-based female Police Sub-inspector who was 7 months pregnant, has died to coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X