ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೆಸ್ ಬೋರ್ಡ್ ಮೇಲೆ 6ರ ಪೋರಿ ಶ್ರೀಯಾನಾ ಕಮಾಲ್..!

ಈಕೆಗಿನ್ನೂ ಆರು ವರ್ಷ. ಆದರೆ ಈ ಪುಟಾಣಿ ಅದಾಗಲೇ ಚೆಸ್ ಬೋರ್ಡ್ ಮೇಲೆ ಅಧಿಪತ್ಯ ಸ್ಥಾಪಿಸಿದ್ದಾಳೆ. ಇವಳೇ ಮಂಗಳೂರಿನ ಶ್ರೀಯನಾ ಮಲ್ಯ.

By Sachhidananda Acharya
|
Google Oneindia Kannada News

ಮಂಗಳೂರು, ಎಪ್ರಿಲ್ 5: ಈಕೆಗಿನ್ನೂ ಆರು ವರ್ಷ. ಆದರೆ ಈ ಪುಟಾಣಿ ಅದಾಗಲೇ ಚೆಸ್ ಬೋರ್ಡ್ ಮೇಲೆ ಅಧಿಪತ್ಯ ಸ್ಥಾಪಿಸಿದ್ದಾಳೆ. ಇವಳೇ ಮಂಗಳೂರಿನ ಶ್ರೀಯನಾ ಮಲ್ಯ.

ಬೆಂಗಳೂರಲ್ಲಿ ಎಪ್ರಿಲ್‌ 2 ರಿಂದ 4 ರವರೆಗೆ ನಡೆದ ಕರ್ನಾಟಕ ರಾಜ್ಯ ಅಂಡರ್ - 7 ಚೆಸ್ ಚಾಂಪಿಯನ್ ಶಿಪ್ 2017 ಪ್ರಶಸ್ತಿಯನ್ನು ಈಕೆ ಗೆದ್ದುಕೊಂಡಿದ್ದಾಳೆ. ಈ ಟೂರ್ನಮೆಂಟ್ ನಲ್ಲಿ 49 ಮಕ್ಕಳು ಸ್ಪರ್ಧಿಸಿದ್ದರು. ಬೆಂಗಳೂರು ರೂರಲ್ ಚೆಸ್ ಅಸೋಸಿಯೇಷನ್ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ ಈ ಚಾಂಪಿಯನ್ ಶಿಪನ್ನ ಆಯೋಜಿಸಿತ್ತು.[ಕಣ್ಣು ಕಾಣದಿದ್ದರೇನಂತೆ, ಚೆಸ್ ಬೋರ್ಡ್ ಮೇಲೆ ಇವರೇ ಚಾಂಪಿಯನ್]

6 year old Mangalorean Shriyana Mallya won state level chess championship

ಗೆಲುವಿನ ಓಟ

ಶ್ರೀಯನಾ ಮಲ್ಯ, ಸ್ಪರ್ಧೆಯ ಎಂಟು ಸುತ್ತುಗಳಲ್ಲಿ ಗೆದ್ದು ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾಳೆ.

ಈ ಮೂಲಕ ಶ್ರೀಯಾನಾ ಬರುವ ಸೆಪ್ಟೆಂಬರ್ ನಲ್ಲಿ ಆಂಧ್ರಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಅಂಡರ್ 7 ಗರ್ಲ್ಸ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನ ಪ್ರತಿನಿಧಿಸುವ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.

ಅಷ್ಟೇ ಅಲ್ಲ, ಇದೇ ಎಪ್ರಿಲ್ 21 ರಿಂದ ಮೇ 1 ರವರೆಗೆ ರೊಮಾನಿಯಾದಲ್ಲಿ ನಡೆಯಲಿರುವ ವಿಶ್ವ ಹಾಗೂ ಏಶಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾಳೆ. ಜೊತೆಗೆ ಬರುವ ಜುಲೈನಲ್ಲಿ ಚೀನಾದಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿಯೂ ಶ್ರೀಯಾನಾ ದೇಶದ ತಂಡವನ್ನ ಪ್ರತಿನಿಧಿಸಲಿದ್ದಾಳೆ. ಗೆಲುವಿನ ಹಾದಿಯಲ್ಲಿರುವ ಶ್ರೀಯಾನಾ ಮಲ್ಯಗೆ ನಾವೂ ಗುಡ್ ಲಕ್ ಹೇಳೋಣ.

English summary
Under 7 state level Chess Championship – 2017 title won by Shriyana Mallya from Mangaluru. She is just 6 year old and holds the full control on chess board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X