ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವೂರ ನದಿಯಲ್ಲಿ ಅಪಾಯಕ್ಕೆ ಸಿಲುಕಿದ ಮಕ್ಕಳು, ಅದೃಷ್ಟವಶಾತ್‌ ಪಾರು!

|
Google Oneindia Kannada News

ಮಂಗಳೂರು, ಅಕ್ಟೋಬರ್. 24: ನದಿಯಲ್ಲಿ ನೀರಾಟ ಆಡಲು ತೆರಳಿದ್ದ ವಿದ್ಯಾರ್ಥಿಗಳು ನೀರಿನ ಸೆಳೆತ ಹೆಚ್ಚಾದ ಕಾರಣ ಅಪಾಯಕ್ಕೆ ಸಿಲುಕಿದ ಘಟನೆ ಬಂಟ್ವಾಳದ ಬಳಿ ನಡೆದಿದೆ.

ಇಂದು ಬುಧವಾರ ವಾಲ್ಮಿಕಿ ಜಯಂತಿ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ ನಾವೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವೂರ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನದ ಸಮೀಪವಿರುವ ನೇತ್ರಾವತಿ ನದಿಯಲ್ಲಿ 11 ಮಂದಿ ವಿದ್ಯಾರ್ಥಿಗಳ ತಂಡ ಆಟವಾಡಲು ತೆರಳಿತ್ತು.

ಅಲೆಯ ಅಬ್ಬರಕ್ಕೆ ಸಿಕ್ಕರೂ ಬದುಕಿಬಂದ ಕಮಾಂಡರ್ ಅಭಿಲಾಶ್!ಅಲೆಯ ಅಬ್ಬರಕ್ಕೆ ಸಿಕ್ಕರೂ ಬದುಕಿಬಂದ ಕಮಾಂಡರ್ ಅಭಿಲಾಶ್!

ಆಟವಾಡಲು ತೆರಳಿದ್ದ ವೇಳೆ ಪಕ್ಕದ ಎಎಂ ಆರ್ ಡ್ಯಾಂನಿಂದ ನೀರು ಬಿಟ್ಟ ಪರಿಣಾಮ ಐವರು ವಿದ್ಯಾರ್ಥಿಗಳು ಅಪಾಯದಲ್ಲಿ ಸಿಲುಕಿದರು. ಈಜಲು ಸಾಧ್ಯವಾಗದೇ ನೀರಿನ ರಭಸಕ್ಕೆ ಬಂಡೆಕಲ್ಲಿನ ಮೇಲೆ ಸಿಲುಕಿಕೊಂಡರು.

5 students rescued in Bantwal

ಈ ವೇಳೆ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ನೀರನ್ನು ಹೊರಬಿಡಲಾಗಿದೆ. ಡ್ಯಾಂ ನಿಂದ ನೀರು ಹೊರ ಬಿಡುವ ವೇಳೆ ಸೈರನ್ ಮೊಳಗುತ್ತದೆ. ಆದರೆ ಸೈರನ್ ಶಬ್ದವನ್ನು ವಿದ್ಯಾರ್ಥಿಗಳು ಕೇಳಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.

ಸುಡುವ ಡಾಂಬರ್ ಡಬ್ಬಕ್ಕೆ ಬಿದ್ದ ನಾಯಿಗೆ ಸಿಕ್ಕಿತು ಮರುಜನ್ಮ!ಸುಡುವ ಡಾಂಬರ್ ಡಬ್ಬಕ್ಕೆ ಬಿದ್ದ ನಾಯಿಗೆ ಸಿಕ್ಕಿತು ಮರುಜನ್ಮ!

ನೀರಿನ ರಭಸ ಹಾಗೂ ಏಕಾಏಕಿ ನೀರಿನ ಮಟ್ಟ ಏರಿಕೆಯಾಗುವುದನ್ನು ಕಂಡ 11 ಮಂದಿ ವಿದ್ಯಾರ್ಥಿಗಳ ಪೈಕಿ 6 ಮಂದಿ ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ. ಉಳಿದ 5 ವಿದ್ಯಾರ್ಥಿಗಳು ಈಜಲು ಸಾಧ್ಯವಾಗದೇ ನದಿಯ ನಡುವೆ ಇರುವ ದೊಡ್ಡ ಬಂಡೆಕಲ್ಲನ್ನು ಹತ್ತಿದ್ದಾರೆ.

5 students rescued in Bantwal

13 ಮೀನುಗಾರರನ್ನ ರಕ್ಷಿಸಿದ ಮಂಗಳೂರು ಕೋಸ್ಟ್ ಗಾರ್ಡ್13 ಮೀನುಗಾರರನ್ನ ರಕ್ಷಿಸಿದ ಮಂಗಳೂರು ಕೋಸ್ಟ್ ಗಾರ್ಡ್

ನದಿಯ ಇನ್ನೊಂದು ಬದಿಯಲ್ಲಿದ್ದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಬೊಬ್ಬೆ ಹಾಕಿ ಕಿರುಚಾಡಿದ್ದಾರೆ. ಮಕ್ಕಳ ಕಿರಿಚಾಟ ಕೇಳಿದ ತಕ್ಷಣ ಇಲ್ಲಿನ ಸ್ಥಳೀಯ ಯುವಕರ ತಂಡ ಸಹಾಯಕ್ಕೆ ಧಾವಿಸಿದೆ. ಯುವಕರ ತಂಡ ನದಿಗೆ ಧುಮುಕಿ ಹಗ್ಗದ ಮೂಲಕ ಅಪಾಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದೆ‌.

English summary
5 student who trapped in middle of the Nethravathi river near Bantwal were rescued by local youth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X