ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಜಾ ಹಸ್ತಾಂತರಿಸುವಾಗ ಸಿಕ್ಕಿಬಿದ್ದ ನಾಲ್ವರ ಬಂಧನ

|
Google Oneindia Kannada News

ಮಂಗಳೂರು, ಜೂನ್ 18: ಅಂತರ ಜಿಲ್ಲಾ ಗಾಂಜಾ ಮಾರಾಟ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಉತ್ತರ ವಿಶೇಷ ಅಪರಾಧ ಪತ್ತೆ ದಳ ಪೊಲೀಸರು ಅಂತರ್ ಜಿಲ್ಲಾ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಸೇರಿದಂತೆ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರಿನಲ್ಲಿ ದನಗಳ ಅಕ್ರಮ ಸಾಗಾಟ ಪ್ರಕರಣ; ಇಬ್ಬರ ಬಂಧನಕಾರಿನಲ್ಲಿ ದನಗಳ ಅಕ್ರಮ ಸಾಗಾಟ ಪ್ರಕರಣ; ಇಬ್ಬರ ಬಂಧನ

ಬಂಧಿತರನ್ನು ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಕಿರಣ್ ಮೆಂಡನ್ (34), ಬಂಟ್ವಾಳ ದ ಆಸಿಫ್ (27), ಉಳ್ಳಾಲ ನಿವಾಸಿ ಅಬ್ದುಲ್ ರಹೀಂ (47), ಬೋಳಿಯಾರು ನಿವಾಸಿ ಹಫೀಝ್ (33) ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಪಾರ ಪ್ರಮಾಣದಲ್ಲಿ ಗಾಂಜಾ ಸೇರಿದಂತೆ 2.70 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಬಂದ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

4 arrested for selling drugs in Mangaluru

ಮಂಗಳೂರು ಮೂಲಕ ಮಾರಾಟ ಮಾಡಲು ದೊಡ್ಡ ಮೊತ್ತದ ಗಾಂಜಾವನ್ನು ಉಳ್ಳಾಲ ಮತ್ತು ಬಿ.ಸಿ.ರೋಡ್ ಕಡೆಯಿಂದ ಮೂವರು ಆರೋಪಿಗಳು ಆಟೊ ರಿಕ್ಷಾದಲ್ಲಿ ತೆಗೆದುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಅದನ್ನು ಸುರತ್ಕಲ್ ರೈಲು ನಿಲ್ದಾಣ ರಸ್ತೆಯಲ್ಲಿ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

English summary
Mangaluru police arrested 4 youths in connection to inter districts drugs selling near Surathkal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X